ಮುಂಜಾಗ್ರತೆ ಕ್ರಮ :
ಸ್ಟೇಷನ ಬಜಾರ ಪೊಲೀಸ ಠಾಣೆ. : ಮೌಲಾನಾಸಾಬ ತಂದೆ ಹುಸೇನಿ ಬನಶಂಕರಿ ನಗರ ಗುಲಬರ್ಗಾ ಮತ್ತು ಸುಲ್ತಾನ ಸಾಹೇಬ ಹಾಗೂ ಮೌಲಾನಾಸಾಬ ತಂದೆ ನಬೀಸಾಬ ಸಾ: ಬನಶಂಕರಿ ನಗರ ಗುಲಬರ್ಗಾ ಇವರುಗಳು ಜಂಟಿಯಾಗಿ ದಿ : 29/10/2011 ರಂದು ಸ್ಟೇಷನ ಬಜಾರ ಪೊಲೀಸ ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ ಸಾರಾಂಶವೇನೆಂದರೆ ಜಮೀನು ಸರ್ವೇ ನಂ 21.5ಎ ಮತ್ತು 21.5ಬಿ ಇದರಲ್ಲಿ ಮೌಲಾನಾಸಾಬ ತಂದೆ ಹುಸೇನಿ ಎಂಬ ಸೆರಿನಲ್ಲಿ ಇರುತ್ತದೆ. ಮತ್ತು 21,5 ಬಿ ರಲ್ಲಿ ಮೌಲಾನಾಸಾಬ ತಂದೆ ನಬಿಸಾಬ ಹಾಗೂ ಸುಲ್ತಾಸಾಬ ನಬಿಸಾಬ ಅಂತಾ ಎಂಬವವರ ಹೆಸರಿನಲ್ಲಿ ಜ್ವಾಯಿಂಟ ಪಟ್ಟಾ ಇರುತ್ತದೆ. ಇವೆರಡು 25 ಗುಂಟೆಯಂತೆ ಒಟ್ಟು 50 ಗುಂಟೆ ಜಮೀನು ಇರುತ್ತದೆ. ಸರ್ವೇ ನಂ 21. 5ಎ ರಲ್ಲಿ ಗುರಣ್ಣ ಮತ್ತು ರುಕ್ಮುದ್ದಿನ ಎಂಬವರು ಅತಿಕ್ರಮಣ ಪ್ರವೇಶ ಮಾಡಿ ಜಮೀನಿನಲ್ಲಿ ಬಂದು ಪ್ರವೇಶ ಮಾಡಿರುತ್ತಾರೆ. ಈ ಜಮೀನು ನನ್ನದು ಅಂತಾ ಹೇಳಿದರೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾನೆ ಅದೇ ರೀತಿಯಾಗಿ 21.5ಬಿ ಜಮೀನಿನಲ್ಲಿ ಮಹಿಬೂಬಸಾಬ ಎಂಬುವವನು ಅತಿಕ್ರಮಣ ಪ್ರವೇಶ ಮಾಡಿದ್ದು ಜಮೀನಿನ ಕಾಗದ ಪತ್ರಗಳನ್ನು ನೋಡಿ ಪರಿಶೀಲಿಸಿ ಖಾಲಿ ಮಾಡಿಸಿ ಕೊಡಬೇಕು. ಅಂತಾ ವಿನಂತಿಸಿಕೊಂಡ ಮೇರೆಗೆ ಅರ್ಜಿಯ ವಿಚಾರಣೆಗಾಗಿ ದಿನಾಂಕ : 30/10/2011 ರಂದು ಬೆಳಿಗ್ಗೆ ಬನಶಂಕರಿ ನಗರಕ್ಕೆ ಹೋಗಿ ಜಮೀನಿನ ಸರ್ವೇ ನಂ 21.5ಎ ಮತ್ತು 21.5ಬಿ ನೇದ್ದರ ವಿಷಯದಲ್ಲಿ ಸ್ಥಳಕ್ಕೆ ಹೋದಾಗ ಉಭಯ ಪಾರ್ಟಿಗಳ ಒಂದನೇ ಪಾರ್ಟಿದವರು ಮತ್ತು ಎರಡನೆ ವಿಚಾರಣೆ ಕೈಕೊಳ್ಳುವ ಕಾಲದಲ್ಲಿ ಉಭಯ ಪಾರ್ಟಿಗಳು ಒಬ್ಬರಿಗೊಬ್ಬರು ಈ ಜಮೀನಿನ ಆಸ್ತಿ ವಿಷಯದಲ್ಲಿ ಕೂಗಾಡಿ ಶಾಂತಿಭಂಗವನ್ನುಂಟು ಮಾಡಿದ್ದಲ್ಲದೇ ಸಾರ್ವಜನಿಕ ನೆಮ್ಮದಿಯನ್ನು ಕದಡಿದ್ದು ಮತ್ತು ಮುಂಬರುವ ದಿನಗಳಲ್ಲಿ ಈ ಆಸ್ತಿಯ ವಿಷಯದಲ್ಲಿ ಉಭಯ ಪಾರ್ಟಿಗಳು ಒಬ್ಬರಿಗೊಬ್ಬರು ಪ್ರಾಣಹಾನಿ ಮತ್ತು ಆಸ್ತಿ ಹಾನಿ ಮಾಡಿಕೊಳ್ಳುವ ಸಂಬಂವ ಸ್ಟಷ್ಟವಾಗಿ ಕಂಡು ಬಂದಿದ್ದರಿಂದ ಪಿ.ಎಸ.ಐ ರವರು ಮುಂಜಾಗ್ರತ ಕ್ರಮ ಅಡಿಯಲ್ಲಿ ಠಾಣೆ ಗುನ್ನೆ ನಂ 194/2011 ಕಲಂ 107 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಕೊಂಡಿರುತ್ತಾರೆ .
ಮನುಷ್ಯ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಪೊಲೀಸ ಠಾಣೆ. : ಶ್ರೀಮತಿ ಜಬೀನಾ ಗಂಡ ಅಬ್ಬಾಸ ಅಲಿ ಸಾ: ಮನೆ ನಂ 7990/7ಎ ನಯಾ ಮೊಹಲ್ಲಾ ಮಿಜಗುರಿ ಗುಲಬರ್ಗಾರವರು ನನ್ನ ಗಂಡನಾದ ಅಬ್ಬಾಸ ಅಲಿ ಸ್ಟೇಷನ ಬಜಾರದ ಎಮ್.ಎ. ರಹೀಮ ವಕೀಲರು ಗೋದಾಮ ಬಾಡಿಗೆ ತೆಗೆದುಕೊಂಡು ಹಳೇ ಸಾಮಾನುಗಳನ್ನು ಖರಿದಿಗೆ ತೆಗೆದುಕೊಂಡು ಈ ಗೋದಾಮಿನಲ್ಲಿ ಇಡುತ್ತಿದ್ದನು. ಹೀಗಾಗಿ ದಿ : 01/11/2011 ರಂದು ಮದ್ಯಾಹ್ನ 1:00 ಪಿಎಮ್ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿದ್ದ 10,000=00 ರೂ ನಗದು ಹಣ 10 ಗ್ರಾಂ ಬಂಗಾರದ ಲಾಕೇಟ ತೆಗೆದುಕೊಳ್ಳುವಾಗ ನಾನು ವಿಚಾರಿಸಲಾಗಿ ಮಾಲು ತೆಗೆದುಕೊಂಡ ಗಿರಾಕಿಗಳಿಗೆ ಹಣ ಕೊಡಬೇಕಾಗಿದೆ ಅಂತಾ ಗೋದಾಮಿಗೆ ಹೋಗುವುದಾಗಿ ಹೇಳಿ ಹೋದನು. ಅಲ್ಲದೇ ನನ್ನ ಗಂಡ ಹಳೆ ಸಾಮಾನು ಮಾರಿದ್ದರ 50,000=00 ರೂ ನಗದು ಹಣ ಆತನಲ್ಲಿ ಇದ್ದವು. ಮತ್ತು ದಿ :01/11/2011 ರಂದು ಮದ್ಯಾಹ್ನ 3:00 ಪಿ.ಎಮ ಸುಮಾರಿಗೆ ನನ್ನ ತಮ್ಮನಾದ ಮಹ್ಮದ ಖಾಸಿಂ ತಂದೆ ಬಾಬುಮಿಯಾ ಇವನು ಗೋದಾಮಿನಲ್ಲಿ ಕುಳಿತಾಗ ನನ್ನ ಗಂಡ ಸ್ವಲ್ಪ ಇಲ್ಲಿ ಹೋಗಿ ಬರುತ್ತೇನೆ. ಅಂತಾ ನನ್ನ ತಮ್ಮನಾದ ಮಹ್ಮದ ಖಾಸಿಂ ಇವರಿಗೆ ಹೇಳಿ ಹೋದವನು ಇಂದಿನವರೆಗೆ ಮನೆಗೆ ಬಂದಿರುವದಿಲ್ಲ ಕಾಣೆಯಾದ ನನ್ನ ಗಂಡನನ್ನು ಹುಡಕಿ ಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 196/2011 ಕಲಂ : ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ
ಆಳಂದ ಪೊಲೀಸ ಠಾಣೆ: ಚಂದ್ರಕಾಂತ ಪಾಟೀಲ ಎಎಸ್.ಐ ಆಳಂದ ಪೊಲೀಸ ಠಾಣೆ ರವರು ದಿನಾಂಕ 02/11/2011 ರಂದು ಸಾಯಾಂಕಾಲ ಆಳಂದ ಪಟ್ಟಣದಲ್ಲಿ ಪೊಟ್ರೋಲಿಂಗ ಮಾಡುತ್ತಾ ಬಸ್ಸ ನಿಲ್ದಾಣದ ಎದುರುಗಡೆ ಸಂಚಾರ ದಟ್ಟಣವಿದ್ದ ಕಾರಣ ಸುಮಾರು 5.00 ಪಿಎಂ ಕ್ಕೆ ಬಸ್ಸ ನಿಲ್ದಾಣದ ಸಂಚಾರಿ ಕರ್ತವ್ಯದಲ್ಲಿದ ಮಹೇಶ ಕುಮಾರ ಸಿಪಿಸಿ 1431 ಇವರೊಂದಿಗೆ ನಾನು ಸಹ ಸಂಚಾರಿ ಕರ್ತವ್ಯಕ್ಕೆ ಸಹಾಯ ಮಾಡುತ್ತಿದಾಗ ದರ್ಗಾ ಬೇಸ ಕಡೆಯಿಂದ ಒಂದು ದ್ವಿಚಕ್ರ ವಾಹನ ಅದರ ಮೇಲೆ 3 ಜನರು ಕುಳಿತುಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬರುತ್ತಿರುವರನ್ನು ನಾನು ಮತ್ತು ಸಿಬ್ಬಂದಿ ಸಹಾಯದೊಂದಿಗೆ ಹಿರೋ ಹೊಂಡಾ ಸ್ಲೇಂಡರ ಕೆ ಎ 32 ಯು 8151 ನೇದ್ದು ಇದ್ದು ಸಿಲ್ವರ ಬಣ್ಣದು ಠಾಣೆಗೆ ತಗೆದುಕೊಂಡು ಬಂದು ಠಾಣೆಣೆಯಲ್ಲಿ ಇಡಲಾಗಿದೆ ಸದರಿ ವಾಹನದ ಚಾಳಕನ ವಿಳಾಸ ಪತ್ತೆ ಮಾಡಲಾಗಿ ಮುದ್ದಸರ ತಂದೆ ಮೌಲಾ ಮುಲ್ಲಾ ಸಾ: ತಡೋಳ ಹಾ||ವ|| ಮಟಕಿ ರೋಡ ಆಳಂದ ಅಂತಾ ಇಂದು ಗೊತ್ತಾಗಿದ್ದು ಮತ್ತು ಹಿಂದೆ ಕುಳಿತ ಇನ್ನು ಇಬ್ಬರ ಸವಾರರ ಹೆಸರು ಗೊತ್ತಾಗಿರುವದಿಲ್ಲ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಸಾರ್ವಜನಿಕರಿಗೆ ಅಪಘಾತ ಪಡಿಸುವ ರೀತಿಯಲ್ಲಿ ನಡೆಸಿಕೊಂಡು ಬಂದು ನಮ್ಮಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದವರ ವಿರುದ್ದ ವರದಿ ಸಲ್ಲಿಸಿದರ ಸಾರಾಂಶದ ಮೇಲಿಂದ 257/2011 ಕಲಂ 471,472,420,468,34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment