ಯುವಕನ ಕೊಲೆ :
ಗ್ರಾಮೀಣ ಠಾಣೆ: ಮಾರುತಿ ತಂದೆ ಗಣಪತಿ ರಾಠೋಡ ಉ;ಇಟ್ಟಂಗಿ ಭಟ್ಟಿ ಸಾ|| ಕಾಕಡೆ ಚೌಕ ರಾಮನಗರ ರಿಂಗರೋಡ ಗುಲಬರ್ಗಾ ರವರು ಕೆರೂರ ಸೀಮೆಯಲ್ಲಿ ನನ್ನದೊಂದು ಜಮೀನು ಇದ್ದು ಅದರ ಸರ್ವೆ ನಂ. 53 ಇರುತ್ತದೆ ಅದರಲ್ಲಿ ತೊಗರಿ ಬೆಳೆ ಇದ್ದು ಸದರಿ ಹೊಲವನ್ನು ಕೆರೂರ ಗ್ರಾಮದ ಶಿವಶರಣಪ್ಪಾ ತಂದೆ ಶಿವರಾಯ ಪೂಜಾರಿ ಇತನು ಪಾಲಿಗೆ ಮಾಡಿರುತ್ತಾನೆ. ಇಂದು ದಿನಾಂಕ. 2-11-2011 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ ನಮ್ಮ ಹೊಲದ ಪಾಲಕಾರನಾದ ಶಿವಶರಣಪ್ಪಾ ತಂದೆ ಶಿವರಾಯ ಪೂಜಾರಿ ಇತನು ನನಗೆ ಫೋನ ಮಾಡಿ ನಾನು ಇಂದು ಮುಂಜಾನೆ ನಿಮ್ಮ ಹೊಲಕ್ಕೆ ಹೋದಾಗ ನಿಮ್ಮ ಹೊಲ ಮತ್ತು ಜಗನ್ನಾಥ ರಾಠೋಡ ಇವರ ಹೊಲದ ಮದ್ಯದ ಬಂದಾರಿಯ ಮೇಲೆ ಬೇವಿನ ಗಿಡದ ಕೆಳಗಡೆ ಒಬ್ಬ ಅಪರಿಚಿತ ಅಂದಾಜ 25 – 28 ವಯಸ್ಸಿನ ಯುವಕನಿಗೆ ಯಾರೋ ಮುಖದ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಹೋಗಿರುತ್ತಾರೆ. ಅಂತಾ ತಿಳಿಸಿದನು . ನಂತರ ನಾನು ಹೊಲಕ್ಕೆ ಹೋಗಿ ನೋಡಲಾಗಿ ನಮ್ಮ ಹೊಲದ ಬಂದಾರಿಯಲ್ಲಿ ಅಂಗಾತವಾಗಿ ಬಿದ್ದ ಅಪರಿಚಿತ ಹೆಣವನ್ನು ನೋಡಲಾಗಿ ಅವನ ಮುಖ ಪೂರ್ತಿ ಜಜ್ಜಿದ್ದು , ಎಡಗಣ್ಣು ,ಮತ್ತು ಹಣೆ ಒಳಗೆ ಜಜ್ಜಿದ್ದು , ಹಾಗೂ ಬಲಗಣ್ಣಿನ ಗುಡ್ಡಿ ಹೊರಗಡೆ ಬಂದಂತೆ ಆಗಿರುತ್ತದೆ. ಅವನ ಮೈ ಮೇಲೆ ಒಂದು ತಿಳಿ ಹಳದಿ ಬಣ್ಣದ ಚೌಕಡಿ ಫುಲಭೂಶರ್ಟ , ಒಂದು ಗಜಗಾ ಕಲರ (ನಾಸಿ) ಕಲರ ಪ್ಯಾಂಟ ಇರುತ್ತದೆ. ಕೊರಳಲ್ಲಿ ಹಸಿರು ಬಣ್ಣದ ಚೌಕಡಿ ದಸ್ತಿ ಇರುತ್ತವೆ ಮತ್ತು ಸದರಿ ಹೆಣದ ಕಾಲಿನ ಹತ್ತಿರ ಎರಡು ಚಪ್ಪಲಗಳು ಹಾಗೂ ಕೊಲೆ ಮಾಡಲು ಬಳಸಿದ ಕಲ್ಲು ಸ್ಥಳದಲ್ಲಿಯೇ ಬಿದಿದ್ದು ಅದಕ್ಕೆ ರಕ್ತ ಹತ್ತಿದ್ದು ಇರುತ್ತದೆ. ಆದುದ್ದರಿಂದ ದಿನಾಂಕ. 01-11-2011 ರಂದು 6-00 ಪಿ.ಎಂ.ದಿಂದ ದಿನಾಂಕ.02-11-2011 ರಂದು 8-00 ಎ.ಎಂ.ದ ಅವಧಿಯೊಳಗೆ ಯಾರೋ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುಲಬರ್ಗಾ ಗುನ್ನೆ ನಂ. 324/2011 ಕಲಂ. 302 ಐಪಿಸಿ ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಬಸವಂತರಾವ ತಂದೆ ಪೀರಪ್ಪ ಉ: ಎಕ್ಯೂರಿಟಿ ಗಾರ್ಡ ಸಾ: ಬೀಮ ನಗರ ಜಗತ ಗುಲಬರ್ಗಾ ರವರು ನಾನು ದಿನಾಂಕ 02.11.11 ರಂದು 09=00 ಗಂಟೆಗೆ ಜಗತ ಸರ್ಕಲ್ ದಿಂದ ಎಸ್.ಟಿ.ಬಿ.ಟಿ.ಕ್ರಾಸ್ ರೋಡಿನಲ್ಲಿ ಬರುವ ಕಮಲಾಬಾಯಿ ಪವಾರ ಕ್ಲಿನಿಕ ಎದುರು ರೋಡಿನ ಮೇಲೆ ನಡೆದುಕೊಂಡು ಹೊರಟಾಗ ಮೋಟಾರ ಸೈಕಲ್ ನಂ:ಕೆಎ 37 ಜೆ 5159 ನೇದ್ದರ ಚಾಲಕ ಸುಧಾಕರ ತಂದೆ ಅಂಬಣ್ಣಾ ರವರು ಲಾಹೋಟಿ ಕ್ರಾಸ್ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 141/11 ಕಲಂ: 279 .337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ಆಳಂದ ಪೊಲೀಸ ಠಾಣೆ: ಲಕ್ಷ್ಮಣ ತಂದೆ ಹಣಮಂತ ಪುಜಾರಿ ಸಾ: ತಂಬಕವಾಡಿ ಗ್ರಾಮ ದವರು ನಾನು ದಿನಾಂಕ 01/11/2011 ರಂದು ರಾತ್ರಿ ಸುಮಾರಿಗೆ ನಮ್ಮೂರ ಕಲ್ಯಾಣಿ ಮುಲಗೆ ಇವರ ತೊಗರಿ ಬೆಳೆಗೆ ಹೊಡೆಯುವ ಎಣ್ಣೆ ಕೇಳಲು ಹೋದಾಗ ಕಲ್ಯಾಣಿ ಇತನು ಗುಂಡಪ್ಪ ಪಾನ್ ಶಾಪ್ ಡಬ್ಬಾಕೆ ಗೋಗಿದ್ದಾನೆ ಅಂತಾ ಗೊತ್ತಾಗಿ ನಾನು ಅಲ್ಲಿಗೆ ಹೊದಾಗ ನನ್ನ ಮೇಲೆ ದ್ವೇಷ ಇಟ್ಟಿಕೊಂಡಿದ ಸುರೇಶ ತಂದೆ ಗುರುಲಿಂಗಪ್ಪ ಪುಜಾರಿ ,ಸಿದ್ದಪ್ಪ ತಂದೆ ಸೈಬನ್ನ ಕೌಂಟೆ ,ಜಗದಿಶ ತಂದೆ ಶಿವರಾಯ ಕಟ್ಟಮನಿ ,ಮಲ್ಲಪ್ಪ ತಂದೆ ಹಣಮಂತ ಚಿಂಚುರೆ , ಮಲ್ಕಣ್ನ ತಂದೆ ಅಪ್ಪಣ್ಣ ಚಿಂಚುರೆ ಶಿವುಜಾತ ತಂದೆ ಗುರುಲಿಂಗಪ್ಪ ಪುಜಾರಿ ಇವರಗಳು ಅವಾಚ್ಯವಾಗಿ ಬೈದು ಹೋಡೆದು ರಕ್ತಗಾಯ ಪಡಿಸಿರುತ್ತಾರೆ. ನಾನು ಚಿರಾಡಿವ ಸಪ್ಪಳ ಕೇಳಿ ನನ್ನ ಹೆಂಡತಿ ಉಮ್ಮಾಬಾಯಿ ನನ್ನ ಮಗ ಗುಂಡಪ್ಪ ಬಂದು ಬಿಡಿಸುವಾಗ ನನ್ನ ಹೆಂಡತಿಗೆ ಸಿದ್ದಪ್ಪನು ಬಲಗಲಕ್ಕೆ ಕಲ್ಲಿನಿಂದ ಹೊಡೆದನು ಬಲಗೈ ಹೆಬ್ಬರಳು ಒಡೆದು ಮುರಿದಿರುತ್ತಾನೆ ಆಗ ಅಲ್ಲಿಯೇ ಪಾನ ಡಬ್ಬದ ಹತ್ತಿರ ವಿದ್ದ ಗುಂಡಪ್ಪ ಸರಸಂಬಿ ,ಹಣಮಂತ ಸರಸಂಬಿ,ಕಲ್ಯಾಣಿ ಮೂಲಗೆ , ನಾಗರಾಜ ಮೂಲಗೆ ಶಂಕ್ರಪ್ಪ ತೀರ್ಥ ಬಂದು ಜಗಳ ಬಿಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 253/2011 ಕಲಂ. 324,323,148,149,506,504,143,147 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ಸುಲೇಪೇಟ ಠಾಣೆ : ಶ್ರೀ ಶಿವಪ್ಪ ತಂದೆ ಚಂದ್ರಪ್ಪ ಮಡಿವಾಳ ಸಾಃ ಹೂವಿನಹಳ್ಳಿ ರವರು ನಾನು ದಿನಾಂಕಃ 1/11/2011 ರಂದು ಸಾಯಂಕಾಲ ಸುಮಾರಿಗೆ ತನ್ನ ಮನೆಯ ಅಂಗಳದಲ್ಲಿ ಕುಳಿತಿರುವಾಗ ನಮ್ಮ ಊರಿನವರಾದ ರೇವಪ್ಪ ಮಂತಾಟೆ ಹಾಗೂ ಇತರೆ 5 ಜನ ಸಂಬಂಧಿಕರು ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಅಲ್ಲಿಗೆ ಬಂದವರೆ ಅವಾಚ್ಯವಾಗಿ ಬೈದು ನೀನು ಊರು ಬಿಟ್ಟು ಬಂದು ದನಗಳನ್ನು ನಮ್ಮ ಹೊಲದಲ್ಲಿ ಬಿಟ್ಟು ಬೆಳೆಗಳನ್ನು ಹಾಳು ಮಾಡುತ್ತಿರುವೆ ಮಗನೆ, ಅಂತಾ ಕೊಡಲಿಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ತನ್ನ ಹೆಂಡತಿಗೂ ಕೂಡ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 84/11 ಕಲಂ. 143, 147, 148, 323, 324, 354, 355, 504, 506 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮದ್ಯ ಮರಾಟ ಪ್ರಕರಣ :
ರಟಕಲ ಪೊಲೀಸ ಠಾಣೆ: ದಿನಾಂಕ:02.11.2011 ರಂದು12.30 ಪಿ.ಎಮ್.ಕ್ಕೆ ಕೂಡಲಿ ಕ್ರಾಸ ಹತ್ತಿರ ಒಬ್ಬ ಹೆಣ್ಣು ಮಗಳು ತನ್ನ ಚಹದ ಹೊಟೇಲದಲ್ಲಿ ಯಾವದೆ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಳೆ ಎಂದು ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಹಾಗೂ ಠಾಣೆ ಸಿಬ್ಬಂದಿ ಜನರಾದ ಶ್ರೀಮಹಾದೇವ, ನಿಂಗಣ್ಣ ಸಿಪಿಸಿ ಹಾಗು ಶ್ರೀಮತಿ ಗಿರಿಜಾ ಮಪಿಸಿ ರವರು ಹೋಗಿ ದಾಳಿ ಮಾಡಿದ್ದು ಸೀತಾಬಾಯಿ ಗಂಡ ಬೀಮಶ್ಯಾ ಪವಾರ ವ||36ವರ್ಷ ಜಾ||ಲಮಾಣಿ ಉ||ಹೊಟೆಲಕೆಲಸ ಸಾ||ರಾಮನಗರ ತಾಂಡ ಕೊಡ್ಲಿ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಮಧ್ಯದ ಬಾಟಲಿಗಳು ಮತ್ತು ನಗದು ಹಣ ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 56/2011 ಕಲಂ 32, 34, ಕೆ.ಇ. ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ
ಹಲ್ಲೆ ಪ್ರಕರಣ :
ಫರಹತಬಾದ ಠಾಣೆ : ಸಂತೋಷ ತಂದೆ ಭೀಮರಾಯ ಕಲ್ಲೂರ ವಯ: 21 ವರ್ಷ ಸಾ: ಗಂಗಾನಗರ ಗುಲಬರ್ಗಾ ರವರು ನಾನು ನನ್ನ ಹೆಂಡತಿ ಗೀತಾ ಹಾಗು ನನ್ನ ತಮ್ಮನಾದ ಶರಣು ಕುಡಿಕೊಂಡು ನಿನ್ನೆ ದಿನಾಂಕ: 01-11-2011 ರಂದು ( ನನ್ನ ಹೆಂಡತಿ ಗೀತಾ ಇವಳು ಹ್ಯಾಂಡಿಕ್ಯಾಪ್ಟ್ ಇದ್ದ ಕಾರಣ ) ಅವಳಿಗೆ ಪ್ರತಿ ತಿಂಗಳು ಬರುವ ಪಿಂಚಣಿ ಹಣ ತರುವ ಸಲುವಾಗಿ ಕವಲಗಾ (ಬಿ) ಗ್ರಾಮಕ್ಕೆ ಹೋಗಿದೇವು. ರಾತ್ರಿ ನನ್ನ ಅತ್ತೆ ಮಾವವರ ಮನೆಯಲ್ಲಿ ಉಳಿದುಕೊಂಡು ಬೆಳಗ್ಗೆ ದಿನಾಂಕ:2-11-2011 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಕವಲಗಾ (ಬಿ) ಗ್ರಾಮದಿಂದ ಗುಲಬರ್ಗಾಕ್ಕೆ ಬರುವ ಕುರಿತು ಬಸ್ ನಿಲ್ದಾಣದ ಹತ್ತಿರ ಬರುತ್ತಿದ್ದಾಗ ಅದೇ ಗ್ರಾಮದ ನಾಗಣ್ಣಾ ತಂದೆ ಕರಬಸಪ್ಪಾ ಮುಸಂಡಿ, ಶರಣು ತಂದೆ ನಾಗಣ್ಣಾ ಮುಸಂಡಿ ಇವರು ಕೂಡಿ ಬಂದವರೇ ನನಗೆ ಅವಾಚ್ಯ ಶಬ್ದಗಳಿಂದ ಬೈದು ನಾಗಣ್ಣಾ ಇತನು ಅಲ್ಲೆ ಬಿದಿದ್ದ ಕಲ್ಲಿನಿಂದ ನನ್ನ ತಲೆಯ ಬಲಗಡೆ ಹಣೆಗೆ ಹೊಡೆದು ರಕ್ತಗಾಯ ಮಾಡಿದನು. ಶರಣು ಈತನು ಕಾಲಿನಿಂದ ಒದ್ದನು. ಆಗ ನನ್ನ ತಮ್ಮನಾದ ಶರಣು ಬಿಡಿಸಲು ಬಂದರೆ ಆತನಿಗೆ ಶರಣು ಈತನು ಬಡಿಗೆಯಿಂದ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 202/2011 ಕಲಂ 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment