ಅಂತ್ಯ ಸಂಸ್ಕಾರ ಮುಗಿಸಕೊಂಡು ಬರುತ್ತಿರುವಾಗ ಅಪಘಾತ ಒಂದು ಸಾವು:
ಸೇಡಂ ಪೊಲೀಸ ಠಾಣೆ: ಶ್ರೀ ಭೀಮಬಾಯಿ ತಂದೆ ಶರಣಪ್ಪ ಭೀಮನಳ್ಳಿ ಸಾ: ಕುರಕುಂಟಾ ತಾ: ಸೇಡಂ ರವರು ನಾನು ಮತ್ತು ನಮ್ಮ ತಾಯಿ ಮಹಾದೇವಮ್ಮ, ನಮ್ಮ ಅಣ್ಣ ಮತ್ತು ನಮ್ಮೂರಿನ ಇತರೆ ಜನರು ಕೂಡಿಕೊಂಡು ನಮ್ಮ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಭೀಮನಳ್ಳಿಯಿಂದ ಮರಳಿ ನಮ್ಮೂರಿಗೆ ಜೀಪ ನಂ-ಎಮ್ಎಚ್-02, ಜೆ-5753 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ನಾಮವಾರ ಕ್ರಾಸ ಹತ್ತಿರ ಕೊಡ್ಲಾ ಕಡೆಯಿಂದ ಟಾಟಾ ಸುಮೋ ನಂ-ಕೆಎ-05,ಸಿ-6208 ನೇದ್ದರ ಚಾಲಕ ತನ್ನ ಟಾಟಾ ಸುಮೋವನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಜೀಪಿನ ಮದ್ಯದ ಸೀಟಿನ ಬಲಗಡೆ ಕೊನೆಯಲ್ಲಿ ಕುಳಿತಿದ್ದ ತಾಯಿ ಮಹಾದೇವಮ್ಮ ಇವಳಿಗೆ ಟಾಟಾ ಸುಮೋ ಚಾಲಕ ಜೀಪಿಗೆ ಅಫಗಾತ ಪಡಿಸಿದ್ದರಿಂದ ನನ್ನ ತಾಯಿಯ ಬಲಗಾಲಿಗೆ, ಟೊಂಕಕ್ಕೆ ಭಾರಿ ರಕ್ತಗಾಯವಾಗಿ ಬಲಗೈಗೆ ತರಚಿದ ಹಾಗು ಗುಪ್ತ ಗಾಯವಾಗಿರುತ್ತದೆ ಟಾಟಾ ಸುಮೋ ಚಾಲಕ ಅಫಗಾತ ಪಡಿಸಿ ವಾಹನ ಸ್ಳಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ಚಾಲಕನ ಹೆಸರು ಅಕ್ಬರ ತಂದೆ ಹುಸೇನಸಾಬ ಸಾ|| ಕೊಡ್ಲಾ ಅಂತಾ ಗೊತ್ತಾಗಿರುತ್ತದೆ, ನಮ್ಮ ತಾಯಿಗೆ ಉಪಚಾರ ಕುರಿತು ಸೇಡಂದ ಸರಕಾರಿ ಅಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಹೆಚ್ಚಿನ ಉಪಚಾರ ಕುರಿತು ಗುಲ್ಬರ್ಗಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 207/2011 ಕಲಂ-279,338 ಐಪಿಸಿ ಸಂ,187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ. ಇಂದುಮತಿ ಗಂಡ ಚಂದ್ರಕಾಂತ ಮಾಳಗೆ ಸಾ:ವರನಾಳ ಗ್ರಾಮ ತಾ||ಜಿ|| ಗುಲಬರ್ಗಾ ರವರು ನಾನು ಕೂಲಿ ಕೆಲಸಕ್ಕೆಂದು ಬೆಳೆಗ್ಗೆ ಹೋಗಿ ರಾತ್ರಿ ಮನೆಗೆ ಬಂದು ಮನೆಯಲ್ಲಿ ಅಡುಗೆ ಮಾಡಿ ಮಕ್ಕಳೊಂದಿಗೆ ಊಟ ಮಾಡಿಕೊಂಡು ಎರಡೂ ಕೋಣೆಗಳಿದ್ದ ಮನೆಗೆ ಕೀಲಿ ಹಾಕಿ ನಾವೇಲ್ಲರೂ ಇನ್ನೊಂದು ಮನೆಯ ಮಲಗಿಕೊಂಡಿದ್ದು ದಿನಾಂಕ; 23/11/2011 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯ ಕೀಲಿ ಕೈ ಮುರಿದು ಬಂಗಾರದ ಆಭರಣಗಳು ಮತ್ತು ನಗದು ಹಣ ಹಾಗು ಸೀರೆಗಳು ಹೀಗೆ ಒಟ್ಟು 10500/- ರೂಪಾಯಿ ಕಿಮ್ಮತ್ತಿನವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದಠಾಣೆ ಗುನ್ನೆ ನಂ; 144/2011 ಕಲಂ 457. 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಹರಣ ಮತ್ತು ನಿಂದನೆ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶ್ರೀ ಲಾಲಪ್ಪ ತಂದೆ ನಾಗಪ್ಪ ಮದನಾ ಸಾ||ತುನ್ನೂರ, ತಾ|| ಸೇಡಂ. ರವರು ನಾನು ದುಗನೂರ ಗ್ರಾಮ ಪಂಚಾಯತದಿಂದ ಕಾಂಗ್ರೆಸ ಪಕ್ಷದಿಂದ ಆಯ್ಕೆಯಾಗಿ ಗ್ರಾಮ ಪಂಚಾಯತ ಅಧ್ಯಕ್ಷನಾಗಿದ್ದು ಉಪಾಧ್ಯಕ್ಷರಾಗಿ ಮಹಿಳಾ ಅಭ್ಯರ್ತಿ ಪಾರ್ವತಮ್ಮ ತಿಪ್ಪರೆಡ್ಡಿಕರ್ ಇದ್ದು ನಮ್ಮ ಪಂಚಾಯತ ಕೆಲಸ ಕಾರ್ಯಗಳನ್ನು ಅಲ್ಲದೇ ಯೋಜನೆ ಕಾಮಗಾರಿಗಳನ್ನು ಸುಗಮವಾಗಿ ಮಾಡಿಕೊಂಡು ಬಂದಿರುತ್ತೇವೆ. ನಮ್ಮ ಪಂಚಾಯತ ಕಾರ್ಯಾಲಯದ ಸದಸ್ಯನಾಗಿದ್ದ ಮಹಾದೇವಪ್ಪ ದುಗನೂರ ಹಾಗೂ ವೆಂಕಟಯ್ಯ ದೇವನೂರ ಇವರು ನನಗೆ ಗ್ರಾಮ ಪಂಚಾಯತ ಅಧ್ಯಕ್ಷ ನಾಗುವ ಕಾಲಕ್ಕೆ 15 ತಿಂಗಳು ನನಗೆ ಅಧ್ಯಕ್ಷಸ್ಥಾನ ಮಾಡಿಕೊಂಡು ನಂತರ 15 ತಿಂಗಳ ಅವಧಿ ಬೇರೆಯವರಿಗೆ ಬಿಟ್ಟು ಕೊಡಲು ಕರಾರು ಮಾಡಿಕೊಂಡಿದ್ದು ಇತ್ತು. ನಂತರ 15 ತಿಂಗಳ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದರಿಂದ ಹಣ ಖರ್ಚ ಆಗಿದ್ದು ಸದರಿ ಹಣ ಕೊಡು ನಾನು ರಾಜಿನಾಮೆ ಮಾಡುತ್ತೇನೆ ಅಂತ ಹೇಳಿದ್ದರಿಂದ ಅವರು ನನ್ನ ಮೇಲೆ ವೈಮಸ್ಸು ಮಾಡಿಕೊಂಡಿದ್ದು ಇತ್ತು ದಿ:23-11-2011 ರಂದು ಬೆಳಗ್ಗೆ ದುಗನೂರ ಪಂಚಾಯತ ಬಾಡಿ ಮೀಟಿಂಗ್ ನಡೆಯುತ್ತಿದ್ದಾಗ ಮದ್ಯಾಹ್ನ ಮಹಾದೇವಪ್ಪ ಕೊಂಡಮ್, ನಾಗರೆಡ್ಡಿ ತಿಪ್ಪರೆಡ್ಡಿಕರ ರವರು ಒತ್ತಾಯ ಪೂರ್ವಕವಾಗಿ ಸಭೆಯಿಂದ ಕಾಲರ ಹಿಡಿದುಕೊಂಡು ಎಳೆದುಕೊಂಡು ಹೊರಗೆ ತಂದು ನಾಗರೆಡ್ಡಿ ತಿಪ್ಪರೆಡ್ಡಿಕರ್ ರವರ ಮೋಟಾರು ಸೈಕಲ್ ಮೇಲೆ ಯಾದಗಿರಿ ವರೆಗೆ ಮೋಟಾರು ಸೈಕಲ್ ಮೇಲೆ ಓಯ್ದು ಬೈದು ಯಾದಗಿರಿಯಲ್ಲಿ ಬಿಟ್ಟು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ.208/2011 ಕಲಂ. 365, 511 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕಳ್ಳಲಾಗಿದೆ.
No comments:
Post a Comment