Police Bhavan Kalaburagi

Police Bhavan Kalaburagi

Saturday, November 5, 2011

GULBARGA DIST REPORTED CRIMES

ಅಪಘಾತ ಪ್ರಕರಣ :

ಜೇವರ್ಗಿ ಪೋಲಿಸ ಠಾಣೆ : ಶ್ರೀ ದೇವಿಂದ್ರ ತಂದೆ ಕಾಶಪ್ಪ ವರ್ಮಾ ಸಾ: ಮುದಬಾಳ (ಬಿ) ರವರು ನಾನು ದಿನಾಂಕ: 02/11/2011 ರಂದು ಬೆಳ್ಳಿಗಿನ ಜಾವ 02-00 ಎಎಂಕ್ಕೆ ಜೇವರ್ಗಿ ಕಡೆಯಿಂದ ಮುದಬಾಳ ಗ್ರಾಮಕ್ಕೆ ನನ್ನ ಮೋಟಾರ ಸೈಕಲ ಮೇಲೆ ಜೇವರ್ಗಿ ಶಹಾಫೂರ ರೋಡಿನ ತಮ್ಮೂರ ಕರೆಪ್ಪ ಹೆಗ್ಗಾರ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಲಾರಿ ನಂಬರ ಎ.ಪಿ 36 ಡಬ್ಲೂ 3639 ನೇದ್ದನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮೇಲೆ ಕಟ್ಟ ಹೋಡೆದು ರೋಡಿನಲ್ಲಿ ಲಾರಿ ಪಲ್ಟಿ ಮಾಡಿದನು ಆಗ ನಾನು ಮತ್ತು ಹೊಲದಲ್ಲಿ ಬೆಳೆಗೆ ನೀರು ಬಿಡುತ್ತಿದ್ದ ಬಸವರಾಜ ಹೆಗ್ಗಾರ ಇಬ್ಬರು ಕೂಡಿ ಹೋಗಿ ನೊಡಲಾಗಿ ಲಾರಿಯಲ್ಲಿ ಇಬ್ಬರು ಇದ್ದು ಅವರಿಗೆ ಎಬ್ಬಿಸಿ ನೋಡಲಾಗಿ ಅದರಲ್ಲಿಯ ಲಾರಿ ಚಾಲಕನಿಗೆ ಎಡಗಣ್ಣಿಗೆ ರಕ್ತಗಾಯ ವಾಗಿದ್ದು. ಮತ್ತು ಅಲ್ಲಲ್ಲಿ ತರುಚಿದ ರಕ್ತ ಗಾಯವಾಗಿತ್ತು ಅವನಿಗೆ ಹೆಸರು ವಿಚಾರಿಸಿಲು ಅವನು ತನ್ನ ಹೆಸರು ರಾಮು ತಂದೆ ನಾಗಯ್ಯ ಸಾ: ಕೊಡಪಲ್ಲಿ ಎ.ಪಿ ಅಂತಾ ತಿಳಿಸಿದನು , ಇನ್ಣೊಬನಿಗೆ ವಿಚಾರಿಸಲು ಅವನು ತನ್ನ ಹೆಸರು ಗೊಪಿ ಅಂತಾ ತಿಳಿಸಿದನು ಅವನು ಕ್ಲಿನರ ಇದ್ದ ಅವನಿಗೆ ಯಾವುದೆ ಗಾಯ ಆಗಿರುವುದಿಲ್ಲಾ. ಲಾರಿ ಡ್ರೈವರ ಮತ್ತು ಕ್ಲೀನರ ಜೇವರ್ಗಿಗೆ ಹೋಗುತ್ತೇವೆ ಅಂತಾ ಹೇಳಿದಕ್ಕೆ ನಾನು ನಮ್ಮೂರಿಗೆ ಹೋದೆನು. ಲಾರಿ ಚಾಲಕ ರಾಮು ಇತನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಲಾರಿ ಪಲ್ಟಿ ಮಾಡಿರುತ್ತಾನೆ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣಾ ಗುನ್ನೆ ನಂಬರ 191/2011 ಕಲಂ 279, 337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
: ಯಲ್ಲಮ್ಮಾ ಗಂಡ ಯಲ್ಲಪ್ಪಾ ಮೇತ್ರೆಗೋಳ ಸಾ:ಆರೂಢನಗರ ಶಹಾಬಾದ ರವರು ನನಗೆ ಬಸಪ್ಪಾ ತಂದೆ ನಾಗಪ್ಪಾ ಇವನು ಬಂದು ವಿನಾಕಾರಣ ಜಗಳ ತೆಗೆದು ಅವಾಚ್ಯವಾಗಿ ಬೈದು ಇಲ್ಲಿ ಆಟೋ ಸ್ಟಾಂಡ ಹತ್ತಿರ ಯಾಕೆ ಕುಳಿತಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ಎಡಗೈಗೆ ಹೊಡೆದು ಕೈಯಿಂದ ಬೆನ್ನಿಗೆ ಕಾಲಿಗೆ ಹೊಡೆದು ನೂಕು ಕೊಟ್ಟಿದ್ದರಿಂದ ಎಡಗಾಲ ತೊಡೆಗೆ ತರಚಿದ ಗಾಯ ವಾಗಿರುತ್ತದೆ ಅಂತಾ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣಾ ಗುನ್ನೆ 165/2011 ಕಲಂ: 323 324 504 ಐಪಿಸಿ ನಂಬರ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಟಕಾ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 4-01-11 ರಂದು ಮಧ್ಯಾಹ್ನ 1-15 ಗಂಟೆ ಸುಮಾರಿಗೆ ಗುಲಬರ್ಗಾ ನಗರದ ಇಂಡಸ್ಟ್ರೀಯಲ ಎರಿಯಾದ ಮಾಸಾತಿ ದರ್ಗಾ ಕಮಾನ ಗೇಟ ಹತ್ತಿರ ನಿಂತು ಒಂದು ರೂ.ಗೆ 80 ರೂ. ಗೆಲ್ಲಿರಿ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಳ್ಳುತ್ತಿದ್ದ ಮಹಿಬೂಬ ತಂದೆ ಕರೀಮಸಾಬ ಇನಾಮದಾರ ಇತನನ್ನು ದಾಳಿ ಮಾಡಿ ಅವನಿಂದ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ಹಣ,ಚೀಟಿ,ಪೆನ್ನು ಮೋಬಾಯಿಲ್ ಜಪ್ತಿ ಪಡಿಸಿಕೊಂಡ ನಂತರ ಮಹಿಬೂಬನಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಎಂದು ವಿಚಾರಿಸಲೂ ಅವನು ಸಂಜುಕುಮಾರ ತಂದೆ ನೀಲಕಂಠಪ್ಪ ಬಿರಾದಾರ ಸಾ: ಶಿವಾಜಿ ನಗರ ಗುಲಬರ್ಗಾ ಈತನಿಗೆ ಕೊಡುವುದಾಗಿ ತಿಳಿಸಿದ ನಂತರ ಈ ಮೇಲಿನ ಮುದ್ದೆ ಮಾಲು ಆತನ ಕಡೆಯಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 326/2011 ಕಲಂ.78(3) ಕೆ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮೋಹಿಯೋದ್ದಿನ್‌‌ ತಂ/ ಮಹ್ಮದ ಸಲಾವೂದ್ದೀನ ವ:30 ಜಾ: ಮುಸ್ಲಿಂ ಉ: ವ್ಯಾಪಾರ ಸಾ; 11/1219 ಎಮ್‌ ಎಸ್‌‌, ಕೆ,ಮಿಲ್ಲ ಗುಲಬರ್ಗಾ ರವರು ನನ್ನ 407 ಕೆಎ 16 ಎ-2701 ವಾಹನವಿದ್ದು ಅದರ ಚಾಲಕ ಗುಂಡಪ್ಪ ಕಲಾಲ ಅಂತಾ ಇದ್ದು ಆತ ದಿನಾಲು ಬಾಡಿಗೆಯ ಮೇಲೆ ಹೋಗಿ ತನ್ನ ಮನೆಯಿಂದ ರಾಮನಗರದಲ್ಲಿ 407 ಗಾಡಿ ನಿಲ್ಲಿಸುತ್ತಿದ್ದು ದಿನಾಂಕ 21/10/2011 ರಂದು ಜೇವರ್ಗಿ ಲೋಡ ಮಾಡಿಕೊಂಡು ಹೋಗಿ ಖಾಲಿ ಮಾಡಿಕೊಂಡು ರಾತ್ರಿ 10 ಗಂಟೆಗೆ ಗುಲಬರ್ಗಾಕ್ಕೆ ಮರಳಿ ಬಂದು ತನ್ನ ಮನೆಯ ಮುಂದೆ ಗಾಡಿಯನ್ನು ನಿಲ್ಲಿಸಿದ್ದು ಬೆಳ್ಳಿಗ್ಗೆ 4 ಗಂಟೆಗೆ ಎದ್ದು ನೋಡಲಾಗಿ ನನ್ನ ಗಾಡಿ ನಂ ಕೆಎ 16 ಎ-2701 ಅ;ಕಿ: 4 ಲಕ್ಷ ರೂ. ಬೆಲೆವುಳ್ಳದ್ದು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲವೆಂದು ನನ್ನ ಚಾಲಕನಾದ ಗುಂಡಪ್ಪ ಇತನು ನನಗೆ ತಿಳಿಸಿದ್ದರಿಂದ ನಾನು ರಾಮನಗರಕ್ಕೆ ಹೋಗಿ ನೋಡಲಾಗಿ ಯಾರೋ ಕಳ್ಳರು ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 327/2011 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: