ಹಲ್ಲೆ ಅಪಹರಣ:
ಅಶೋಕ ನಗರ ಠಾಣೆ: ಮಹಿನ ತಂದೆ ಚಾಂದ ಪಾಶಾ ಸಾ: ಗಡವಂತಿ ತಾ: ಹುಮನಾಬಾದ ಹಾ.ವ: ರಾಜಧಾನಿ ರೆಸ್ಟಾರೆಂಟ ರಾಷ್ಟ್ರಪತಿ ಚೌಕ ಗುಲಬರ್ಗಾ ರವರು ನಾನು ದಿನಾಂಕ 02/12/2011 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ರಾಜಧಾನಿ ಹೊಟೇಲ ಪಕ್ಕದಲ್ಲಿರುವ ಮಸ್ತಾನ ಹೊಟೇಲದಲ್ಲಿ ಚಾಹ ಕುಡಿದು ಹೊರಗೆ ಬಂದಾಗ ಒಂದು ಸ್ಕಾರ್ಪಿಯೊ ಗಾಡಿ ನಂ. ಎಪಿ 13-6678 ನೇದ್ದರಲ್ಲಿ ನಮ್ಮೂರಿನವರಾದ ಕಪೀಲ ತಂದೆ ಈಶ್ವರ, ಜೀವನ, ಪ್ರಕಾಶ, ಉಮೇಶ ತಂದೆ ಸಿದ್ರಾಮ ಹಾಗು ಡ್ರೈವರ ಇವರೇಲ್ಲರೂ ಕೂಡಿ ನನಗೆ ಗಾಡಿಯಲ್ಲಿ ಎತ್ತಿ ಹಾಕಿಕೊಂಡು ಹುಮನಾಬಾದದ ಕಾಲೇಜ ಹಿಂದು ಗಡೆ ಜಂಗಲ ಗಿಡ ಗಂಟೆಯಲ್ಲಿ ಗಿಡಕ್ಕೆ ಕಟ್ಟಿ ಕೈಯಿಂದ ಬೆಲ್ಟದಿಂದ ಬಡಿಗೆಯಿಂದ ಸಿಕ್ಕಾಪಟ್ಟೆ ಹೊಡೆದಿರುತ್ತಾರೆ. ನನಗೆ ನಿನ್ನ ತಾಯಿ ಹಾಗು ಮಾಮನವರು ಹಣ ತಂದು ಕೊಟ್ಟರೇ ಬಿಡುತ್ತೆವೆ. ನಾನು ನಿನ್ನೆ ರಾತ್ರಿ ವೇಳೆಯಲ್ಲಿ ಗಿಡಕ್ಕೆ ಕಟ್ಟಿ ಹಾಕಿದನ್ನು ಬಿಚ್ಚಿಕೊಂಡು ಹುಮನಾಬಾದಕ್ಕೆ ಬಂದು ವಿಷಯ ತಿಳಿಸಿರುತ್ತೆನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 130/2011 ಕಲಂ. 364(ಎ) 324 ಸಂ. 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ:
ರಾಘವೇಂದ್ರ ನಗರ ಠಾಣೆ: ಶ್ರೀಮತಿ ಮಾಣಿಕಮ್ಮ ಗಂಡ ರಾಜೇಶ ಮೋರೆ ವ|| 26, ಸಾ|| ಯಂಕವ್ವ ಮಾರ್ಕೆಟ್ ಬ್ರಹ್ಮಪೂರ ಗುಲಬರ್ಗಾ ಇವರು ನನ್ನ ಗಂಡನಾದ ರಾಜೇಶ ತಂದೆ ಮಾಣಿಕರಾವ ಮೋರೆ ವ|| 35, ಈತನು ದಿನಾಂಕ 19-10-2011 ರಂದು ಬೆಳಿಗ್ಗೆ 9 ಗಂಟೆಗೆ ಎಂದಿನಂತೆ ಮಾಧವ ನಿವಾಸ ಹೋಟೆಲನಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳೀ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರು ಪತ್ತೆಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 97/11 ಕಲಂ ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment