ಯಡ್ರಾಮಿ ಪೊಲೀಸ್ ಠಾಣೆ : ನಾನು ಶ್ರೀಮತಿ ಸಾವಿತ್ರಿ ಗಂಡ ದಿ: ಮಂಜುನಾಥಸ್ವಾಮಿ ಹೀರೆಮಠ ವಯ; 35 ವರ್ಷ ಜಾ: ಜಂಗಮ ಉ: ಕೂಲಿ ಕೆಲಸ ಸಾ: ಅರಳಗುಂಡಗಿ ರವರು ನನ್ನ ಗಂಡ ಸುಮಾರು 2 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತ ಹೊಂದಿರುತ್ತಾನೆ ನನಗೆ 4 ಜನ ಮಕ್ಕಳಿದ್ದು ಅದರಲ್ಲಿ 2 ಗಂಡು ಮತ್ತು 2 ಹೆಣ್ಣು ಮಕ್ಕಳು ಇರುತ್ತಾರೆ 4 ಜನ ಮಕ್ಕಳ ಪೈಕಿ ಮೊದಲನೆಯವಳು ಬಾನುಪ್ರಿಯಾ ಅಂತಾ ಇರುತ್ತಾಳೆ ಇವಳು ಹತ್ತನೆಯ ಓದಿ ಮನೆಯಲ್ಲಿ ಇರುತ್ತಾಳೆ ಅವಳಿಗೆ ವಯ: 17 ವರ್ಷ ಇರುತ್ತದೆ ನಮ್ಮ ಓಣಿಯಲ್ಲಿ ಸಂತೋಷ ತಂದೆ ಸಂಗಣ್ಣ ಪತ್ತಾರ ಅಂತಾ ಪಂಚಾಳ ಪೈಕಿಯ ಹುಡಗನಿದ್ದು ಅವನು ಆಗಾಗ ನಮ್ಮ ಮನೆಗೆ ಬಂದು ನಮ್ಮ ಸಂಗಡ ಮನೆಯಲ್ಲಿ ಸಲಿಗೆಯಿಂದ ಮಾತನಾಡುತ್ತಾ ಇದ್ದನು ದಿನಾಂಕ 25-11-11 ರಂದು ನಾನು ಮತ್ತು ನನ್ನ ಮಗಳು ಬಾನುಪ್ರೀಯಾ, ಲಕ್ಷ್ಮಿ, ಮಗ ಸಂತೋಷ ಹಾಗೂ ನನ್ನ ಅಕ್ಕನ ಮಗ ಸಪ್ಪಯ್ಯ ನಾವೆಲ್ಲರೂ ಮನೆಯಲ್ಲಿ ಇದ್ದಾಗ ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನ ಮಗಳು ಬಾನುಪ್ರಿಯಾ ಇವಳು ಮನೆಯ ಹೋರೆಗೆ ಕಟ್ಟೆಯ ಮೇಲೆ ಕುಳಿತುಕೊಂಡಾಗ ಸಂತೋಷ ಇತನು ಬಂದು ಭಾನುಪ್ರೀಯಾ ಜೋತೆಗೆ ಮಾತನಾಡಿ ನನ್ನ ಸಂಗಡ ಬಾ ಅಂತಾ ಪುಸಲಾಯಿಸಿ ಜಬರ ದಸ್ತಿಯಿಂದ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಳ್ಳುತ್ತಿದ್ದಾಗ ನಾವು ಹೋರಗೆ ಬಂದು ನೋಡಲು ಸಂತೋಷನು ಇತನು ಬಾನುಪ್ರಿಯಾ ಇವಳನ್ನು ಮೋಟಾರ ಸೈಕಲ್ ಕೆಎ 32 ಎಕ್ಸ-6196 ನೇದ್ದರ ಮೇಲೆ ಕೂಡಿಸಿಕೊಂಡು ಹೋಗಿರುತ್ತಾನೆ ನಾವು ಆ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಬಾನುಪ್ರಿಯಾ ಇವಳನ್ನು ಪುಸಲಾಯಿಸಿ ಜಬರ ದಸ್ತಿಯಿಂದ ಮೋಟಾರ ಸೈಕಲ್ ಮೇಲೆ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 90/2011 ಕಲಂ 366 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment