ಕಳವು ಪ್ರಕರಣ:
ಬ್ರಹ್ಮಪೂರ ಠಾಣೆ: ಶ್ರೀ.ವಿಠಲ ತಂದೆ ಈಶ್ವರಪ್ಪ ಹೊಸಮನಿ, ಉ|| ಮುಖ್ಯ ಶಿಕ್ಷಕರು ಸಾ|| ಪ್ಲಾಟ ನಂ:587/3/7 ದೇವಿ ನಗರ ಆಳಂದ ರೋಡ ಗುಲಬರ್ಗಾ ರವರು ನಾನು ದೇವಿನಗರದ ಪ್ಲಾಟ ನಂ: 587/3/7 ನೇದ್ದರಲ್ಲಿ ಮನೆ ಕಟ್ಟುವ ಸಲುವಾಗಿ ಸುಪರ ಮಾರ್ಕೆಟನಲ್ಲಿರುವ ಕಾರ್ಪೊರೇಶನ ಬ್ಯಾಂಕನಿಂದ ಸಾಲ ಪಡೆದು ದಿನಾಂಕ: 26/11/2011 ರಂದು ಬೆಳಿಗ್ಗೆ 11:00 ಗಂಟೆಗೆ ಸುಪರ ಮಾರ್ಕೆಟ ಕಾರ್ಪೊರೇಶನ ಬ್ಯಾಂಕನಿಂದ 2,05,000/- ರೂಪಾಯಿ ಡ್ರಾ ಮಾಡಿಕೊಂಡು ನನ್ನ ಮೋಟರ ಸೈಕಲ ನಂ: ಕೆಎ 32 ಆರ್ 1759 ನೇದ್ದರ ಡಿಕ್ಕಿಯಲ್ಲಿ ಹಾಕಿಕೊಂಡು ಭಾರತ ಶಿಕ್ಷಣ ಸಂಸ್ಥೆಯ ಇನ್ನೊಂದು ಶಾಲೆಯಾದ ಕನ್ಯಾ ಪ್ರೌಢ ಶಾಲೆ ಜಗತ ಗುಲಬರ್ಗಾಕ್ಕೆ ಹೋಗಿ ಶಾಲೆಯ ಮುಂದೆ ನನ್ನ ಮೋಟರ ಸೈಕಲ ನಿಲ್ಲಿಸಿ ಆಫೀಸದಲ್ಲಿ ಕೆಲಸ ಇರುವದರಿಂದ ಒಳಗೆ ಹೋಗಿ 5 ನಿಮಿಷದಲ್ಲಿ ಹೊರಗೆ ಬಂದು ನೋಡಲಾಗಿ ನನ್ನ ಡಿಕ್ಕಿಯಲ್ಲಿದ್ದ ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ರಿಹಾನ ರಸೀದ ತಂದೆ ಶೇಖ ಹಸನ ಮುಜಾವರ ಸಾ; ಎಮ್.ಐ.ಜಿ.-7 ಹೌಸಿಂಗ ಬೋರ್ಡ ಕೆ.ಹೆಚ್.ಬಿ.ಕಾಲೋನಿ ಹಳೆ ಜೇವರ್ಗಿ ಗುಲಬರ್ಗಾ ರವರು ನಾನು ದಿನಾಂಕ 26-11-2011 ರಂದು ಸಾಯಂಕಾಲ ಕೊರಂಟಿ ಹನುಮಾನ ಗುಡಿಯಿಂದ ಹಳೆ ಜೇವರ್ಗಿ ರೋಡಿನಲ್ಲಿ ಬರುವ ಆರ್ಮಿ ಬಿಲ್ಡಿಂಗ ಹತ್ತಿರ ಹೊರಟಾಗ ಮೋಟಾರ ಸೈಕಲ್ ನಂ: ಕೆಎ 32 ವಿ 4108 ನೇದ್ದರ ಸವಾರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಪಡಿಸಿ ಅಪಘಾತ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 151/11 ಕಲಂ: 279 .337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment