ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ : ಶ್ರೀ ಸಿದ್ದಾಜಿ ತಂದೆ ಶ್ರೀಮಂತರಾವ ಪಾಟೀಲ್ ವಯ|| 35 ವರ್ಷ ಸಾಃ ಭಾರತನಗರ ಗಂಜ್ ಗುಲಬರ್ಗಾ ರವರು ನಾನು ಕೋರ್ಟಗೆ ಹೋಗುವ ಕುರಿತು ಗಂಜ್ ರೋಡಿನ ಗಾಂಧಿ ನಗರ ಕ್ರಾಸ್ ಹತ್ತಿರ ಆಟೋರಿಕ್ಷಾ ಹತ್ತುವ ಕುರಿತು ಎಡಬದಿಗೆ ಕಾಯುತ್ತಾ ನಿಂತಾಗ ಗಂಜ್ ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂ ಕೆಎ 32 ಯಾವ್ 1182 ಸವಾರನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲೆ ಠಾಣೆ ಗುನ್ನೆ ನಂ: 69/2011 ಕಲಂ 279, 337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಬಾನು ಬೇಗಂ ಗಂಡ ಸೈಯದ ಅಮೀರ ವ; 40 ವರ್ಷ ಉ; ಮನೆ ಕೆಲಸ ಸಾ; ಕೆ.ಇ.ಬಿ.ಆಫೀಸ್ ಎದುರು ಯತೀಮಖಾನ ಗುಲಬರ್ಗಾ ರವರು ನಾನು ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನಲ್ಲಿ ಬರುವ ನಿಧಿಶಾ ಕಾಂಪ್ಲೇಕ್ಸ ಎದುರು ರೋಡಿನ ಮೇಲೆ ಬರುತ್ತಿರುವಾಗ ಅಟೋರೀಕ್ಷಾ ನಂ::ಕೆಎ 32 ಬಿ 3962 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕಟ್ಟ ಹೊಡೆದು ಅಟೋರೀಕ್ಷಾ ಪಲ್ಟಿಮಾಡಿದ್ದರಿಂದ ಅಟೋರೀಕ್ಷಾದಲ್ಲಿ ಕುಳಿತಿದ್ದ ನನಗೆ ಮತ್ತು ಇನ್ನು ಒಬ್ಬ ಪ್ರಯಾಣಿಕನಿಗು ಭಾರಿಗಾಯ ಅಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲೆ ಠಾಣೆ ಗುನ್ನೆ ನಂ: 143/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಶಂಕರ ತಂದೆ ಡೊಂಡಿಬಾ ಭೋಯಿ ಸಾ: ಬಂದರವಾಡ ತಾ: ಅಫಜಲಪೂರ ಜಿ: ಗುಲಬರ್ಗಾ ರವರು ನಾನು ಮತ್ತು ಕಿಶನ್ ಭೋವಿ ದಿನಾಂಕ:8/11/2011 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಹತಗುಂದಾ ಗ್ರಾಮದ ಕೇರೆಯಲ್ಲಿ ಮೀನು ಹಿಡಿಯುತ್ತುರುವಾಗ ಸೂರ್ಯಕಾಂತ @ ಸುರೇಶ ತಂದೆ ಬಸವಂತರಾಯ ವಗ್ಗೆ ಸಾ:ಇನ್ನೂ 6 ಜನರು ಹತಗುಂದಾ ಗ್ರಾಮದವರು ಕೂಡಿ ಕೊಂಡು ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಆಶದ ಮೇಲಿಂದ ಠಾಣೆ ಗುನ್ನೆ ನಂ: 330/11 ಕಲಂ 143, 147, 341, 323, 504 , 506 ಸಂ/ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ
No comments:
Post a Comment