Police Bhavan Kalaburagi

Police Bhavan Kalaburagi

Sunday, November 13, 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ
: ಶ್ರೀ. ಆನಂದ ತಂದೆ ಶಿವಶರಣಪ್ಪಾ ಹಾಲಹಿಪ್ಪರಗಿ ಸಾ: ಅಶೋಕ ನಗರ ಗುಲಬರ್ಗಾ ರವರು ನಾನು 3 ದಿವಸದ ಹಿಂದೆ ರಾತ್ರಿ ವೇಳೆಯಲ್ಲಿ ಅಶೋಕ ನಗರ ಬಡಾವಣೆಯಲ್ಲಿ ಪ್ರಶಾಂತ ತಂದೆ ರಜನಿಕಾಂತ ಎಂಬಾತನು ಚಾಕು-ತಲವಾರ ತೆಗೆದುಕೊಂಡು ಒಡಾಡುತ್ತಾ ಸಂತೋಷ ಮಡಿವಾಳ ಎನ್ನುವನೊಂದಿಗೆ ಜಗಳ ಮಾಡುವಾಗ ಓಣಿಯ ಜನರು ಧರ್ಮದ ಏಟು ಕೊಟ್ಟಿದ್ದರು. ಇಂದು ದಿನಾಂಕ 12/11/2011 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ಮತ್ತು ಅನೀಲ ತಂದೆ ಹುಸೇನಪ್ಪಾ ಬನ್ನಿಕಟ್ಟಿ ಇಬ್ಬರು ಮೊಟರ ಸೈಕಲ ಮೇಲೆ ಅಶೋಕ ನಗರ ಬಡಾವಣೆಯ ಕುಣಗೇರಿ ಹತ್ತಿರ ಹೋಗುತ್ತಿರುವಾಗ ಪ್ರಶಾಂತ ತಂದೆ ರಜನಿಕಾಂತ ಸಾ: ಬಸವನಗರ ಎನ್ನುವನು ನಮಗೆ ನಿಲ್ಲಿಸಿ, ಮೊನ್ನೆ ನನಗೆ ಯ್ಯಾಕೆ ಹೊಡೆದಿದ್ದಿ ಸುಳಿ ಮಗನೇ ಅಂತಾ ಬೈದವನೇ ನನ್ನ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಮುಖಕ್ಕೆ ಹೊಡೆದನು. ಮತ್ತು ಕಲ್ಲಿನಿಂದ ಬೆನ್ನಿಗೆ, ಕಾಲಿಗೆ ಹೊಡೆದಿರುತ್ತಾರೆ. ಅಷ್ಟರಲ್ಲಿ ನಮ್ಮ ಓಣಿಯ ವಿಮಲಾಬಾಯಿ ಸಂತಪೂರ, ಪಂಚಶೀಲ ಚಾಂಬಾಳ, ಸಂತೋಷ ಮಡಿವಾಳ ರವರು ಜಗಳ ಬಿಡಿಸಲು ಬರುವಾಗ, ನಿಮ್ಮ ಅಶೋಕ ನಗರ ದವರಿಗೆ ಒಬ್ಬೊಬ್ಬರನ್ನು ಕಡಿತ್ತಿನಿ ಅಂತಾ ಬೇದರಿಕೆ ಹಾಕಿ ಹೊಗಿರುತ್ತಾರೆ. ಅವನು ನನಗೆ ಹೊಡೆಬಡೆ ಮಾಡಿದ್ದರಿಂದ ನನ್ನ ಎಡ ಮೊಳಕಾಲಿಗೆ ತರಚಿದ ಗಾಯವಾಗಿದೆ, ಬಾಯಿ ಮೇಲತುಟಿಗೆ, ಬೆನ್ನಿನ ಮೇಲೆ ಗಾಯಗಳಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 120/2011 ಕಲಂ. 341, 323, 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಶಿವರಾಯ ತಂದೆ ಅಂದಪ್ಪ ಉ:ಲಾರಿ ಕ್ಲೀನರ್‌ ಸಾ: ಬೂಸನೂರ ತಾ: ಆಳಂದ ಜಿ:ಗುಲಬರ್ಗಾ ರವರು ನಾನು ಮತ್ತು ಚಾಲಕ ವಿಠಲ ಇಬ್ಬರೂ ಬೂಪಾಲ ತೆಗೆನೂರ ಗ್ರಾಮದಿಂದ ಲಾರಿ ನಂ ಎಮ್‌‌ಡಬ್ಲು ಸಿ 4509 ನೇದ್ದರಲ್ಲಿ ಕಬ್ಬು ಲೋಡ ಮಾಡಿಕೊಂಡು ಬೂಸನೂರ ಸಕ್ಕರೆ ಪ್ಯಾಕ್ಟರಿಗೆ ಹೊರಟಿದ್ದು ಹುಮನಾಬಾದ ಗುಲಬರ್ಗಾ ಮುಖ್ಯ ರಸ್ತೆಯ ಸ್ವಾಮಿ ಸಮರ್ಥ ಗುಡ್ಡದ ಇಳಕಿನಲ್ಲಿ ಅತಿವೇಗ ಮತ್ತು ನಿರ್ಲಕ್ಷತನ ದಿಂದ ಹೊರಟಾಗ ವೇಗದಲ್ಲಿ ಒಮ್ಮಿಂದ್ಮೊಲೆ ಲಾರಿ ಕಟ್ ಮಾಡುತ್ತಿರುವಾಗ ಪಲ್ಟಿಯಾಗಿದ್ದು ಇದರಿಂದ ಲಾರಿಯಲ್ಲಿದ್ದ ನನಗೆ ಮತ್ತು ಚಾಲಕನಿಗೆ ರಕ್ತಗಾಯ & ಗುಪ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 33/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಅನಿಲಕುಮಾರ ತಂದೆ ರೇವಣಸಿದ್ದಪ್ಪಾ ಇಂಗನಶೇಟ್ಟಿ ಸಾ;ಮೇನ ಬಜಾರ ಶಹಾಬಾದ ರವರು ನಾನು ಮತ್ತು ನನ್ನ ಗೆಳೆಯರು ಕೂಡಿಕೊಂಡು ದಿನಾಂಕ 11/11/11 ರಂದು ರಾತ್ರಿ 10 ಪಿ.ಎಂ ಸುಮಾರಿಗೆ ಡು ಬೋಲೋರೋ ಜೀಪ ನಂ ಕೆ.ಎ. 32 ಎಂ 7816 ನೇದ್ದರಲ್ಲಿ ಕುಳಿತು ಗುಲಬರ್ಗಾದಿಂದ ಕಿರಣಗಿ ಮುಖಾಂತರ ಶಹಾಬಾದಕ್ಕೆ ಬರುತ್ತಿರುವಾಗ ಶಹಾಬಾದ ಕೋರ್ಟ ಎದುರಗಡೆ ಸಣ್ಣ ಬ್ರೀಡ್ಜಗೆ ಡಿಕ್ಕೆ ಹೊಡೆದು ಪಲ್ಟಿಯಾಗಿರುತ್ತದೆ. ನನಗೆ ತಲೆಗೆ ಮತ್ತು ಎರಡು ಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಜೀಪ ಇಂಜನ ಪೂರ್ತಿ ಬೆಂಡಾಗಿರುತ್ತದೆ ಜೀಪ ಚಾಲಕ ಸಂತೋಷ ತಂದೆ ಸಿದ್ದಣಗೌಡ ಸಾ:ಶಹಾಬಾದ ಇತನು ಅತೀ ವೇಗ ಮತ್ತು ನಿಷ್ಕಳಜಿತನದಿಂದ ನಡೆಯಿಸಿ ಪಲ್ಟಿ ಮಾಡಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 171/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಂಜಾಗ್ರತೆ ಕ್ರಮ:
ಜೇವರ್ಗಿ ಪೋಲಿಸ ಠಾಣೆ :
ದಿನಾಂಕ: 12/11/2011 ರಂದು 03-30 ಪಿಎಮ್.ಕ್ಕೆ ಇಜೇರಿ ಉಕ್ಕಡ ಠಾಣೆಯ ಪಿಸಿ ಶ್ರೀ ಮಶಾಕ ರವರು ವರದಿ ಸಲ್ಲಿಸಿದ ಸಾರಂಶವೆನೆಂದರೆ. ಮುಂಜಾನೆ ಇಜೇರಿ ಗ್ರಾಮದ ಬೀಟ ಮತ್ತು ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 12-30 ಪಿ.ಎಮ್. ಸುಮಾರಿಗೆ ಇಜೇರಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಲಯದ ಎದುರು ರೋಡಿನಲ್ಲಿ ಒಬ್ಬ ಮನುಷ್ಯನು ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು ಅವನಿಗೆ ಹಿಡಿದು ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಬೇರೆ ಬೇರೆ ಯಾಗಿ ಹೇಳಿದ್ದು ನಂತರ ಅವನ ನಿಜವಾದ ಹೆಸರು ಗುಲಜಾರ ಶಾ ತಂದೆ ಮೈಬೂಬ ಶಾ ಭಾಗವಾನ ಸಾ: ನಾಲವಾರ ಹಾ:ವ: ಗಂವ್ಹಾರ ಅಂತಾ ಹೇಳಿದ್ದು ಅವನಿಗೆ ಹಾಗೆ ಬಿಟ್ಟಲ್ಲಿ ಇಜೇರಿ ಗ್ರಾಮದಲ್ಲಿ ಯಾವೂದಾದರು ಸ್ವತ್ತಿನ ಅಪರಾಧ ಮಾಡಬಹುದು ಅಂತಾ ತಿಳಿದು ಆತನನ್ನು ಠಾಣೆಗೆ ಹಾಜರ ಪಡಿಸಿದ್ದರಿಂದ ಠಾಣಾ ಗುನ್ನೆ ನಂಬರ 194/11 ಕಲಂ 109 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಜೇವರ್ಗಿ ಪೋಲಿಸ ಠಾಣೆ : ಶ್ರೀ ರಾಮು ತಂದೆ ರಾಮಚಂದ್ರ ರಾಠೋಡ ವಯಾ: 40 ವರ್ಷ ಸಾ: ರೇವನೂರ ರವರು ನನ್ನ ಮಗಳು ದಿನಾಂಕ: 11/11/2011 ರಂದು ಮದ್ಯಾಹ್ನ 3-00 ಗಂಟೆಗೆ ಸಿಂದಗಿ ಕ್ರಾಸದಿಂದ ಸರಕಾರಿ ಆಸ್ಪತ್ರೆ ರಸ್ತೆ ಯಿಂದ ಬರುವಾಗ ಜೇವರ್ಗಿ ಪಟ್ಟಣದ ಗೋಗಿ ಪೆಟ್ರೋಲ ಬಂಕ ಹತ್ತಿರ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆ.ಎ. 32 ವ್ಹಿ 1491 ನೆದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮಗಳಾದ ಶಾಲುಬಾಯಿಗೆ ಅಪಘಾತ ಪಡಿಸಿರುತ್ತಾನೆ, ಶಾಲುಬಾಯಿ ತಲೆಗೆ , ಬಾಯಿಗೆ ಸಣ್ಣ ಪುಟ್ಟ , ಹಾಗೂ ಭಾರಿ ಗಾಯಗಳಾಗಿರುತ್ತೇವೆ. ಮೋಟಾರ ಸೈಕಲ ಚಾಲಕನು ಅಪಘಾತ ಮಾಡಿ ವಾಹನ ಸಮೇತ ನಡೆಸಿಕೊಂಡು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ 195/11 ಕಲಂ 279, 338 ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ರಾಜೇಂದ್ರ ತಂದೆ ಶಿವಲಿಂಗಪ್ಪ ಧೂಳಪಗೊಳ ಸಾ|| ಬಾಲಖೆಡ ಗ್ರಾಮ ತಾ|| ಆಳಂದರವರು ನಮ್ಮ ಹೊಲಕ್ಕೆ ಹತ್ತಿ ನಮ್ಮೂರ ಶಿವಶರಣಪ್ಪ ತಂದೆ ಮಲ್ಕಾಪ್ಪ ಶಿವಲಿಂಗಪ್ಪಗೊಳ ಇವರ ಹೊಲವಿದ್ದು ಅವರು ಹಾಗೂ ನಮ್ಮ ನಡುವೆ ಹೊಲದ ಬಂದಾರಿ ಸಂಬಂಧ ಜಗಳ ತಕಾರಾರು ಆಗುತ್ತಾ ಬಂದಿರುತ್ತದೆ. ದಿನಾಂಕ 12/11/2011 ರಂದು ಬೆಳಿಗ್ಗೆ 6.30 ಗಂಟೆ ಸುಮಾರಿಗೆ ನಾನು ನಮ್ಮೂರ ಹೊರೆಗೆ ಇರುವ ಕೊಟ್ಟಿಗೆ ಹೋಗುವಾಗ ಶಿವಶರಣಪ್ಪ ಶೀವಲಿಂಗಪ್ಪಗೊಳ ಇವರ ಮನೆಯ ಮುಂದಿನ ರಸ್ತೆಯ ಮುಖಾಂತರ ಹೊಗುವಾಗ ಶಿವಶರಣಪ್ಪ ಮತ್ತು ಅವರ ಮಗ ಗುರಪ್ಪ ನನಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನಮ್ಮ ಬಂದಾರಿಯಲ್ಲಿ ಹುಲ್ಲು ಯಾಕೆ ಕೊಯ್ದಿದ್ದಿ ಎಂದಾಗ ನಮ್ಮ ಪಾಲಿಗೆ ಬಂದ ಬಂದಾರಿಯಲ್ಲಿ ನಾನು ಹುಲ್ಲು ಕೊಯ್ದಿದ್ದಿನೆ ಎಂದಾಗ ನಿನ್ನದು ಬಹಳ ಆಗಿದೆ ಎಂದಾಗ ಅಲ್ಲಿಯೇ ಇದ್ದ ಅವನ ಇನ್ನೊಬ್ಬ ಮಗನಾದ ಚೆಂದ್ರಕಾಂತ ಬಂದು ನನ್ನಗೆ ಒತ್ತಿ ಹಿಡಿದಾಗ ಶಿವಶರಣಪ್ಪ ಕಲ್ಲಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದಾಗ ಗುರಪ್ಪನು ಅಲ್ಲಿಯೆ ಬಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದನು ನಾನು ಚಿರಿದಾಗ ನಮ್ಮ ತಾಯಿ ಬಸ್ಸಮ್ಮ ಇವಳು ಬಿಡಿಸಲು ಬಂದಾಗ ಆಕೆಗೆ ಶಿವಶರಣಪ್ಪನ ಹೆಂಡತಿ ಪಾರ್ವತಿ ಕಟ್ಟಿಗೆಯಿಂದ ಬಲಗೈ ಮುಂಗೈಗೆ ಹೊಡೆದು ರಕ್ತಗಾಯ ಪಡಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 263/2011 ಕಲಂ 341, 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: