ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀಮತಿ ಶೈಲಾಜಾ ಗಂಡ ಹುಲಿಗೆಪ್ಪ ಉ; ಮುಖ್ಯೆ ಪೇದೆ ಸಾ;ಡಿ.ಎ.ಆರ್.ಪೊಲೀಸ್ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 18-11-2011 ರಂದು ನಗರದ ಜಿ.ಜಿ.ಹೆಚ್. ಸರ್ಕಲ್ ದಿಂದ ಆರ್.ಟಿ.ಓ.ಕ್ರಾಸ್ ಮೇನ ರೋಡಿನಲ್ಲಿ ಬರುವ ಸರಕಾರಿ ಆಸ್ಪತ್ರೆಯ ಮೇನ ಗೇಟ ಎದುರು ರೋಡಿನ ಮೇಲೆ ಹೊರಟಾಗ ಮೋಟಾರ ಸೈಕಲ್ ನಂ:ಕೆಎ 23 ಎಸ್ 8470 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನಿದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿ ಗಾಯಗೋಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 148/11 ಕಲಂ: 279 .338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ವಸಂತಾ ಗಂಡ ನರಸಿಂಹಮಲು ಮೆಡಿಶೆಟ್ಟಿ ವ:59 ವರ್ಷ ಜಾಕೋಮಟಿ ಸಾ: ಮನೆ ನಂ. 7-110/1 ಬ್ಯಾಂಕ ಕಾಲೋನಿ ನೆಹರು ಗಂಜ ಈಶ್ವರ ಗುಡಿಯ ಹತ್ತಿರ ಗಲಬರ್ಗಾರವರು ದಿನಾಂಕ 16-11-11 ರಂದು ರಾತ್ರಿ ನಾನು ನನ್ನ ಮಗ ನಾಗೇಶಕುಮಾರ ಇಬ್ಬರು ಕಾರ ನಂ. ಕೆಎ 32 ಎನ 7686 ನೇದ್ದು ಬಾಡಿಗೆಯಿಂದ ಮಾಡಿಕೊಂಡು ಹೈದ್ರಾಬಾದಿಗೆ ಹೋಗಿ ನಿನ್ನೆ ಮುಂಜಾನೆ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಮಧ್ಯರಾತ್ರಿ 00-30 ಗಂಟೆ ಸುಮಾರಿಗೆ ನಾವು ಹೈದ್ರಾಬಾದದಿಂದ ವಾಪಸ್ಸ ಗುಲಬರ್ಗಾಕ್ಕೆ ಬರುತ್ತಿರುವಾಗ ಕಾರ ಚಾಲಕ ಪ್ರಶಾಂತ ಈತನು ಕಾರನ್ನು ಅತಿವೇಗದಿಂದ ನಡೆಸುತ್ತಿದ್ದಾಗ ನಾನು ಮತ್ತು ನನ್ನ ಮಗ ಅವನಿಗೆ ಕಾರು ನಿಧಾನವಾಗಿ ಚಲಿಸುವಂತ ಹೇಳಿದರೂ ಕೂಡಾ ಅವನು ಕಾರನ್ನು ಅತೀ ವೇಗವಾಗಿ ನಡೆಯಿಸಿಕೊಂಡು ಬಂದು ಅವರಾದ (ಬಿ) ಗ್ರಾಮದ ಸಮೀಪ ಇರುವ ರಸ್ತೆಯ ಬದಿಯ 2 ಗೂಟಗಲ್ಲಿಗೆ ಗುದ್ದಿ ಕಾರ ಪಲ್ಟಿ ಆಗಿ ಬಿದ್ದಿತ್ತು ಅದರಿಂದ ಕಾರಿನ ಮುಂದಿನ ಡೋರ ಕಿತ್ತಿ ನನ್ನ ಮಗ ಕಾರನಿಂದ ಹೊರೆಗೆ ಬಿದ್ದನು. ನಾನು ಮತ್ತು ಕಾರ ಚಾಲಕ ಕಾರಿನ ಒಳಗಿನಿಂದ ನಿಧಾನವಾಗಿ ಹೊರಗೆ ಬಂದು ನೋಡಲಾಗಿ ನನ್ನ ಮಗನ ತಲೆಯ ಮುಂಭಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿದ್ದನು. ನನಗೆ ಬಲಕೈ ಮೊಳಕೈಗೆ ಸ್ವಲ್ಪ ತರ ಚಿದ ಗಾಯವಾಗಿದ್ದು, ಕಾರ ಚಾಲಕನಿಗೆ ಕೂಡಾ ಸ್ವಲ್ಪ ಗಾಯಗಳಾಗಿದ್ದು ಕಾರ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 342/2011 ಕಲಂ 279 304(ಎ) 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment