ಹಲ್ಲೆ ಪ್ರಕರಣ:
ಫರಹತಾಬಾದ ಠಾಣೆ : ಶ್ರೀ ಲಕ್ಷ್ಮಣ ತಂದೆ ಮರೇಪ್ಪಾ ನಡುಗೇರಿ ವಯ: 45 ವರ್ಷ ಸಾ: ಇಟಗಾ(ಕೆ) ರವರು ನಾನು ಮತ್ತು ನನ್ನ ಹೆಂಡತಿ ಜಗದೇವಿ ಇಬ್ಬರು ಊಟ ಮಾಡಿ ಮಲಗಿ ಕೊಳ್ಳುತ್ತಿದ್ದಾಗ ನನ್ನ ಹಿರಿಯ ಅಣ್ಣನಾದ ಶಾಂತಪ್ಪಾ ನಡುಗೇರಿ ಈತನು ನಮ್ಮ ಮನೆಗೆ ಬಂದಿದ್ದರು. ನಾವೆಲ್ಲರೂ ಮನೆಯಲ್ಲಿ ಮಾತಾನಾಡುತ್ತಾ ಕುಳಿತ್ತಿದ್ದಾಗ ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ಅಣ್ಣನ ಮಕ್ಕಳಾದ ಪ್ರಕಾಶ, ಈಜ್ಞನಪ್ಪಾ, ಅನ್ನಪೂರ್ಣ ನಡುಗೇರಿ, ಸುಭದ್ರವ್ವಾ ಇವರೆಲ್ಲರೂ ನನ್ನ ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಆಗ ನಾನು ಹೊರಗೆ ಹೋಗಿ ನಾವು ನಮ್ಮ ಸಂಸಾರದ ವಿಷಯ ಮಾತನಾಡುತ್ತಿದ್ದೇವೆ ಯಾಕೆ ಚಿರಾಡುತ್ತಿದ್ದಿರಿ ಅಂತಾ ಕೇಳಿದಕ್ಕೆ ಪ್ರಕಾಶ ಈತನು ಅಲ್ಲೆ ಬಿದಿದ್ದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಈಜ್ಞನಪ್ಪಾ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಲಗೈ ಮೊಳಕೈ ಹತ್ತಿರ ಹೊಡೆದು ಭಾರಿ ರಕ್ತಗಾಯ ಮಾಡಿದನು. ಅನ್ನಪೂರ್ಣ ಹಾಗೂ ಸುಭದ್ರವ್ವಾ ಇವರು ಕೂಡಿ ಇವರದು ಇದೆ ಚಾಡಿ ಮಾತು ಹೇಳುವದೇ ಕೆಲಸ ಅಂತಾ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 207/2011 ಕಲಂ 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಕೇಶ ತಂದೆ ಸಿದ್ದಪ್ಪ ಉದನೂರ ಸಾ; ಸಮುದಾಯ ಭವನ ಹತ್ತಿರ ಅಶೋಕ ನಗರ ಗುಲಬರ್ಗಾ ರವರು ನಾನು ದಿನಾಂಕ 14-11-2011 ರಂದು 23:30 ಗಂಟೆಗೆ ಹೈಕೋರ್ಟ ದಿಂದ ರಾಮಮಂದಿರ ರಿಂಗ ರೋಡದ ಸಾಯಿ ಮಂದಿರ ಸಮೀಪ ರೋಡಿನ ಲಾರಿ ನಂ::ಕೆಎ 32- 6694 ನೇದ್ದರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿರುವವನಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 144/2011 ಕಲಂ 279, 337 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಕಬೀರದಾಸ ತಂದೆ ಸಿದ್ರಾಮಪ್ಪ ಪೊತೆ ರವರು ;ತಾರಫೈಲ ಗುಲಬರ್ಗಾ ರವರು ನಾನು ದಿನಾಂಕ 13-11-2011 ರಂದು 05:00 ಗಂಟೆಗೆ ನಗರದ ರೈಲ್ವೆ ಸ್ಟೇಷನ ಎದುರು ರೋಡಿನ ಮೇಲೆ ಕಾರ ಚಾಲಕ ತನ್ನ ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಾದ ಕಮಲದಾಸ ಈತನ ಬಲಗಾಲ ಮೇಲಿಂದ ಕಾರ ಹಾಯಿಸಿ ಅಪಘಾತ ಮಾಡಿ ಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 145/2011 ಕಲಂ 279, 337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತಣಕೆ ಕೈಕೊಳ್ಳಲಾಗಿದೆ.
No comments:
Post a Comment