ಯು.ಡಿ.ಅರ್. ಪ್ರಕರಣ:
ಸುಲೇಪೇಟ ಠಾಣೆ: ಶ್ರೀ ರಾಮಶೇಟ್ಟಿ ತಂಧೆ ಹಣಮಂತ ಚೀಲಾ ಸಾ ಕೊಡಂಬಲ್ ಜಿಲ್ಲಾ ಬಿದರ ರವರು ನನ್ನ ಮಗಳಾದ ಶ್ರೀದೇವಿ ಇವಳಿಗೆ ಒಂದುವರೆ 1 1\2 ವರ್ಷದ ಹಿಂದೆ ಗರಗಪಳ್ಳಿ ಗ್ರಾಮದ ಸಂತೋಷ ತಂದೆ ಅನಂತಪ್ಪಾ ನಾಟಿಕರ ಇತನಿಗೆ ಜೋತೆ ಮದುವೆ ಮಾಡಿದ್ದು ಶ್ರೀದೇವಿಗೆ ಪ್ರತಿ ತಿಂಗಳ ಮುಟ್ಟು ಅಗುವ ಕಾಲಕ್ಕೆ ಹೊಟ್ಟೆನೊವು ಆಗುತ್ತಿದ್ದು ಡಾಕ್ಟರ ರವರ ಕಡೆ ತೋರಿಸಿದ್ದರು ಕಡಿಮೆ ಆಗಿರಲಿಲ್ಲ ಇಂದು ಬೆಳ್ಳಗ್ಗೆ 4.00 ಗಂಟೆಯ ಸುಮಾರಿಗೆ ಗರಗಪಳ್ಳಿ ಇಂದ ಮೋಬೈಲ್ ಫೋನ ಮುಖಾಂತರ ಶ್ರೀದೇವಿಯು ನಿನ್ನೆ ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಊರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ಹೇಳಿದ್ದರಿಂದ ನಾನು ನನ್ನ ಹೆಂಡತಿ ಮಗ ಸೇರಿಕೊಂಡು ಬಂದು ನೋಡಲು ಶ್ರೀದೇವಿಗೆ ಮನೆಯಲ್ಲಿ ಅಂಗಾತವಾಗಿ ಮಲಗಿಸಿದ್ದು ಕುತ್ತಿಗೆಯ ಬಲಭಾಗದಲ್ಲಿ ಕಂದು ಗಟ್ಟಿದ ಗಾಯವಿದ್ದು ಸಂತೋಷನಿಗೆ ವಿಚಾರಿಸಿದಾಗ ಶ್ರೀದೇವಿಯು ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಬಾಗಿಲು ಒಳ್ಳಕೊಂಡಿ ಹಾಕಿಕೊಂಡಿದ್ದು ಕೂಗಿದರು ಬಾಗಿಲು ತೆರೆಯದೆ ಇದ್ದಾಗ ನಾನು ಕಬ್ಬಿಣ ರಾಡು ಹಾಕಿ ಓಳ್ಳಕೊಂಡಿ ತೆರೆದು ಓಳಗೆ ಹೋಗಿ ನೋಡಿದ್ದಾಗ ಅವಳು ಮನೆಯ ತೋಲೆಗೆ ಒಡನಿ ಬಟ್ಟೆಯಿಂದ ಕುತ್ತಿಗೆಗೆ ಊರುಲು ಹಾಕಿಕೊಂಡು ನೇತಾಡುತ್ತಿದ್ದಾಗ ಓಡನಿ ಕತ್ತರಿಸಿ ಕೆಳಗೆ ಇಳಿಸಿರುತ್ತೆ. ಅಂತಾ ಹೇಳಿದ್ದರಿಂದ ಶ್ರೀದೇವಿ ಸಾವಿನಲ್ಲಿ ಸಂಶಯವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯುಡಿಅರ್ ನಂ: 13/2011 ಕಲಂ 174 (ಸಿ) ಸಿಅರ್ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀಮತಿ ಗೌರಮ್ಮ ಗಂಡ ಶರಣು ಸಗರ ಸಾ:ಶರಣಸಿರಸಗಿ ರವರು ನಾನು ಮತ್ತು ಸಂಬಂದಿಕರಾದ ಶರಣು ಇಬ್ಬರೂ ಕೂಡಿ ಮನೆಯ ಮುಂದೆ ಕುಳಿತು ಕೊಂಡಾಗ ಮಗಳು ಅಂಬಿಕಾ ಇವಳು ಅಂಗನವಾಡಿ ಶಾಲೆಗೆ ಹೋಗಿ ವಾಪ್ಪಸ್ಸ ಮನೆಗೆ ಬರುವ ಕಾಲಕ್ಕೆ ನಮ್ಮೂರಿನ ಬೀಮಾ ಇವರ ಕಟಿಂಗ ಅಂಗಡಿ ಹತ್ತಿರ ರೋಡಿನ ಮೇಲೆ ಅಫಜಲಪೂರ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂ ಕೆ.ಎ 53 ಎಚ್-4748 ನೇದ್ದರ ಚಾಲಕ ಉದಯಕುಮಾರ ತಂದೆ ಮಲ್ಲಿಕಾರ್ಜುನ ಸಾಗರ ಸಾ:ಚೌಡಾಪುರ ಇತನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಯಾವುದೇ ಹಾರ್ನ ವಗೈರೆ ಹಾಕದೆ ಹಿಂದಿನಿಂದ ನಡೆಸುತ್ತಾ ಒಮ್ಮಲೆ ತಂದವನೆ ನನ್ನ ಮಗಳು ಅಂಬಿಕಾ ಇವಳಿಗೆ ಹಾಯಿಸಿದನು ಅವಳಿಗೆ ಬಲಗಾಲಿನ ಕಂಪಗಂಡಿಗೆ ಬಾರಿ ರಕ್ತಗಾಯ ಮತ್ತು ಎಡಗಾಲಿನ ಮೊಳಕಾಲು ಹತ್ತಿರ ರಕ್ತಗಾಯ ಮತ್ತು ಬಲಕಪಾಳಕ್ಕೆ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 374/2011 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment