ಆಸ್ತಿಗಾಗಿ ವೃದ್ದನ ಕೊಲೆ, ಮಗ, ಮೊಮ್ಮಕಳ ಸೇರಿ ಮೂರು ಜನರ ಬಂಧನ
ದಿನಾಂಕ 25/11/2011 ರಂದು ರಾತ್ರಿ 11-00 ಗಂಟೆಗೆ ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ, ಕುಮಾರಿ ಶ್ರೀದೇವಿ ಬಿರಾದಾರ ಪ್ರೊ.ಪಿ.ಎಸ್.ಐ ಫರಹತಾಬಾದ ಹಾಗೂ ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಪ್ರಭಾಕರ ಪಿಸಿ, ಕರಣಸಿಂಗ ಪಿಸಿ, ಮಶಾಕ ಪಿಸಿ, ಚಂದ್ರಕಾಂತ ಪಿಸಿ, ಜಮೀಲ ಅಹ್ಮದ ಪಿಸಿ, ಮಶಾಕ ಪಿಸಿ ರವರು ಕೊಲೆಯಾದ ಕರಿಬಸಪ್ಪಾ ತಂದೆ ವಿರಭದ್ರಪ್ಪಾ ಕುಂಬಾರ ವಃ 75 ಸಾ|| ಹಾರುತಿ ಹಡಗಿಲ್ ಎಂಬುವರಿಗೆ ಕೊಲೆ ಮಾಡಿದ ಆತನ ಹಿರಿಯ ಮಗ ಪ್ರಭುಲಿಂಗ ತಂದೆ ಕರಿಬಸಪ್ಪ ಕುಂಬಾರ ಮತ್ತು ಮೊಮ್ಮಕ್ಕಳಾದ ಲೊಕೇಶ ತಂದೆ ಪ್ರಭುಲಿಂಗ ಕುಂಬಾರ ಹಾಗೂ ಶಿವರಾಜ ತಂದೆ ಪ್ರಭುಲಿಂಗ ಕುಂಬಾರ ಎಲ್ಲರೂ ಸಾ|| ಹಾರುತಿ ಹಡಗಿಲ್ ಇವರನ್ನು ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿದಾಗ ತನಿಖೆ ಕಾಲದಲ್ಲಿ ಆರೋಪಿತರು ಆಸ್ತಿಗಾಗಿ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರಿಂದ ನ್ಯಾಯಾಂಗ ಬಂಧನ ಕುರಿತು ಒಪ್ಪಿಸಲಾಗುತ್ತಿದ್ದು ಈ ಬಗ್ಗೆ ತನಿಖೆ ಮುಂದುವರೆಯಿಸಿರುತ್ತಾರೆ ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಇಲಾಖಾ ವತಿಯಿಮದ ಬಹುಮಾನ ಘೋಷಣೆ ಮಾಡಲಾಗಿದೆ.
No comments:
Post a Comment