Police Bhavan Kalaburagi

Police Bhavan Kalaburagi

Thursday, November 24, 2011

GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು:

ಸಂಚಾರಿ ಪೊಲೀಸ್ ಠಾಣೆ : ಶ್ರೀ ಮಹಮ್ಮದ ಅಬ್ದುಲ ಅಲಿಂ ತಂದೆ ಅಬ್ದುಲ್ ಸಮದ ಸಾಃ ಮಿಜ್ಬಾನಗರ ಎಮ್.ಎಸ್.ಕೆ.ಮಿಲ್ ಗುಲಬರ್ಗಾ ರವರು ದಿನಾಂಕ 23-11-2011 ರಂದು 4-20 ಪಿ.ಎಮ್ ಕ್ಕೆ ಮೃತ ಅಬ್ದುಲ್ ಸಮದ ತಂದೆ ಮಹ್ಮದ ಗೌಸ ಇತನು ಗಂಜ ಏರಿಯಾದಲ್ಲಿರುವ ಹೆಚ್.ಕೆ.ಎಮ್.ಎಸ್ ಟ್ರಾನ್ಸ್ಪೋರ್ಟನಲ್ಲಿ ಕೆಲಸ ಮಾಡುತ್ತಿರುವಾಗ ಗ್ರಾಮೀಣ ಪೊಲೀಸ್ ಠಾಣೆಯ ಕಡೆಯಿಂದ ಲಾರಿ ನಂಬರ ಎಮ.ವಾಯ.ಎಲ್ 5280 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಬ್ದುಲ ಸಮದ ಈತನಿಗೆ ಜೋರಾಗಿ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಲಾರಿ ಸ್ಥಳದಲಿಯೇ ಬಿಟ್ಟು ಓಡಿ ಹೋಗಿದ್ದು ಗಾಯಾಳುವಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 75/2011 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಮಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ವರದಕ್ಷೀಣೆ ಕಿರುಕುಳ:

ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀಮತಿ ಸನ ಫಾತಿಮಾ @ ರಾಘಸಿಂಧೂ ರವರು ದಿನಾಂಕ 05-11-2011 ರಂದು ಬೆಂಗಳೂರ ನಗರ ಗಿರಿನಗರದ ಪೊಲೀಸ ಠಾಣೆಗೆ ಹಾಜರಾಗಿ ಸೈಯ್ಯದ ಮಿಂಗಜುಲ್ಲಾ ಹಸೇನಿ ಎಂಬಾತನು ಫೋನನಲ್ಲಿ ಪರಿಚಯಿಸಿಕೊಂಡು ಸ್ನೇಹಿತನಾಗಿ ತನ್ನ ಹೆಸರು ಇಮ್ರಾನ್ ಎಂದು ನಾನು ಎಂಬಿಎ ಮುಗಿಸಿದ್ದು ಒಳ್ಳೆಯ ಕೆಲಸದಲ್ಲಿದ್ದೆನೆ ಮದುವೆಯಾಗು ಎಂದು ಹೇಳಿ ನನ್ನನ್ನು ನಂಬಿಸಿ ದಿ. 22-10-2009 ರಂದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ಹೈದ್ರಾಬಾದ್ ನಲ್ಲಿ ಬಲವಂತದಿಂದ ಮುಸ್ಲಿಂ ಸಂಪ್ರದಾಯದಂತೆ ವಿವಾಹ ಮಾಡಿಕೊಂಡು ನಂತರ ನನ್ನ ತಂದೆಯ ಮನೆಯಿಂದ 50,ಲಕ್ಷ ರೂ ನಗದು ಸುಮಾರು 1 ಕೋಟಿ 38 ಲಕ್ಷ ರೂ ಬೆಲೆಯ ಒಡವೆಗಳು ಷೇರು ಪತ್ರಗಳು ಮತ್ತು 3 ಮೊಬೈಲಳನ್ನು ಆತ ಇತರೆ ಸಂಬಂಧಿಕರಾದ ಜಿಯಾವುಲ್ಲಾ ಹುಸೇನಿ , ಶ್ರೀಮತಿ ಅಮೀನಾ ,ಸೈಯ್ಯದ ಸಂಶಲನ್ ಸಲೀಂ ಎಂಬುವವನೊಂದಿಗೆ ಸೇರಿಕೊಂಡು ಮೋಸ ಮಾಡಿ ನನ್ನನ್ನು ಪೂನಾ ಹಾಗೂ ಉತ್ತರ ಭಾರತದ ಹಲವು ಕಡೆ ಕರೆದುಕೊಂಡು ಓಡಾಡಿ ನನಗೆ ತವರು ಮನೆಯಿಂದ ಹೆಚ್ಚಿನ ಹಣವನ್ನು ತೆಗೆದುಕೊಂಡು ಬಾ ಎಂದು ವರದಕ್ಷಿಣೆ ಕಿರುಕುಳ ಕೊಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಾ ಹಣವನ್ನು ತರದಿದ್ದರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕುತ್ತಿದ್ದು. ಆತನ ತಂದೆಯಿರುವ ಗುಲ್ಬರ್ಗಾದ ಮನೆಗೆ ಕರೆದುಕೊಂಡು ಬಂದು ನನ್ನನ್ನು ಸುಮಾರು 10 ದಿವಸಗಳಿಗಿಂತ ಹೆಚ್ಚು ಕಾಲ ಆಕ್ರಮ ಬಂಧನದಲ್ಲಿಟ್ಟು ಅಲ್ಲಿಯು ಕೂಡ ನನಗೆ ಹಿಂಸೆ ನೀಡುತ್ತಿದ್ದು ಇದರಿಂದ ನಾನು ಬೆಂಗಳೂರಿಗೆ ಬಂದಿರುವುದಾಗಿ ಹೇಳಿ ದೂರು ದಾಖಲ ಮಾಡಿಕೊಳ್ಳಲು ಪಿರ್ಯಾದಿ ಸಲ್ಲಿಸಿದ್ದರಿಂದ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲ ಆಗಿರುತ್ತದೆ. ಗಿರಿನಗರ ಪೊಲೀಸ ಠಾಣಾ ವ್ಯಾಪ್ತಿಗೆ ಒಳಪಡುವ 1 ನೇ ಇ ಮುಖ್ಯರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಬಳಿಮನೆ ನಂ.813 ರಲ್ಲಿ ವಾಸವಾಗಿದ್ದು ಕೃತ್ಯ ನಡೆದ ಸ್ಥಳವು ಹೆಚ್.5-995 ಚುನ್ನಭಟ್ಟಿ ಮೀರಜ ಮಸೀದಿಯ ಎದುರು ಮಕ್ಕಾ ಕಾಲೋನಿ ಗುಲಬರ್ಗಾವಾಗಿದ್ದು , ಸದರಿ ಸ್ಥಳವು ವಿಶ್ವವಿದ್ಯಾಲಯ ಪೊಲೀಸ ಠಾಣೆಗೆ ಒಳಪಡುವುದರಿಂದ ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಮಾನ್ಯ ನ್ಯಾಯಾಲಯದಿಂದ ಆದೇಶ ಪಡೆದು ವರ್ಗಾವಣೆ ಮಾಡಿರುತ್ತಾರೆ. ಠಾಣೆ ವ್ಯಾಪ್ತಿಯ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 270/11 ಕಲಂ 498(ಎ) , 419, 420, 506, 344, 114, 120(ಬಿ) ಸಂ 34 ಐಪಿಸಿ ಮತ್ತು 3&4 ಡಿ ಪಿ ಎಕ್ಟ ಪ್ರಕಾರ ಪ್ರಕರಕಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ :ಶ್ರೀ ಸೊಮಶೇಖರ ತಂದೆ ವೀರಪ್ಪಾ ಮಸ್ಕಿ ಸಾ: ಮಸ್ಕಿ ಹಾ.ವ: ರಾಮನಗೌಡ ಮುದ್ನಾಳ ರವರು ನನ್ನ ಪರಿಚಯದವರಾದ ಧರ್ಮಣ್ಣಾ ತಂದೆ ಮುರೇಗೇಪ್ಪಾ ಮಾಗಣಗೇರಿ ಇತನು ತನ್ನ ಅರ್ಜಂಟ ಕೆಲಸಕ್ಕಾಗಿ ಹೊಗಲು ದ್ವಿಚಕ್ರ ವಾಹನ ಕೇಳಿದ್ದರಿಂದ ನನ್ನ ಟಿ.ವಿ.ಎಸ್‌ ಹೇವಿಡ್ಯೂಟಿ ದ್ವಿಚಕ್ರ ವಾಹನ ನಂ. ಕೆಎ 32- JPïì 9679 ನೇದ್ದನ್ನು ಕೊಟ್ಟಿದ್ದು ದಿನಾಂಕ 05/09/2011 ರಂದು ತನ್ನ ಕೆಲಸ ಮುಗಿಸಿಕೊಂಡು ಘಾಟಗೇ ಲೇಔಟ ಬಡಾವಣೆಯಲ್ಲಿಯ ತಮ್ಮ ಮನೆಯ ಮುಂದೆ ಗಾಡಿಯನ್ನು ನಿಲ್ಲಿಸಿ ಮಲಗಿರುವಾಗ ದಿ: 06/09/2011 ರಂದು ಬೆಳಿಗ್ಗೆ ಎದ್ದು ನೊಡಲು ಗಾಡಿ ಇರಲಿಲ್ಲ. ಆಗ ಈ ವಿಷಯವನ್ನು ನನಗೆ ತಿಳಿಸಿದರು. ಆ ದಿನದಿಂದ ಇಲ್ಲಿಯ ವರೆಗೆ ನಾನು ಮತ್ತು ಧರ್ಮಣ್ಣ ಇಬ್ಬರು ಗುಲಬರ್ಗಾದಲ್ಲಿ ಹುಡುಕಾಡುತ್ತಿದ್ದು ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ಮನೆಯ ಮುಂದೆ ನಿಲ್ಲಿಸಿದ ನನ್ನ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 126/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತ ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರಾಜು ತಂದೆ ಸಿದ್ಧಣ್ಣಾ ಕುಂಬಾರ ಸಾ: ಶಿವಾಜಿ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ತಮ್ಮ ಶ್ರೀಶೈಲ ಗೆಳೆಯ ಪುಂಡಲೀಕ ರವರೆಲ್ಲರೂ ಕೂಡಿಕೊಂಡು ನನಗೆ ಆರಾಮ ಇಲ್ಲದ ಕಾರಣ ಕಪನೂರ ಗ್ರಾಮದಲ್ಲಿರುವ ಡಾ:ಎ.ಎಸ್. ಪಾಟೀಲ ಆಸ್ಪತ್ರೆಗೆ ತೋರಿಸುವ ಕುರಿತು ಸಾಯಂಕಾಲ ಕೆಎ 32 ಎ 3124 ನೇದ್ದರಲ್ಲಿ ರಾಮ ನಗರ ಕ್ರಾಸಿನಲ್ಲಿ ಕುಳಿತುಕೊಂಡು ಹೊರಟಿದ್ದಾಗ ಅಟೋ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಹುಮನಾಬಾದ ರಿಂಗ ರೋಡಿನ ವಿ.ಕೆ.ಜಿ. ಶೋ ರೂಮ್ ಎದುರಿನ ರೋಡಿನ ಮೇಲೆ ಬಂದಾಗ ಎದುರುನಿಂದ ಯಾವುದೋ ವಾಹನ ಬರುತ್ತಿರುವಾಗ ವೇಗದಲ್ಲಿ ಕಟ್ ಹೊಡೆದಾಗ ಆಟೋ ಪಲ್ಟಿಯಾಗಿದ್ದರಿಂದ ಆಟೋದಲ್ಲಿದ್ದ ನನಗೆ ಮತ್ತು ಚಾಲಕ ಪ್ರಭು ಇಬ್ಬರು ರಕ್ತಗಾಯ ಮತ್ತು ಭಾರಿ ರಕ್ತಗಾಯಗಳಾಗಿದ್ದು ಇನ್ನಿಬ್ಬರಿಗೆ ಯಾವುದೇ ಗಾಯ ಆಗಿರುವುದಿಲ್ಲಾವೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 349/2011 ಕಲಂ 279,337 ,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: