Police Bhavan Kalaburagi

Police Bhavan Kalaburagi

Tuesday, November 1, 2011

GULBARGA DIST REPORTED CRIMES

ಮುಂಜಾಗ್ರತೆ ಕ್ರಮ :
ಎಂ.ಬಿ.ನಗರ ಪೊಲೀಸ್ ಠಾಣೆ
: ಶ್ರೀ ಶ್ರೀನಿವಾಸರೆಡ್ಡಿ ಸಿ.ಪಿ.ಸಿ ರವರು ದಿನಾಂಕಃ 31/10/2011 ರಂದು ಬೆಳಗ್ಗೆ 08:00 ಗಂಟೆಯಿಂದ ಮದ್ಯಾಹ್ನ 02:00 ಗಂಟೆಯವರೆಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಬಸವೇಶ್ವರ ಆಸ್ಪತ್ರೆಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿದ್ದು ಸದರಿಯವನನನ್ನು ವಿಚಾರಿಸಲು ಸಂತೋಷ ತಂದೆ ಮರೆಪ್ಪಾ ಸಾಃ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಪುನಃ ವಿಚಾರಿಸಲು ಅವನು ತನ್ನ ನಿಜವಾದ ಹೆಸರು ಆಜಾದ ತಂದೆ ರವಿ ಕಾಂಬಳೆ ವಯಃ 22 ವರ್ಷ ಉಃ ಬೇಕಾರ ಸಾಃ ಬಾಪು ನಗರ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನನ್ನು ಯಾಕೆ ಮುಖ ತಪ್ಪಿಸಿಕೊಂಡು ಓಡುತ್ತಿರುವಿ ಅಂತಾ ಕೇಳಿದಕ್ಕೆ ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಆತನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 154/2011 ಕಲಂ. 109 ಸಿ.ಆರ್.ಪಿಸಿ. ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀ ಶರಣಬಸಪ್ಪ ತಂದೆ ರಾಜಣ್ಣ ಸೀರ ಸಾ|| ಚಿಂಚನಸೂರ ರವರ ( ದೂರು ಹೇಳಿಕೆ ಮತ್ತು ವರದಿಯನ್ನು ಶ್ರೀ ಹೈದರ ಖಾನ ಪಿ.ಸಿ ಹೆಚ್ಚುವರಿ ಸಂಚಾರಿ ಠಾಣೆ ಗುಲಬರ್ಗಾ ರವರು ಹಾಜರ ಪಡಿಸಿದ್ದರ ಸಾರಾಂಶವೆನಂದರೆ) ನಾನು ದಿನಾಂಕ:29/10/2011 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಆದಿತ್ಯಾ ಹೊಟೇಲ ಹತ್ತಿರ ಅಕ್ಕನ ಮನೆಗೆ ನಡೆದುಕೊಂಡು ಹೊಗುತ್ತಿರುವಾಗ ತೋಳನವಾಡಿ ಗ್ರಾಮದ ಬಸವರಾಜ ಮಾಮಾ, ಸಿದ್ದಾರಾಮ, ಶಿವಾನಂದ ಬುಟ್ಟಿ, ಶರಣಬಸಪ್ಪ ಬುಟ್ಟಿ, ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಮಗನೆ ಆರು ತಿಂಗಳ ಹಿಂದೆ ನಮ್ಮ ಮೇಲೆ ಕೇಸು ಮಾಡಿದ್ದಿ ಆ ಕೇಸನ್ನು ವಾಪಸ ತಗೆದುಕೊ ಅಂತಾ ನೀನಗೆ ಎಷ್ಟು ಸಾರಿ ಹೇಳಿದರು ನೀನು ಕೇಸ ವಾಪಸ ತಗೆದುಕೊಂಡಿರುವದಿಲ್ಲಾ ಅಂತಾ ಅಂದವರೆ ಹೊಡೆ ಬಡೆ ಮಾಡಿರುತ್ತಾರೆ ನಾನು ಬೇಹುಸ ಆಗಿ ಬಿದ್ದಾಗ ಯಾರೋ ನನಗೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಂತರ ನನ್ನನ್ನೂ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಗಂಗಾ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು ಸದ್ಯ ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದನೆ. ನನಗೆ ಹೊಡೆ ಬಡೆ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:205/2011 ಕಲಂ: 341, 323, 324,114, 504, 506, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ನಿಬಾರಾನ ತಂದೆ ಅಸಾಳಿ ಮೋದಿ ವರ್ಷ ಉ: ಸೆಂಟ್ರಿಂಗ ಕೆಲಸ ಸಾ: ಗೋವಿಂದಪುರ ಜಿ||ಪುರಲಿಯಾ ರಾಜ್ಯ || ಪಶ್ಚಿಮ ಬಂಗಾಳ ರಾಜ್ಯ ರವರು ನಾನು ಮಹ್ಮದ ಸಾಬ ಅಟೋರೀಕ್ಷಾ ಕೆಎ 32 ಎ 9220 ನೇದ್ದವನ ಅಟೋದಲ್ಲಿ ಕುಳಿತುಕೊಂಡು ಹೊರಟಾಗ ಮಿನಿವಿದಾನ ಸೌಧ 2 ನೇ ಗೇಟಿನ ಎದುರು ರೋಡಿನ ಮೇಲೆ ಅಟೊ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಟೋರಿಕ್ಷಾ ಪಲ್ಟಿ ಮಾಡಿದ್ದು ಅಟೋ ರೀಕ್ಷಾದಲ್ಲಿ ಕುಳಿತಿದ್ದ ನನಗೆ ಭಾರಿಗಾಯ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 139/2011 ಕಲಂ 279, 338 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

No comments: