Police Bhavan Kalaburagi

Police Bhavan Kalaburagi

Friday, November 4, 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ಸೇಡಂ ಪೊಲೀಸ ಠಾಣೆ: ಶ್ರೀ ನರಸಿಂಹರೆಡ್ಡಿ ತಂದೆ ಲಕ್ಷಮಾರೆಡ್ಡಿ ಸಾ||ಹೈಯಾಳ ರವರು ಸೇಡಂ ರವರು ನಮ್ಮ ಟ್ರಾಕ್ಟರ್ ನಂ. ಕೆ.ಎ.32.ಟಿ.2891, 2892 ನೇದ್ದು ಚಾಲಕನಾದ ವೆಂಕಟಿ ತಂದೆ ಪೆಂಟಪ್ಪ ತಳವಾರ ಸಾ|| ಹೈಯಾಳ ಗ್ರಾಮ ತಾ|| ಸೇಡಂ. ಈತನು ತೆಗೆದುಕೊಂಡು ಸೇಡಂ ಪಟ್ಟಣಕ್ಕೆ ಹೋಗಿ ಡಿಸೆಲ್ ಹಾಕಿಕೊಂಡು ಬರುತ್ತೇನೆ ಅಂತ ಹೋಗಿದ್ದು ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಗೆ ಡಿಸೆಲ್ ತುಂಬಿಕೊಂಡು ಅಗ್ನಾಳ ಆಸ್ಪತ್ರೆಯ ಮುಂದುಗಡೆ ಹುಣಸಿ ಗಿಡದ ಕೆಳಗೆ ನಿಲ್ಲಿಸಿ ಸಕ್ಕರೆ ತರಲು ಬಸ್ ನಿಲ್ದಾಣ ಹತ್ತಿರ ಬಂದು ಸಕ್ಕರೆ ತೆಗೆದುಕೊಂಡು ಮರಳಿ ಹೋಗಿ ನೋಡುವಷ್ಟರಲ್ಲಿ ಸ್ಥಳದಲ್ಲಿ ಟ್ರಾಕ್ಟರ್ ಇರಲಿಲ್ಲ ಅಕ್ಕಪಕ್ಕದ ಚಹಾದ ಅಂಗಡಿಯವರಿಗೆ ಕೇಳಲಾಗಿ ದೋತರ ಉಟ್ಟುಕೊಂಡಿರುವ ಒಬ್ಬ ವ್ಯಕ್ತಿ ಟ್ರಾಕ್ಟರ್ ಚಾಲು ಮಾಡಿಕೊಂಡು ಪಂಪಿನ ಕಡೆ ಹೋಗಿರುತ್ತಾನೆ ಅಂತ ತಿಳಿಸಿರುತ್ತಾರೆ ಟ್ರಾಕ್ಟರ್ ನಂ.ಕೆ.ಎ32.ಟಿ.2891 ಮತ್ತು ಟ್ರಾಲಿ ನಂ.2892 ಅದರ ಇಂಜನ್ ನಂ.ಎಸ್.ಇ.ಬಿ.4321 ಚೆಸ್ಸಿ ನಂ.ಎಸ್.ಇ.ಬಿ.4321 ಕೆಂಪು ಬಣ್ಣ 2001 ನೇ ಇಸ್ವಿಯ ಮಾದರಿ 40 ಹೆಚ್.ಪಿ, ಕ್ಷಮತೆವುಳ್ಳದ್ದು ಅಂ.ಕಿ '3 ' ಲಕ್ಷ ರೂಪಾಯಿ ಕಿಮ್ಮತ್ತಿನ ಟ್ರಾಕ್ಟರ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.194/2011 ಕಲಂ. 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಸಂಚಾರಿ ಪೊಲೀಸ್ ಠಾಣೆ :
ಮಹೇಶ ತಂದೆ ನಾರಾಯಣ ಚವ್ಹಾಣ ಮಹೇಶ ತಂದೆ ನಾರಾಯಣ ಚವ್ಹಾಣಗುಲಬರ್ಗಾ ರವರು ನಾನು ದಿನಾಂಕ: 28-10-2011 ರಂದು ಸಾಯಂಕಾಲ್ 7-30 ಗಂಟೆಯ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ಬರುವವಾಗ ಲಾಹೋಟಿ ಶೋ ರೂಮ್ ಮುಂದಿನ ರೋಡಿನಲ್ಲಿ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ 32 ಯು 7701 ನೇದ್ದರ ಸವಾರನು ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ ಗಾಯಗೊಳಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 67/2011 ಕಲಂ 279, 337, ಐಪಿಸಿ & 187 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮೋಸ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಮಹ್ಮದ ಇಬ್ರಾಹಿಂ @ ಪಿರೋಜ ಅಹ್ಮದ ತಂದೆ ಮಹ್ಮದ ಇಸ್ಮಾಯಿಲ ಅಂಗಡಿ ನಂ 5-784 ನ್ಯಾಷನ್‌ಲ ಇಂಜಿನೇಯರ ವರ್ಕ್ಸ ಬುಲಂದ ಪರವೇಜ ಕಾಲನಿ ಗುಲಬರ್ಗಾರವರು ಮಾನ್ಯ ನ್ಯಾಯಾಲಯದ ಉಲ್ಲೇಖಿತ ಪಿ.ಸಿ.ನಂ.461/11 ನೇದ್ದರ ಸಾರಾಂಶವೆನೆಂದರೆ ನನಗೆ ಪಿನೋಮ್ಯಾಟಿಕ ಟೂಲ್ಸ್ ಮತ್ತು ಬೋರವೆಲ್ಸ ಬಿಟ್ಸ್ ಮತ್ತು ಗ್ರ್ಯಾಂಡಿಂಗ ಮೋಟಾರ್ಸ ತಯಾರಿಕೆ ಮಾಡಿ ಮಾರಾಟ ಮಾಡುತ್ತಿದ್ದು, ಅದು ನ್ಯಾಷನಲ್ ಇಂಜನಿಯರಿಂಗ ವರ್ಕ್ಸ ಎಂಬ ಹೆಸರಿನದು ಇದ್ದು, ದಿನಾಂಕ 03-04-10, 05-04-2010, 20-04-2011 ರಂದು ಬಿಲ್ಲ ನಂ. 040, 043, 046 ಪ್ರಕಾರ ಒಟ್ಟು 8,13,680/- ರೂ. ಮಾಲನ್ನು ಆಪಾದಿತರ ನವೀತ್ರಾ ಎಂಟರಪ್ರೆಸಸ ಮಾರಾಟ ಮಾಡಿದ್ದು ಇರುತ್ತದೆ. ಸದರ ಹಣವನ್ನು ನನಗೆ ಕೊಡದೇ ಮತ್ತು ಸರಕಾರಕ್ಕೆ ಟೆಕ್ಸ ಕಟ್ಟದೇ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 325/2011 ಕಲಂ.420, 406, 468 471 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: