ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ಎಸ್.ನರಸಿಂಹಲು ತಂದೆ ಲಕ್ಷ್ಮಣ ಸಾ|| ತಾಂಡೂರ ಜಿ|| ರಂಗಾರೆಡ್ಡಿ ರಾಜ್ಯ : ಆಂದ್ರ ಪ್ರದೇಶ ರವರು ನಾನು ಮತ್ತು ಸಂಜು ರಚೋಳ್ಳಿ, ಶಿವಪ್ಪಾ ಹರಿಜನ ಮೂರು ಜನರು ದೇವಿಗೆ ನಮಸ್ಕಾರ ಮಾಡುತ್ತಿದ್ದಾಗ ಯಾರೋ ಕಳ್ಳರು ನನ್ನಲ್ಲಿರುವ ನಗದು ಹಣ 4000/- ರೂ. ಸಂಜೀವನ ಹತ್ತಿರದಿಂದ 400/- ರೂ. ಹಾಗು ಶಿವಪ್ಪನ ಹತ್ತಿರದಿಂದ 400/- ರೂ. ಹೀಗೆ ಒಟ್ಟು 4800/- ರೂ. ಯಾರೋ ಕಳ್ಳರು ಜೇಬಿನಿಂದ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 193/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಜಕ್ಕು ತಂದೆ ದರೆಪ್ಪ ತೇಲಸಂಗಿ ಸಾ|| ಹಿರೆಬೆಣ್ಣೂರ ತಾ|| ಇಂಡಿ ಜಿ|| ಬಜಾಪೂರ ರವರು ನಾನು ದಿನಾಂಕ 25/11/2011 ರಂದು ಮಧ್ಯಾಹ್ನ ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ನದಿಯ ದಡದಲ್ಲಿ ಬಟ್ಟೆ, ಬಂಗಾರದ ಆಭರಣ, ಒಂದು ಮೋಬೈಲ ಹಾಗೂ ನಗದು ಹಣವನ್ನು ಬಟ್ಟೆಯಲ್ಲಿ ಇಟ್ಟು ಸ್ನಾನವನ್ನು ಮಾಡಲು ನೀರಿಗೆ ಇಳಿದಾಗ ಬಟ್ಟೆಯ ಮೇಲೆ ಇಟ್ಟಿದ್ದ ಆಭರಣ ನಗದು ಹಣ ಮತ್ತು ಮೋಬೆಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 195/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನೆ ಎದುರು ನಿಲ್ಲಿಸಿದ ಮೋಟಾರ ಸೈಕಲ ಕಳ್ಳತನ:
ರಾಘವೇಂದ್ರ ನಗರ ಠಾಣೆ: ಶ್ರೀ ಭಗವಂತಪ್ಪ ತಂದೆ ಶ್ರೀಮಂತಪ್ಪ ರವರು ನಾನು ದಿನಾಂಕ 14-11-2011 ರಂದು ರಾತ್ರಿ ಮಹಾಲಕ್ಷ್ಮಿ ನಗರದಲ್ಲಿರುವ ನನ್ನ ಮನೆಯ ಮುಂದೆ ನಿಲ್ಲಿಸಿದ ಹೀರೊ ಹೊಂಡಾ ಸಿಡಿ-100 ಮೊಟಾರ್ ಸೈಕಲ್ ನಂ ಕೆಎ-32/ಕೆ-5106 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment