ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಜಗನ್ನಾಥ ಬಿರೆದಾರ ರವರು ನಾನು ಹಾಗು ನನ್ನ ಮಗಳಾದ ಗಂಗಾಶ್ರೀ ಇಬ್ಬರು ಕೂಡಿಕೊಂಡು ಅವರ ತಾಯಿಯ ಮನೆಗೆ ನಡೆದುಕೊಂಡು ಹೊರಟಾಗ, ಚಿಂತಾಮಣಿ ಈತನು ಮೊಟಾರ್ ಸೈಕಲ್ ಮೇಲೆ ಬಂದು, ಮೊಟಾರ್ ಸೈಕಲ್ ಪಕ್ಕದಲ್ಲಿ ನಿಲ್ಲಿಸಿ, ಕೆಳಗೆ ಇಳಿದು ಫಿರ್ಯಾದಿಯ ಕೂದಲು ಹಿಡಿದು ಜಗ್ಗಿ ನೆಲಕ್ಕೆ ಕೆಡವಿ ಏ ರಂಡಿ, ಭೋಸಡಿ ನಿನ್ನ ಸೊಕ್ಕು ಬಹಳ ಆಗಿದೆ. ಅಂತ ಅವಾಚ್ಯದಿಂದ ಬೈದು ಕೈಮುಷ್ಠಿ ಮಾಡಿ ಹೊಟ್ಟೆಗೆ ಹಾಗು ಬೆನ್ನಿಗೆ ಹೊಡೆದು, ಕಾಲುಗಳಿಂದ ಒದ್ದಿರುತ್ತಾನೆ. ಇದನ್ನು ನೋಡಿದ ನನ್ನ ತಾಯಿ ಚಂಪಾಬಾಯಿ ನನ್ನ ಮಗಳಾದ ಗಂಗಾಶ್ರೀ ತನ್ನ ತಮ್ಮ ಶರಣಬಸಪ್ಪ ಹಾಗು ಓಣಿಯಲ್ಲಿದ್ದ ಅಂಬರೀಷ ಪೇಂಟರ್, ನೀಲಮ್ಮ ಮತ್ತು ರಾಧಾಬಾಯಿ ಇವರೆಲ್ಲರು ಬಿಡಿಸಿರುತ್ತಾರೆ. ವಿನಾಃಕಾರಣ ಹೊಡೆದ ಚಿಂತಾಮಣಿ ತಂದೆ ದಿಗಂಬರ ಬಿರೆದಾರ ಈತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 99/11 ಕಲಂ 341, 323, 354, 504 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಮತಿ ದೇವಮ್ಮ ಗಂಡ ಶರಣಪ್ಪ ಗಾಜರೇ ಸಾ; ಸುಂದರ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಮೊಮಮ್ಗ ಸಚಿನ ವ|| 8 ವರ್ಷ ಜಿ.ಜಿ.ಹೆಚ್.ಸರ್ಕಲ ರೋಡಿನ ಮೇಲೆ ಹೊರಟಾಗ ಮೋಟಾರ್ ಸೈಕಲ್ ನಂ:ಕೆಎ 39 ಹೆಚ್ 8462 ನೇದ್ದರ ಚಾಲಕ ಕುಳಗೇರಿ ಕ್ರಾಸ್ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೊಮ್ಮಗ ಸಚೀನ ವ: 8 ವರ್ಷ ಈತನಿಗೆ ಡಿಕ್ಕಿ ಪಡಿಸಿ ರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 157/11 ಕಲಂ: 279 .338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. .
ಎಮ್.ಎಸ್.ಐ.ಎಲ್ ವೈನ ಶಾಪ ಕಳವು ಪ್ರಕರಣ, ಆರೋಪಿ ಬಂಧನ
ದಿನಾಂಕ: 12/01/2011 ರಂದು ರಾತ್ರಿ ವೇಳೆಯಲ್ಲಿ ಜೇವರ್ಗಿ ಪಟ್ಟಣದ ಎಮ್.ಎಸ್.ಐ.ಎಲ್ ವೈನ ಶಾಪ ಹಾಗೂ ಲಕ್ಷ್ಮಿ ಕಿರಾಣ ಅಂಗಡಿ ಕಳವು ಆದ ಬಗ್ಗೆ ಜೇವರ್ಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಶ್ರೀ ಸಿದ್ದಾರಮ ತಂದೆ ವೀರಭಂದ್ರಪ್ಪ ಹರವಾಳಕರ ಸಾ: ಗುಲಬರ್ಗಾರವರು ದೂರು ದಾಖಲಿಸಿರುತ್ತಾರೆ. ದಿನಾಂಕ: 07/12/2011 ರಂದು ಜೇವರ್ಗಿ ಪಟ್ಟಣದ ರಿಲಯಾನ್ಸ ಪೇಟ್ರೊಲ ಬಂಕ ಹತ್ತಿರ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಪರುಶರಾಮ ತಂದೆ ನೀಲಸಿಂಗ ಠಾಕೂರ ವಯಾ: 35 ವರ್ಷ ಸಾ: ಅಂದೋಲ ಹಾ:ವ: ತಾರಪೈಲ ಗುಲಬರ್ಗಾ ಇತನನ್ನು ವಿಚಾರಿಸಲಾಗಿ ಸದರಿಯವನು ತಾನು ವೈನ ಶಾಪ ಹಾಗೂ ಕಿರಾಣಿ ಅಂಗಡಿ ಕಳವು ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಸದರಿವನಿಂದ ಕಳವು ಮಾಡಿದ 32000 ರೂ ನಗದು ಹಣವನ್ನು ಜಪ್ತ ಮಾಡಲಾಗಿದೆ. ಸದರಿ ಪ್ರಕರಣವನ್ನು ಮಾನ್ಯ ಎಸ್.ಪಿ ಗುಲಬರ್ಗಾ , ಹೆಚ್ಚುವರಿ ಎಸ್.ಪಿ ಗುಲಬರ್ಗಾ , ಡಿ.ಎಸ್.ಪಿ ಗ್ರಾ. ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಹಾಗೂ ಪಿ.ಎಸ್.ಐ ಜೇವರ್ಗಿರವರ ನೇತೃತ್ವದಲ್ಲಿ ಜೇವರ್ಗಿ ಠಾಣೆಯ ಸಿಬ್ಬಂದಿ ಜನರಾದ ರಮೇಶ , ಅಣ್ಣಾಪ್ಪ , ಅಂಬಾರಾಯ , ಮಲ್ಲಿಕಾರ್ಜುನ , ವಿಶ್ವನಾಥ , ರವರು ಕಾರ್ಯನಿರ್ವಾಹಿಸಿರುತ್ತಾರೆ.
ಸಾರ್ವಜನಿಕ ಕೆಲಸಕ್ಕೆ ಅಡೆ ತಡೆ ಮಾಡಿದ ಬಗ್ಗೆ:
ಬ್ರಹ್ಮಪೂರ ಠಾಣೆ: ದಿನಾಂಕ: 07/12/2011 ರಂದು 1800 ಗಂಟೆಗೆ ಆಯುಕ್ತರು ಮಹಾನಗರ ಪಾಲಿಕೆ ರವರ ಅರ್ಜಿ ವಸೂಲಾಗಿದ್ದರ ಸಾರಾಂಶವೆನೆಂದರೆ ದಿನಾಂಕ: 07/12/2011 ರಂದು ಸುಮಾರು 100 ರಷ್ಟು ಕಾರ್ಮಿಕರು ತಮ್ಮ ವೇತನ ಮಂಜೂರಿಗಾಗಿ ತಮ್ಮ ಕಚೇರಿ ಚೇಂಬರಗೆ ಬಂದು ಘೇರಾವ ಹಾಕಿ ಸಾರ್ವಜನಿಕರ ಕೆಲಸಕ್ಕೆ ಮತ್ತು ಪಾಲಿಕೆಯ ದಿನ ನಿತ್ಯದ ಆಡಳಿತದ ಕಾರ್ಯ ಕಲಾಪಕ್ಕೆ ಅಡ್ಡಿ ಉಂಟು ಮಾಡಿರುತ್ತಾರೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಅರ್ಜಿ ಸಲ್ಲಿಸಿದ ಮೆರೆಗೆ ಠಾಣೆ ಗುನ್ನೆ ನಂ:220/11 ಕಲಂ: 143, 147, 341, 186, ಸಂಗಡ 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment