Police Bhavan Kalaburagi

Police Bhavan Kalaburagi

Sunday, October 30, 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಶಂಕರರಾವ ತಂದೆ ಬುದಪ್ಪ ಹುಲಿ ಸಾ|| ಪ್ಲಾಟ ನಂ 44 ಜಾಧವ ಲೇಔಟ ಬಿದ್ದಾಪೂರ ಕಾಲೋನಿ ಗುಲಬರ್ಗಾರವರು ನಾನು ದಿ:29.10.11 ರಂದು ಬೆಳಗ್ಗೆ 1000 ಗಂಟೆಗೆ ಕೊರಂಟಿ ಹನುಮಾನ ದೇವಸ್ಥಾನಕ್ಕೆ ದರ್ಶನಕ್ಕೆಂದು ಹೋಗಿದ್ದು ದೇವಸ್ಥಾನದ ಹತ್ತಿರ ಮೋಟಾರ ಸೈಕಲ್ ನಂ: ಕೆ.ಎ 38 ಜೆ 7887 ಸ್ಪೆಲೆಂಡರ್ ಅಕಿ 25000 ನೇದ್ದನ್ನು ನಿಲ್ಲಿಸಿ ದರ್ಶನ ಮಾಡಿಕೊಂಡು ಮರಳಿ ಬರುವಷ್ಟರಲ್ಲಿ ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 193/11 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಶ್ರೀ ರೇವಣಸಿದ್ದಪ್ಪ ತಂದೆ ರಾಮಚಂದ್ರ ಬಿರಾದರ ಉಃ ಮಾಡಬೂಳ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಅಂತ ಕರ್ತವ್ಯ ಸಾಃ ಹಣಮಂತ ಪೂಜಾರಿ ಇವರ ಬಾಡಿಗೆ ಮನೆ ಅಣ್ಣೆಮ್ಮ ನಗರ ಗುಲಬರ್ಗಾ ನಾವು ದಿಪಾವಳಿ ಹಬ್ಬದ ಪ್ರಯುಕ್ತ ಇದ್ದರಿಂದ ನನ್ನ ಹೆಂಡತಿ ಮಕ್ಕಳು ಊರಿಗೆ ಹೊಗಿದ್ದರು ನಾನು ನಿನ್ನೆ ದಿನಾಂಕ.28/10/2011 ರಾತ್ರಿ 09-00 ಗಂಟೆ ಸೂಮಾರಿಗೆ ಕರ್ತವ್ಯದಿಂದ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ ಅಲಮಾರಿಯ ಕೀಲಿ ಮುರಿದು ಅಲಮಾರಿಯಲ್ಲಿದ್ದ 10 ಗ್ರಾಂ ಬಂಗಾರದ ಚೈನ್ ಅ.ಕಿ. 23,000/- ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ 151/2011 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :

ಎಂ.ಬಿ.ನಗರ ಪೊಲೀಸ್ ಠಾಣೆ: ಡಾಃ ಸೈಯದ ಹುಸೇನ ಖಾದ್ರಿ ತಂದೆ ಸೈಯದ ಸುಲ್ತಾನ ಮೈನೋದ್ದಿನ ಖಾದ್ರಿ ಸಾಃ ಮಹಿಬೂಬ ನಗರ ಗುಲಬರ್ಗಾ ರವರು ನಾನು ನನ್ನ ಹಿರೋ ಹೊಂಡಾ ಮೋರಾಟ ಸೈಕಲ ನಂ. ಕೆ.ಎ 32 ಎಸ್. 2332 ನೇದ್ದನ್ನು ರಿಂಗ್ ರೋಡ ಖರ್ಗೆ ಪೆಟ್ರೋಲ್ ಪಂಪ ಹತ್ತಿರ ದಿನಾಂಕಃ 30/01/2011 ರಂದು ರಾತ್ರಿ 07:30 ಗಂಟೆಗೆ ನಿಲ್ಲಿಸಿ ನನ್ನ ಕೆಲಸ ಮುಗಿಸಿಕೊಂಡು ಮರಳಿ 9:30 ಪಿ.ಎಂ. ಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟಾರ ಸೈಕಲ್ ಕಳುವು ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕಃ 02/09/2011 ರಂದು ಎಂ.ಬಿ ನಗರ ಪೊಲೀಸ ಠಾಣೆಯಲ್ಲಿ ದ್ವಿ ಚಕ್ರ ವಾಹನಗಳು ಪತ್ತೆಯಾದ ಬಗ್ಗೆ ವಿಚಾರಿಸಲಾಗಿ ನನ್ನ ದ್ವಿಚಕ್ರ ವಾಹನ ಆರೀಪ್, ಮಹ್ಮದ ಶಫೀ ಹಾಗು ಅಸ್ಮತ ಅಲಿ ಇವರು ಕಳ್ಳತನ ಮಾಡಿರುತ್ತಾರೆ ಅಂತಾ ತಿಳಿದು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:152/2011 ಕಲಂ 379 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಶರಣಮ್ಮ ಗಂಡ ದಿ:ರೇವಣಸಿದ್ದಪ್ಪ ಪೂಜಾರಿ ಸಾ: ವೀರಭದ್ರೇಶ್ವರ ಕಾಲನಿ ಉದನೂರ ರೋಡ ಗುಲಬರ್ಗಾ ರವರು ನನ್ನ ಎಮ್ಮೆಯನ್ನು ಉದನೂರ ಕ್ರಾಸ ಹತ್ತಿರದಿಂದ ಹೊಡೆದುಕೊಂಡು ಹೊರಟಾಗ ಹೈಕೋರ್ಟ ಕಡೆಯಿಂದ ಕೆಎ 32 ಬಿ-4944 ಕಾರು ಚಾಲಕ ತನ್ನ ಕಾರನ್ನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಎಮ್ಮೆಗೆ ಜೋರಾಗಿ ಡಿಕ್ಕಿ ಹೋಡೆದನು. ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಮ್ಮ: 321/2011 ಕಲಂ. 279, 429 ಐಪಿಸಿ ಸಂ/ 187 ಐಎಂವಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


 

No comments: