Police Bhavan Kalaburagi

Police Bhavan Kalaburagi

Saturday, October 1, 2011

Gulbarga District Reported Crimes

ಅಪಘಾತ ಪ್ರಕರಣ :
ಮುಧೋಳ ಠಾಣೆ :
ವೆಂಕಟರಾವ ತಂದೆ ಗುಚ್ಚು ರಾಘವೇಂದ್ರಯ್ಯಾ ಸಾ: ಕೊತ್ತಾಪಲ್ಲಿ ತಾ:ಜಿ:ಝಾಮಾಬಾದ ಹಾಲ ವಸ್ತಿ ಕೊಂತನಪಲ್ಲಿ ತಾ:ಸೇಡಂ ರವರು ದಿನಾಂಕ 01-10-2011 ರಂದು ಬೆಳಗಿನ ಜಾವ ಸೇಡಂ ರಿಬ್ಬನಪಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪೊಲೀಸ ಇಲಾಖೆಯ ಟಾಠಾ ಸುಮೋ ನಂ ಕೆಎ-32 ಜಿ-622 ನೇದ್ದರ ಚಾಲಕನಾದ ಚಂದ್ರಾಮ ಈತನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಅಪಘಾತಪಡಿಸಿದ್ದು ಅಪಘಾತದಲ್ಲಿ ವೆಂಕಟರಾವ ಇವರು ಭಾರಿ ಗಾಯಗಳಿಂದ ಸೇಡಂ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ರಾಮುಲು ತಂದೆ ಕಾಶಪ್ಪಾ ರುದ್ರಾವರಂ ಸಾ: ಅಡಕಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ :
ಶ್ರೀ ತುಕಾರಾಮ ತಂದೆ ನಾಗೇಂದ್ರ ಬಗಾಡೆ ಸಾ: ನೃಪತುಂಗ ಕಾಲೋನಿ ಗುಲಬರ್ಗಾ ರವರು ಸಹ ಕುಟುಂಬದೊಂದಿಗೆ ಸ್ವಂತ ಊರಾದ ಚಿತ್ತಾಪೂರಕ್ಕೆ ದಸರಾ ನಿಮಿತ್ಯವಾಗಿ ದಿನಾಂಕ 28-9-2011 ರಂದು 11-30 ಎಎಮಕ್ಕೆ ಮನೆ ಕೀಲಿ ಹಾಕಿ ಹೊಗಿದ್ದು ದಿನಾಂಕ 01-10-2011 ರಂದು ಬೆಳಿಗ್ಗೆ 7-30 ಎ.ಎಮ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ಶ್ರೀಮತಿ ವೀಣಾ ಗಂಡ ದತ್ತಾತ್ರೇಯ ಸಂಗಮ ರವರು ಫೋನ ಮುಖಾಂತರ ಕಳುವಾದ ವಿಷಯ ತಿಳಿಸಿದರು ನಾವು ಗಾಭರಿಗೊಂಡು ನಮ್ಮ ಕುಟುಂಬದ ಸದಸ್ಯರೊಂದಿಗೆ ನೃಪತುಂಗ ಕಾಲೋನಿ ಬಂದು ನೋಡಿದಾಗ ಮನೆ ಬಾಗಿಲ ಕೀಲಿ ಮತ್ತು ಸೆಂಟರ ಲಾಕ ಮುರಿದು ಯಾರೋ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಬೆಡ್ ರೂಮಿನ ಸೆಂಟರ ಲಾಕ ಮುರಿದು ಅಲಮಾರಿ ಕೀಲಿ ಮುರಿದು ಅದರಲ್ಲಿ ಇದ್ದ ಬಂಗಾರದ ಆಭರಣಗಳು, ಬೆಳ್ಳಿ ಆಭರಣಗಳು ಮತ್ತು ನಗದು ಹಣ ಹಿಗೆ ಒಟ್ಟು 8,00,000/- ರೂಫಾಯಿ ಕಿಮ್ಮತ್ತಿನ ವಸ್ತಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶೋಕ ನಗರ ಠಾಣೆ :ಶ್ರೀಮತಿ. ರತ್ನಮ್ಮಾ ಸರ್ಕಾರಿ ಮೇಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯ ವಿದ್ಯಾನಗರ ಗುಲಬರ್ಗಾ ಹಾಸ್ಟೇಲ ಮೇಲ್ವಿಚಾರಕಿ ಇವರು ದಿನಾಂಕ 21-09-2011 ರಂದು ರಾತ್ರಿ ವೇಳೆಯಲ್ಲಿ ನಮ್ಮ ಹಾಸ್ಟೇಲ ಆವರಣದಲ್ಲಿದ್ದ ಬೊರವೇಲಗೆ ಅಳವಡಿಸಿದ ಹೆಚ್‌ಪಿ ಮೊಟಾರ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅದರ ಕಿಮ್ಮತ್ತು ಅಂದಾಜು 22,000/- ರೂಪಾಯಿ ಇರುತ್ತದೆ. ಇದಲ್ಲದೆ ಇದಕ್ಕಿಂತ ಮುಂಚೆಯು ಸಹ ನಮ್ಮ ಹಾಸ್ಟಲದಲ್ಲಿಂದ ದವಸ ಧಾನ್ಯ ಅಳತೆ ಮಾಡುವ ತೂಕದ ಕಲ್ಲುಗಳು ಕಳ್ಳತನ ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರತಾಬಾದ ಠಾಣೆ :ಶ್ರೀ ಮಲ್ಲಿಕಾರ್ಜುನ್ ತಂದೆ ಶಿವಶರಣಪ್ಪ ಕಲಬುರ್ಗಿ ಸಾ: ಗಂಜ ಕಾಲೊನಿ ಗುಲಬರ್ಗಾ ಇವರು ರೇವಣ ಬ್ಯಾಕ್ ಸೆಕ್ಯೂರಿಟಿ ಆಫ್ ಇಂಡಿಯಾ ಲಿಮಿಟೆಡ ಬೆಂಗಳೂರ ಗುಲಬರ್ಗಾ ಜಿಲ್ಲೆಯಲ್ಲಿ ಪೆಟ್ರೋಲಿಂಗ್ ಸುಪರವೈಜರ ಅಂತ ಕೆಲಸ ಮಾಡುತ್ತೆನೆ ಎಂದಿನಂತೆ ನಾಣು ಪೆಟ್ರೋಲಿಂಗ್ ಕರ್ತವ್ಯದ ಮೇಲೆ ದಿನಾಂಕ 30-9-2011 ರಂದು ಶಾಹಾಬಾದ ಕ್ರಾಸ್ ಟಾವರ ಎಸ್ ಹೆಚ್ 19002 ಟಾವರಕ್ಕೆ ಬೇಟಿಕೊಟ್ಟಾಗ ನಮ್ಮ ಕಾವಲುದಾರನಾದ ರಾಯಪ್ಪ ತಂದೆ ಲಕ್ಕಪ್ಪ ಹರಿಜನ ಸಾ: ಜನಿವಾರ ಇತನು ತಿಳಿಸಿದ್ದೆನೆಂದರೆ ನನಗೆ ಅಂಜಿಸಿ ಯಾರೋ ಅಪರಿಚಿತ 4 ಜನ ಕಳ್ಳರು ದಿನಾಂಕ 29-9-2011 ರ ರಾತ್ರಿ 11.30 ಕ್ಕೆ ಬ್ಯಾಟರಿ ಕಳವು ಮಾಡಿಕೊಂಡು ಹೋದ ಬಗ್ಗೆ ತಿಳಿಸಿದನು ನಾಣು ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಎಸ್ ಹೆಚ್ 19002 ಟಾವರಕ್ಕೆ ಅಳವಡಿಸಿದ ಬ್ಯಾಟರಿ ಬ್ಯಾಂಕಿನ 24 ಬ್ಯಾಟರಿಗಳು ಅ. ಕಿ. 48000/- ರೂ ಕಿಮ್ಮತ್ತಿನ ಬ್ಯಾಟರಿಗಳು ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿದ ಬಗ್ಗೆ ಕಂಡು ಬಂದಿರುತ್ತದೆ. ನಂತರ ನಾನು ಪೆಟ್ರೋಲಿಂಗ್ ಮಾಡುತ್ತ ದಿನಾಂಕ 30/9/2011 ರಂದು ಮದ್ಯಾಹ್ನ 3.15 ಕ್ಕೆ ನದ್ದಿಸಿನ್ನೂರ ಗ್ರಾಮದ ಸರ್ವೆ ನಂ 82 ದಲ್ಲಿದ್ದ ಎಸ್ ಹೆಚ್ 19003 ಇನ್ 1245671 ಇದಕ್ಕೆ ಬೇಟಿ ಕೊಟ್ಟು ಪರಿಶೀಲಿಸಿ ನೋಡಲಾಗಿ ಟಾವರಕ್ಕೆ ಅಳವಡಿಸಿದ ಬ್ಯಾಟರಿ ಬ್ಯಾಂಕ 24 ಬ್ಯಾಟರಿಗಳು ಅ. ಕಿ. 48000/- ರೂ ಕಿಮ್ಮತ್ತಿನ ಬ್ಯಾಟರಿಗಳು ಹೀಗೆ ಒಟ್ಟು 96000/- ರೂ ಬ್ಯಾಟರಿಗಳನ್ನಉ ಕಳ್ಳತನ ಮಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಮುಧೋಳ ಠಾಣೆ :
ಶ್ರೀಮತಿ ಮಾಲಾ ಗಂಡ ಕೋಂಡಿರಾಮ ಘಾಟಕೆ ಸಾ:ಕೋಲದೇವ ತಾ:ಸೇಡಂ ಮತ್ತು ನಾಜಿಬಾಯಿ ಗಂಡ ಮುನ್ಯಾ @ ಕಾಶ್ಯಾ ರಾಠೋಡ ಇಬ್ಬರು ಕುಡಿಕೊಂಡು ದಿನಾಂಕ 30-09-2011 ರಂದು ಸಾಯಂಕಾಲ ಬಸ್ಸಿನಲ್ಲಿ ಬಂದು ಬಸ್ಸಿನಿಂದ ಶಕಲಾಸಪಲ್ಲಿ ಗ್ರಾಮದಲ್ಲಿ ತಿರುಗಾಡುತ್ತಿದ್ದಾಗ ಶಕಲಾಸಪಲ್ಲಿ ಗ್ರಾಮದ 50 ರಿಂದ 60 ಜನರು ವಿ:ಣಾಕಾರಣ ಸಂಶಯಗೊಂಡು ಕೈಗಳಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗ್ರಾಮದಲ್ಲಿರುವ ದ್ಯಾವಮ್ಮಾಯಿ ಗುಡಿಯ ಕಟ್ಟೆಯ ಮೇಲೆ ಕೂಡಿ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯ ಅಪಹರಣ ಪ್ರಕರಣ :
ಮುಧೋಳ ಠಾಣೆ :
ಶ್ರೀ ಬುಗ್ಗಪ್ಪಾ ತಂದೆ ಸಾಯಪ್ಪಾ ಮುನಕನಪಲ್ಲಿ ಸಾ: ಶಕಲಾಸಪಲ್ಲಿ ಇವರ ಮೊಮ್ಮಗಳಾದ ಕುಮಾರಿ ಮಲ್ಲಮ್ಮ ತಂದೆ ಚಂದ್ರಪ್ಪಾ ವಯಾ:12 ವರ್ಷ ಇವಳು ದಿನಾಂಕ 30-09-2011 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಬಹಿರದೇಸೆಗೆ ಹೋಗಿ ಮನೆ ಕಡೆಗೆ ಬರುವಾಗ ವಿಮಲಾ ಗಂಡ ಕೊಂಡಿರಾಮ ಸಾ:ಕೋಲದೇವ ಮತ್ತು ನಾಜಿಬಾಯಿ ಗಂಡ ಮುನ್ಯಾ @ ಕಾಶ್ಯಾ ರಾಠೋಡ ಇಬ್ಬರು ಮಲ್ಲಳಿಗೆ ತಡೆದು ನಿಲ್ಲಿಸಿ ಚಾಕುವಿನಿಂದ ಹೆದರಿಸಿ ಯಾವೂದೋ ಉದ್ದೇಶದಿಂದ ಅಪಹರಿಕೊಂಡು ಹೋಗುವ ಕಾಲಕ್ಕೆ ಮಲ್ಲಮ್ಮ ಇವಳು ತಪ್ಪಿಸಿಕೊಂಡು ಓಡಿ ಮನೆಗೆ ಬಂದಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: