ಗುಲಬರ್ಗಾ ಗ್ರಾಮೀಣ ಠಾಣೆ; ಶ್ರೀ ಅಶೋಕ ತಂದೆ ಶರಣಪ್ಪ ನ್ಯಾಮನ ಉ: ಕೂಲಿ ಕೆಲಸ ಸಾ: ಸುಂಟನೂರ ಗ್ರಾಮ ತಾ:ಆಳಂದ ರವರು ನಾವು ಕೆ.ಎಚ.ಬಿ ಕಾಲೋನಿ ಹಿಂದುಗಡೆ ಇರುವ ಈಟ್ಟಂಗಿ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ದಿನಾಂಕ 22-11-11 ರಂದು ಸಂಜೆ 6-00 ಗಂಟೆ ಸುಮಾರಿಗೆ ನನ್ನ ಹೆಂಡತಿಯಾದ ಇಂದುಬಾಯಿ ಇವಳು ಈಟ್ಟಂಗಿ ತಯಾರಿಸಲು ಒಂದೇ ಕಡೆ ಮಣ್ಣು ಹಾಕಿದ್ದು ಮಣ್ಣು ಕಲಿಸಲು ನೀರಿನ ಟ್ಯಾಂಕನಿಂದ ಬಕೇಟ ಮುಖಾಂತರವಾಗಿ 4-5 ಸಲ ನೀರು ತಂದು ಹಾಕುತ್ತಿದ್ದು ಇನ್ನೂ ನೀರು ತರಲು ನೀರಿನ ಟ್ಯಾಂಕ ಹತ್ತಿರ ಹೋಗಿ ನಳ ಚಾಲು ಮಾಡಿ ನೀರು ತುಂಬುತ್ತಿದ್ದಾಗ ಒಮ್ಮಿಂದ ಒಮ್ಮೇಲೆ ನೀರು ತುಂಬಿದ ಟ್ಯಾಂಕಿನ ಇಟ್ಟಂಗಿ ಗೋಡೆ ಮೈಮೇಲೆ ಬಿದ್ದಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಮತ್ತು ನೀರಿನ ಟ್ಯಾಂಕ ಹತ್ತಿರ ನಿಂತ್ತಿದ್ದ ಸಂತೋಷ ವ:10 ವರ್ಷ ಮತ್ತು ಗೈಬಣ್ಣಾ ವ:5 ವರ್ಷ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತೇವೆ. ನೀರಿನ ಟ್ಯಾಂಕ ತಳಪಾಯ ಹಾಕದೇ ಸಿಮೆಂಟ ಕಾಂಕರೇಟ, ಕಾಲಂ ಹಾಕದೇ ನೀರಿನ ಟ್ಯಾಂಕ ಕಟ್ಟದೇ ಕೂಲಿ ಕೆಲಸ ಮಾಡುವ ಜನರ ಸುರಕ್ಷತೆ ಕುರಿತು ಸ್ಥಳದಲ್ಲಿ ಹಾಜರ ಇರದೇ ಮತ್ತು ಯಾವುದೇ ಮುಂಜಾಗ್ರಕತೆ ಕ್ರಮ ಕೈ ಕೊಳ್ಳದೇ ಇದ್ದ ಕಾರಣ ಈಟ್ಟಂಗಿ ಭಟ್ಟಿ ಮಾಲಿಕನಾದ ಹಕೀಮ ಸೇಠ, ಮತ್ತು ಇಮ್ರಾನ ಸಾ: ಇಬ್ಬರು ಎಂ.ಎಸ್.ಕೆ. ಮಿಲ್ಲ ಗುಲಬರ್ಗಾ ರವರ ಮೇಲೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 346/2011 ಕಲಂ 304 (ಎ) ಐಪಿಸಿ ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳಲಾಗಿದೆ
No comments:
Post a Comment