Police Bhavan Kalaburagi

Police Bhavan Kalaburagi

Sunday, October 9, 2011

Gulbarga District Reported Crimes

ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ :
ಶ್ರೀ ಶೇರಖಾನ ತಂದೆ ಆಲಂಖಾನ ಸಾ: ಬುಲಂದ ಪರವೇಜ ಕಾಲನಿ ದಿನಾಂಕ 08-10-2011 ರಂದು 1.ಮಹ್ಮದ ಮಶಾಕ 2.ತಾಜೋದ್ದೀನ ತಂದೆ ಶೇಖ ಮಹೇಬೂಬ 3.ಮೈನೋದ್ದೀನ ಸಾ; ಎಲ್ಲರೂ ಗೇಸುದ್ರಾಸ ಕಾಲನಿ ಗುಲಬರ್ಗಾ ರವರ ಹೊಟೇಲಿಗೆ ಚಹಾ ಕುಡಿಯಲು ಹೋದಾಗ ಚಹಾದಲ್ಲಿ ಸಕ್ಕರೆ ಕಡಿಮೆಯಾಗಿದೆ ಅಂತಾ ಕೇಳಿದ್ದಕ್ಕೆ ಆಪಾದಿತರು ಅವ್ಯಾಚ್ಛ ವಾಗಿ ಬೈದು ಅವನನ್ನು ಎದೆಯ ಮೇಲಿ ಅಂಗಿ ಹಿಡಿದು ಕೈಯಿಂದ ಮುಷ್ಠಿಮಾಡಿ ಮುಖದ ಮೇಲೆ ಹೊಡೆದಿದ್ದು ಹಾಗೂ ಬಡಿಗೆಯಿಂದ ಕೂಡ ಹೊಡೆಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ದಿನಾಂಕ 08-10-2011 ರಂದು ಸಾಯಂಕಾಲ ಶ್ರೀ ಶೇಕ ತಾಜೋದ್ದೀನ ತಂದೆ ಶೇಖ ಮಹೇಬೂಬಸಾಬ ಸಾ: ಗೇಸುದಾಸ ಕಾಲನಿ ಗುಲಬರ್ಗಾ ರವರು ಮಾವನ ಹೊಟೇಲ ಮುಂದೆ ಕುಳಿತಾಗ ಒಬ್ಬ ವ್ಯಕ್ತಿ ಬಂದು ನಮ್ಮ ಮಾವನಿಗೆ ಕರೆದು ಚಹಾದಲ್ಲಿ ಕಡಿಮೆ ಸಕ್ಕರೆ ಹಾಕುತ್ತಿ ಅಂತಾ ಅವ್ಯಾಚ್ಛವಾಗಿ ಬೈದು ಹೊಡೆಯಲು ಹೋದಾಗ ಅಲ್ಲೇ ಇದ್ದ ನನಗೆ ಹಾಗು ಇತರರು ಏಕೆ ಹೊಡೆಯುತ್ತಿ ಅಂತಾ ಕೇಳಿದ್ದಕೆ ಆವ್ಯಕ್ತಿ ಪೋನ ಮಾಡಿ ಇನ್ನೂ 1.ಶೇರಖಾನ ತಂದೆ. ಆಲಮಖಾನ ಸಾ: ಗುಲಬರ್ಗಾ 2.ನಯುಮಖಾನ ತಂದೆ ಆಲಮಖಾನ ಸಾ: ಗುಲಬರ್ಗಾ 3.ಇಮ್ರಾನಖಾನ ತಂದೆ ಆಲಮಖಾನ ಸಾ: ಗುಲಬರ್ಗಾ 4.ಅಮ್ಜದಖಾನ ತಂದೆ ಆಲಮಖಾನ ಸಾ: ಗುಲಬರ್ಗಾ ಹಾಗೂ ಇನ್ನೂ 3 ಜನರು ಹೆಸರು ವಿಳಾಸ ಗೊತ್ತಿಲ್ಲಾ ಕರೆಯಿಸಿದ್ದು ಅವರುಗಳ ಬಂದವರೆ ನಮ್ಮ ಶೇರಖಾನ ಜೊತೆ ಜಗಳ ತೆಗೆಯುತ್ತೀರಿ ಅಂತಾ ಬೈದು ತಮ್ಮ ಹತ್ತಿರ ಇದ್ದ ಚಾಕು ಹಾಗು ಬಡಿಗೆ ಹಾಗೂ ಕಲ್ಲಿನಿಂದ ನಮ್ಮ ಆತನ ಅಣ್ಣನಿಗೆ ಹೊಡೆದು ರಕ್ತಗಾಯ ಹಾಗೂ ಬಾರಿಗಾಯ ಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಕಾರಿ ಸ್ವತ್ತನ್ನು ಹಾನಿಪಡಿಸಿದ ಪ್ರಕರಣ :
ಗ್ರಾಮೀಣ ಠಾಣೆ :
ದಿನಾಂಕ 29-09-2011 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಉಪಳಾಂವ ಗ್ರಾಮದ ಸೀಮಾಂತರದಲ್ಲಿ ಬರುವ ಪರಿಸರ ನಿರ್ಸಗ ಧಾಮದಲ್ಲಿ ಗ್ರಾನೇಟ ಕಲ್ಲುಗಳನ್ನು ಹಾಗೂ ವನ್ಯ ಜೀವಿಗಳ ಪುತಳಿಗಳನ್ನು ಸಿಮೇಂಟ ಬೆಂಚ ಇತ್ಯಾದಿ ವಸ್ತುಗಳನ್ನು ಒಡೆದು ಛಿದ್ರಗೊಳಿಸಿ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿರುತ್ತಾರೆ. ಕೃಷ್ಣಾಬಾಯಿ ಗಂಡ ಬಿಂಗಾಚಾರ್ಯಿ ಇನ್ನೂ ಸಂಗಡ 22 ಜನರು ಸಾ: ಎಲ್ಲರೂ ಉಪಳಾಂವ ಗ್ರಾಮ ಇವರ ಮೇಲೆ ಸಂಶಯವಿರುತ್ತದೆ. ಅಂತಾ ಶ್ರೀ ಮಹ್ಮದ ಮುನಿರ ಅಹ್ಮದ ಉಪ ವಲಯ ಅರಣ್ಯಾಧಿಕಾರಿಗಳು ಪ್ರಾದೇಶಿಕ ಅರಣ್ಯ ವಲಯ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments: