ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ : ಶ್ರೀ ರಾಹುಲ್ ತಂದೆ ಗುರುಶಾಂತ ಪಟ್ಟೆದಾರ ಸಾ: ಮನೆ ನಂ. ಬಿ-16 ಎಂ.ಎಸ್.ಕೆ ಮಿಲ್ ಕ್ವಾಟರ್ಸ ಗುಲಬರ್ಗಾ ರವರು ನಾನು ನನ್ನ ಅಣ್ಣನ ಮೋಟರ ಸೈಕಲ್ ನಂ:ಕೆಎ-04, ಇಬಿ-8377 ಯಮಹ ಆರ್.ಎಕ್ಸ್ ದ್ವಿಚಕ್ದ ವಾಹನವನ್ನು ತೆಗೆದುಕೊಂಡು ನನ್ನ ಗೆಳೆಯನಾದ ಸಚಿನ ಇವರ ತಂದೆ ತಿರಿಕೊಂಡಿದ್ದರಿಂದ ಅಂತಿಮ ಸಂಸ್ಕಾರಕ್ಕಾಗಿ ಸ್ವಂತ ಗ್ರಾಮಕ್ಕೆಹೋಗಿ ಅಂತಿಮ ಸಂಸ್ಕಾರ ಮಗಿಸಿಕೊಂಡು ರಾತ್ರಿ 11:50 ಗಂಟೆ ಸುಮಾರಿಗೆ ಗುಲಬರ್ಗಾಕ್ಕೆ ಬಂದು ಮನೆಯ ಕಂಪೌಂಡದಲ್ಲಿ ಮೋಟರ ಸೈಕಲ ನಿಲ್ಲಿಸಿ ಮಲಗಿಕೊಂಡಿದ್ದು ಬೆಳಿಗ್ಗೆ 6:00 ಗಂಟೆಗೆ ಮೋಟರ ಸೈಕಲ ನೋಡಲಾಗಿ ಯಾರೋ ಕಳ್ಳರು ಮೋಟರ ಸೈಕಲ್ ನಂ:ಕೆಎ-04, ಇಬಿ-8377 ಯಮಹ ಆರ್.ಎಕ್ಸ್ ಮೋಡಲ್-2002, ಇಂಜಿನ ನಂ:47L516668 ಚೆಸ್ಸಿ ನಂ: 01L47L516668 ಇದರ ಅಂದಾಜು ಕಿಮ್ಮತ್ತು 25,000/-ಇದ್ದು ಈ ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:132/2011 ಕಲಂ:379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಸುರಕ್ಷತೆ ಇಲ್ಲದೇ ಕಾರ್ಮಿಕನ ಸಾವು:
ಗ್ರಾಮೀಣ ಠಾಣೆ ಗುಲಬರ್ಗಾ: ಶ್ರೀ ಬಸವರಾಜ ತಂದೆ ಶಂಕ್ರೆಪ್ಪಾ ಕಂಬಾರ ವಯ;45 ವರ್ಷ ಜ್ಯಾತಿ;ಕಂಬಾರ ಉ; ಕಂಬಾರಿಕೆ ಕೆಲಸ ಸಾ;ಮನ್ನಳ್ಳಿ ಗ್ರಾಮ ತಾ;ಜಿ;ಬೀದರ ಇವರ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶ ಏನೆಂದರೆ ನನ್ನ ಮಗ ರೇವಣಸಿದ್ದ @ ಸಿದ್ದು ಇತನು ಕಳೆದ 2 ತಿಂಗಳಿಂದ ಗುಲಬರ್ಗಾದ ತಾವರಗೇರಾ ಕ್ರಾಸ ಹತ್ತಿರ ಇರುವ ಬಜಾಜ ಅರ್ಥ ಫ್ಯಾಕ್ಟರಿಯಲ್ಲಿ ವೆಲ್ಡಿಂಗ ಕೆಲಸ ಮಾಡುತಿದ್ದನ್ನು. ನನ್ನ ಮಗ ರೇವಣಸಿದ್ದ @ ಸಿದ್ದು ಇತನ ಸಂಗಡ ಕೆಲಸ ಮಾಡುತ್ತಿದ್ದ ನರಸಪ್ಪಾ ಕರಕನಳ್ಳಿ ಎಂಬುವವನು ತಿಳಿಸಿದ್ದೆನೆಂದರೆ, ದಿನಾಂಕ 10-12-2011 ರಂದು 3-30 ಪಿ.ಎಂ.ದ ಸುಮಾರಿಗೆ ನಾನು ಮತ್ತು ಗುಂಡಪ್ಪಾ ಸಿಂಗೆ ,ದಶರಥ ತಾವರಗೇರಾ , ಮೂರು ಜನರು ಕೆಳಗೆ ಕೆಲಸ ಮಾಡುತ್ತಿದ್ದೇವು. ಆಗ ರೇವಣಸಿದ್ದ @ಸಿದ್ದು ಹಾಗೂ ಅಕ್ರಮ ಇವರು ಧೂಳಿನ ಹೊಗೆ ಹೋರಗೆ ಹಾಕುವ ಚಿಮಣಿ ಮಾಡುವ ಕುರಿತು ಛತ್ತಿನ ಮೇಲೆ ವೆಲ್ಡಿಂಗ ಮಾಡುತ್ತಿದ್ದರು, ಕೆಲಸ ಮಾಡುವಾಗ ಸರಿಯಾದ ಮುಂಜಾಗೃತಾ ರಕ್ಷಣಾ ಸಾಮಗ್ರಿಗಳಿಲ್ಲದೆ ಛತ್ತಿನ ಮೇಲಿಂದ ಕೆಳಗೆ ಬಿದ್ದಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ತೆಗೆ ಸೇರಿಕೆ ಮಾಡಿದಾಗ ಗುಣ ಮುಖನಾಗದೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ. ಬಜಾಜ ಅರ್ಥ ಫ್ಯಾಕ್ಟರಿಯವರ ಮೇಲೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 365/11 ಕಲಂ. 304 (ಎ) ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಮಟಕಾ ಪ್ರಕರಣ:
ಆಳಂದ ಪೊಲೀಸ ಠಾಣೆ: ಆಳಂದ ಪಟ್ಟಣದ ಬಸ್ಸನಿಲ್ದಾಣ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು 1 ರೂ ಗೆ 80 ರೂಪಾಯಿ ಗೆಲ್ಲಿರಿ ಮಟಕಾ ಚೀಟಿ ಬರೆಯಿಸಿರಿ ಅಂತಾ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ದೊರೆತೆ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂಧಿಯವರು ಹೋಗಿ ದಾಳಿ ಮಾಡಿ ಅವರ ಹೆಸರು ವಿಚಾರಿಸಲಾಗಿ ನೂರ ಅಹ್ಮದ ತಂದೆ ಅಹ್ಮದ ಸಾಬ ಭಗಾವಾನ್ ವ:- 46 ವರ್ಷ ಜಾ:- ಮುಸ್ಲಿಂ ಉ:- ಹಣ್ಣಿನ ವ್ಯಾಪಾರ ಸಾ:- ರೇವಣಸಿದ್ದೇಶ್ವರ ಕಾಲೋನಿ ಆಳಂದ ಅಂತಾ ಹೇಳಿದ್ದು ಆತನ ಹತ್ತಿರ ನಗದು 90/ ರೂ ಒಂದು ಬಾಲ ಪೇನ ಅಂಕಿ ಸಂಖ್ಯೆ ಉಳ್ಳ 1 ಮಟಕಾ ಚೀಟಿ ದೊರೆತ್ತಿದ್ದು ಇನ್ನೊಬ್ಬರ ಹೆಸರು ವಿಚಾರಿಸಲಾಗಿ ಅಲ್ಲಿ ಸಾಬ ತಂದೆ ಅಹ್ಮದ ಸಾಬ ಭಗಾವಾನ್ ವ:- 52 ವರ್ಷ ಜಾ:- ಮುಸ್ಲಿಂ ಉ:- ಹಣ್ಣಿನ ವ್ಯಾಪಾರಸಾ: ಖಾಜಿ ಮೋಹಲ ಆಳಂದ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ನಗದು 70/ ರೂ ಒಂದು ಬಾಲ ಪೇನ, ಅಂಕಿ ಸಂಖ್ಯೆ ಉಳ್ಳ 1 ಮಟಕಾ ಚೀಟಿ ದೊರೆತ್ತಿದ್ದರಿಂದ ಠಾಣೆ ಗುನ್ನೆ ನಂ: 284/2011 ಕಲಂ 420 ಐಪಿಸಿ ಮತ್ತು 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಪ್ರಕರಣ:
ಆಳಂದ ಪೊಲೀಸ ಠಾಣೆ: ಶ್ರೀ ಪಂಡಿತ ತಂದೆ ಮಲ್ಕಣ್ಣ ಶೇರಿಕಾರ ಉ: ಸಮಾಜಸೇವಕ ಸಾ ಸುಲ್ತಾನಪೂರ ಗಲ್ಲಿ ಆಳಂದ ರವರು ನಾನು ದಿನಾಂಕ 10/12/2011 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಹೊಲದಿಂದ ಮರಳಿ ಮನೆಗೆ ಬರುವಾಗ ಆಳಂದ ತಡಕಲ ರೋಡಿನ ಆಳಂದ ಹತ್ತಿರವಿರುವ ದಬದಬಿ ಹಳ್ಳದ ಸೇತುವೆ ಮೇಲೆ ಚೆಕ್ ಡ್ಯಾಮ ನೀರಿನ ಮೇಲೆ ಒಂದು ಕೂಸು ತೇಲಿದ ಬಗ್ಗೆ ಜನರು ಅಂದಾಡುವದನ್ನು ಕೇಳಿ ನಾನು ಹೋಗಿ ನೋಡಲಾಗಿ ಮೃತಪಟ್ಟ ಅಂದಾಜು 7/8 ತಿಂಗಳದ ಕೂಸು ಇದ್ದು ಯಾರೋ ಕೂಸಿನ ಜನನವನ್ನು ಮುಚ್ಚಿಡುವ ಸಂಬಂಧ ಆ ಕೂಸನ್ನು ಚಕ್ ಡ್ಯಾಮಿನ ನೀರಿನಲ್ಲಿ ಎರಡು ಮೂರು ದಿವಸಗಳ ಹಿಂದೆ ಎಸೆದು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 285/2011 ಕಲಂ 318 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Sunday, December 11, 2011
GULBARGA DIST REPORTED CRIMES
Subscribe to:
Post Comments (Atom)
No comments:
Post a Comment