Police Bhavan Kalaburagi

Police Bhavan Kalaburagi

Wednesday, December 7, 2011

GULBARGA DIST REPORTED CRIMES






ಖಣದಾಳ ಹಾಗೂ ದೇವಲ ಗಾಣಗಾಪುರದ ಕೊಲೆ ಪ್ರಕರಣಗಳ ಪತ್ತೆ ಗುಲಬರ್ಗಾ ಜಿಲ್ಲಾ ಪೊಲೀಸರ ಯಶಸ್ವಿ ಕಾರ್ಯಾಚರಣೆ. ಫರಹತಾಬಾದ ಪೊಲೀಸ ಠಾಣೆ ವ್ಯಾಪ್ತಿಯ ಖಣದಾಳ ಕೊಲೆ ಪ್ರಕರಣ ಪತ್ತೆ, 2 ಜನರ ಬಂಧನ,

ಖಚಿತ ಮಾಹಿತಿ ಅನ್ವಯ ಇಂದು ದಿನಾಂಕ 7/12/2011 ರಂದು ಜೇವರಗಿ ಬಸ್ಸ ನಿಲ್ದಾಣದ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಎರಡು ಜನ ಕೊಲೆ ಪ್ರಕರಣದ ಆರೊಪಿತರನ್ನು ಬಂಧಿಸಿ ತನಿಖೆ ಮುಂದುವರೆಯಿಸಿರುತ್ತಾರೆ.

ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ , ಶ್ರೀ ಬಿ.ಬಿ ಪಟೇಲ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ, ಶ್ರೀ ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ ಠಾಣೆ, ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ, ಪ್ರಬೋಶನರ ಪಿ.ಎಸ್.ಐ ರವರಾದ ಶ್ರೀದೇವಿ ಬಿರಾದಾರ, ಮಂಜುಳಾ ಮತ್ತು ನವಿನಕುಮಾರ ಹಾಗೂ ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ದೇವಿಂದ್ರ ಪಿಸಿ, ಸುಬ್ಬುನಾಯಕ ಪಿಸಿ, ಕರಣಸಿಂಗ ಪಿಸಿ, ಚಂದ್ರಕಾಂತ ಪಿಸಿ, ರವರು ಇಂದು ದಿನಾಂಕ 7/12/2011 ರಂದು ಜೇವರಗಿ ಬಸ್ಸ ನಿಲ್ದಾಣದ ಹತ್ತಿರ ಬೆಳಿಗ್ಗೆ ಖಚಿತ ಭಾತ್ಮಿ ಮೇರೆಗೆ ಹಣಕಾಸಿನ ವ್ಯವಹಾರದ ಹಿನ್ನಲೆಯಲ್ಲಿ ರಹೀಮ ತಂದೆ ಮೌಲಾನಾಸಾಬ ಶೇಖ ಸಾ// ನಬಿ ಕಾಲೋನಿ ಆಳಂದ ಚೇಕ್ ಪೊಸ್ಟ ಗುಲಬರ್ಗಾ ಎಂಬಾತನಿಗೆ ಕೊಲೆ ಮಾಡಿದ ಆರೊಪಿತರಾದ ಅನೀಲಕುಮಾರ ತಂದೆ ಶಾಂತಪ್ಪಾ ಕೋಬಾಳ ವಃ 22 ವರ್ಷ ಸಾ// ಗಂಗಾ ನಗರ ಬ್ರಹ್ಮಪುರ ಗುಲಬರ್ಗಾ, ಶರಣು ತಂದೆ ಗುರಪ್ಪಾ ಮರತೂರ ವಃ 23 ವರ್ಷ ಸಾ// ಗಂಗಾ ನಗರ ಗುಲಬರ್ಗಾ ,ಇವರನ್ನು ದಸ್ತಗಿರಿ ಮಾಡಿ ತನಿಖೆ ಕಾಲಕ್ಕೆ ಆರೊಪಿತರು ಮೃತನಾದ ರಹೀಮ ಇತನು ಆರೊಪಿತರ ಕಡೆಯಿಂದ 60,000/- ರೂ ಸಾಲವನ್ನು ಪಡೆದಿದ್ದು ಅದನ್ನು ಹಿಂತಿರುಗಿಸದ ಕಾರಣ ಕೊಲೆಗೆ ಸಂಚು ಮಾಡಿ ಆರೊಪಿತರು ಮೃತ ರಹೀಮ ಇತನಿಗೆ ಮದ್ಯಪಾನ ಮಾಡಿಸಿ ಗುಲಬರ್ಗಾ ನಗರದ ಹೊರ ವಲಯದಲ್ಲಿರುವ ಕೆಂದ್ರ ಕಾರಾಗೃಹದ ಹತ್ತಿರದ ಖಣದಾಳ ಸರಕಾರಿ ಪ್ರೌಡ ಶಾಲೆ ಆವರಣದಲ್ಲಿ ತಮ್ಮ ಮೊಟಾರ ಸೈಕಲ ಮೇಲೆ ಮೃತ ರಹೀಮ ಇತನಿಗೆ ಕರೆದುಕೊಂಡು ಹೋಗಿ ಯಾರೂ ಇಲ್ಲದನ್ನು ನೋಡಿ ಖಚಿತ ಪಡಿಸಿಕೊಂಡು ಹರಿತವಾದ ಚಾಕುವಿನಿಂದ ಎದೆಗೆ ಹಾಗೂ ಕುತ್ತಿಗೆಗೆ ಏಳೆಂಟು ಬಾರಿ ಇರಿದು ಕೊಲೆ ಮಾಡಿದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿರುತ್ತಾರೆ. ಕೊಲೆಯಾದ ರಹಿಮ ಇತನು ಆರೊಪಿ ಅನೀಲಕುಮಾರ ಇತನ ಕಡೆಯಿಂದ 60,000/- ರೂಪಾಯಿ ಸಾಲದ ಹಣ ಪಡೆದು ಹಿಂದಿರುಗಿಸಲು ನಿರಾಕರಿಸಿದ ಕಾರಣ ಸಂಚು ಮಾಡಿ ಪೂರ್ವ ಯೊಜನೆಯಂತೆ ಆರೊಪಿತರು ಜಗಳ ತೆಗೆದು ರಹೀಮ ಇತನಿಗೆ ಕೊಲೆಗೈದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ. ಮತ್ತು ಕೊಲೆಯಾದ ಬಗ್ಗೆ ಫರಹತಾಬಾದ ಪೊಲೀಸ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

ತನಿಖೆ ಕಾಲಕ್ಕೆ ಆರೊಪಿತರಿಂದ ಕೃತ್ಯಕ್ಕೆ ಉಪಯೊಗಿಸಿದ ಒಂದು ಚಾಕು, ಒಂದು ಮೊಟಾರ ಸೈಕಲ , ಮೊಬಾಯಿಲ್ ಪೊನಗಳು ಮತ್ತು ರಕ್ತ ಹತ್ತಿದ ಬಟ್ಟೆಗಳು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕೊಲೆ ಸಂಚಿನ ಆರೊಪಿತರನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬೇಧಿಸಲಾಗಿದೆ. ಅತ್ಯಂತ ಸೂಕ್ಷ್ಮ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ರವರು ಪ್ರಶಂಸಸಿ ಬಹುಮಾನ ಘೋಷಣೆ ಮಾಡಿರುತ್ತಾರೆ,

ದೇವಲ ಗಾಣಗಾಪೂರದ ಲಾಡ್ಜನಲ್ಲಿ ಮಹಿಳೆಯ ಹತ್ಯೆ ಮಾಡಿ ನಾಪತ್ತೆಯಾದ ಆರೋಪಿತನ ಬಂಧನ

ದಿನಾಂಕ:-26-11-2011 ರಂದು ಪಿರ್ಯಾದಿ ಮಾರುತಿ ತಂ/ಭೀಮಶಾ ದೇವರಮನೆ ರಘುನಂದನ ಸರಸ್ವತಿ ಲಾಡ್ಜಿನ ಮಾಲಿಕ ಸಾ||ದೇ.ಗಾಣಗಾಪೂರ ಇವರು ದೇ.ಗಾಣಗಾಪೂರ ಠಾಣೆಗೆ ಹಾಜರಾಗಿ ಪಿರ್ಯಾದ ಕೊಟ್ಟಿದ್ದೇನಂದರೆ ದಿ;26-11-2011 ರಂದು ರಾತ್ರಿ 9-30 ಗಂಟೆಯಿಂದ ದಿ;27-11-2011 ರ ಮದ್ಯರಾತ್ರಿ 02-30 ಗಂಟೆಯ ಮದ್ಯದ ಅವದಿಯಲ್ಲಿ ತಮ್ಮ ಲಾಡ್ಜನಲ್ಲಿ ರಾಜಕುಮಾರ ತಂ/ಸಿದ್ದಪ್ಪ ದೇವಿಕಾಲನಿ ತಾರ್ಫೈಲ ಗುಲಬರ್ಗಾ ಎಂಬ ವ್ಯಕ್ತಿ ತನ್ನೊಂದಿಗೆ ತನ್ನ ತಾಯಿ ಅಂತ ಒಬ್ಬಳು ಹೆಣ್ಣು ಮಗಳನ್ನು ಕರೆದುಕೊಂಡು ಬಂದು ರೂಮ ಬಾಡಿಗೆಗೆ ಪಡೆದುಕೊಂಡು ಸದರ ಹೆಣ್ಣುಮಗಳನ್ನು ಕುತ್ತಿಗೆ ಒತ್ತಿ ಕೊಲೆ ಮಾಡಿ ಹೆಣ್ಣುಮಗಳ ಎರಡು ಕೈಗಳು ದಾರದಿಂದ ಕಟ್ಟಿ ಹೋಗಿರುತ್ತಾನೆ ಅಂತ ಪಿರ್ಯಾದ ಮೇರೆಗೆ ದೇವಲಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಾನ್ಯ ಎಸ್.ಪಿ. ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್. ಎಸ್.ಪಿ ಗುಲಬರ್ಗಾ, ಮಾನ್ಯ ಅಪರ ಎಸ್.ಪಿ. ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ಎಸ್.ಬಿ.ಸಾಂಬಾ ಡಿ.ಎಸ್.ಪಿ ಆಳಂದ ರವರ ಮಾರ್ಗದರ್ಶನದಲ್ಲಿ ಸಿಪಿಐ ಅಪಜಲಪುರ ಶ್ರೀ ಕೆ.ರಾಜೇಂದ್ರ ರವರ ನೇತೃತ್ವದಲ್ಲಿ ಪಿಐ ಬಶೀರ ಪಟೇಲ, ಪಿ.ಎಸ್.ಐ ಮಂಜುನಾಥ ಕುಸಗಲ್ ದೇವಲಗಾಣಗಾಪುರ ಠಾಣೆ, ಪ್ರೋಬೆಶನರ ಪಿ.ಎಸ್.ಐ ಎಲ್.ಬಿ ಅಗ್ನಿ ಹಾಗೂ ಸಿಬ್ಬಂದಿಯವರಾದ ರಾಮಚಂದ್ರ, ಮಾರುತಿ , ರಾಜೇಶಖರ, ತಮ್ಮಣ್ಣ ಮಾಳಿ ಅರವಿಂದ ಕಲ್ಯಾಣಿ ಚಂದ್ರಕಾಂತ ಭೀಮಾಶಂಕರ ಮತ್ತು ತುಳಜಪ್ಪಾ ವಗೈರೆರು ಮೃತಳ ಹೆಸರು ಮತ್ತು ವಿಳಾಸವನ್ನು ಪತ್ತೆ ಮಾಡಿ ಅತ್ಯಂತ ವೈಜ್ಞಾನಿಕ ವಿಧಾನದಲ್ಲಿ ಆರೊಪಿತನಾದ 1) ಕರ್ತವ್ಯ ತಂದೆ ಶಿವಾಜಿ ಗುಬ್ಬನ್ ವ||24 ಸಾ||ವಿಕೆ ಸಲಗರ ತಾ||ಆಳಂದ ಇತನನ್ನು ಖಚಿತ ಭಾತ್ಮಿಯಂತೆ ಈ ದಿನ ದಾಳಿ ಮಾಡಿ ಆರೊಪಿತನನ್ನು ವಿಕೆ ಸಲಗರ ಗ್ರಾಮದಲ್ಲಿ ಬಂಧಿಸಿ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. ತನಿಖೆ ಕಾಲಕ್ಕೆ ಆರೊಪಿತನು ಮೃತಳಾದ ಪುತಳಾಬಾಯಿ ಗಂ/ ಸುಭಾಷಚಂದ್ರ ಗದ್ವಾಲ ವ||45 ಸಾ||ಆಶ್ರಯ ಕಾಲನಿ ಪಿಲ್ಟರ ಬೆಡ್ ಗುಲಬರ್ಗಾ ಇವಳೊಂದಿಗೆ ಅನೈತಿಕ ಸಂಬಂಧ ಹೊಂದಿದ ಬಗ್ಗೆ ತಿಳಿಸಿದ್ದು ಅಲ್ಲದೆ ಆಕೆಯಿಂದ ಆರೊಪಿ ಕರ್ತವ್ಯ ಇತನು 8000/- ರೂ ಹಣವನ್ನು ಸಾಲ ರೂಪದಲ್ಲಿ ಪಡೆದಿದ್ದು ಅದನ್ನು ಆಕೆ ಮರಳಿಸುವಂತೆ ಆಗಾಗ ಪಿಸಡಿಸುತ್ತಿದ್ದು ಅಲ್ಲದೆ ಅನೈತಿಕ ಸಂಬಂಧ ಹೊಂದಿದ ಬಗ್ಗೆ ತನ್ನ ಮನೆಯವರಿಗೆ ತಿಳಿಸಿ ತನಗೆ ತೊಂದರೆ ಕೊಡಬಹುದೇಂಬ ಮತ್ತು ತನಗೆ ಮುಂದೆ ತೊಂದರೆ ಕೊಡಬಹುದು ಎಂಬ ಕಾರಣದಿಂದ ಸಂಚು ಮಾಡಿ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯನ್ನು ದೇವಲಗಾಣಗಾಪುರದಲ್ಲಿರುವ ರಘುನಂದ ಸರಸ್ವತಿ ಲಾಡ್ಜಗೆ ಕರೆದೊಯ್ದು ಆಕೆಗೆ ಕುತ್ತಿಗೆ ಒತ್ತಿ ಕೊಲೆ ಮಾಡಿ ಫರಾರಿಯಾದ ಬಗ್ಗೆ ಆರೊಪಿತನು ತನಿಖೆ ಕಾಲಕ್ಕೆ ತಿಳಿಸಿರುತ್ತಾನೆ. ಅತ್ಯಂತ ಸೂಕ್ಷ್ಮ ಮಹಿಳಾ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ರವರು ಪ್ರಶಂಸಸಿ ಬಹುಮಾನ ಘೋಷಣೆ ಮಾಡಿರುತ್ತಾರೆ,

No comments: