Police Bhavan Kalaburagi

Police Bhavan Kalaburagi

Thursday, December 22, 2011

GULBARGA DIST REPORTED CRIMES

ದರೋಡೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಪ್ರಮೋದ ತಂದೆ ದೇವಿಂದ್ರಪ್ಪ ಚಿಂಚನಸೂರ ಸಾ: ಕಡಗಂಚಿ ತಾ:ಆಳಂದ ಜಿ: ಗುಲಬರ್ಗಾರವರು ನಾನು ದಿನಾಂಕ 21-12-11 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅನ್ನಪೂರ್ಣ ಕ್ರಾಸದಿಂದ ಕೇಂದ್ರ ಬಸ ನಿಲ್ದಾಣಕ್ಕೆ ಹೋಗುವ ಕುರಿತು ಕೈ ಮಾಡಿ ಆಟೋರಿಕ್ಷಾ ಕೆಎ 32 7326 ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದು ಆಟೋದಲ್ಲಿ ಆಟೋ ಚಾಲಕ ಮತ್ತು ಹಿಂದೆ ಕುಳಿತ ಇನ್ನೊಬ್ಬ ಇಬ್ಬರು 25-30 ವರ್ಷ ವಯಸ್ಸಿನವರು ರಾತ್ರಿ 8-30 ಗಂಟೆ ಸುಮಾರಿಗೆ ಕೇಂದ್ರ ಬಸ ನಿಲ್ದಾಣದ ಹತ್ತಿರ ಬಂದಾಗ ಆಟೋ ನಿಲ್ಲಿಸಲು ಹೇಳಿದಾಗ, ಆಟೋದ ಹಿಂದೆ ಕುಳಿತ ವ್ಯಕ್ತಿ ಸುಮ್ಮನೆ ಕೂಡು ಸೂಳೇ ಮಗನೇ ಅಂತಾ ಬೈದು ಮುಷ್ಟಿ ಮಾಡಿ ಮುಖಕ್ಕೆ ಹೊಡೆದು ಬಾಯಿ ಒತ್ತಿ ಹಿಡಿದು ಮುಂದೆ ಕಣ್ಣಿ ಮಾರ್ಕೆಟ ಹತ್ತಿರ ಆಟೋ ಸ್ವಲ್ಪ ಸ್ಲೋ ಮಾಡಿ ಆಟೋ ಚಾಲಕ ಮತ್ತು ಹಿಂದೆ ಕುಳಿತವನು ನಿನ್ನ ಹತ್ತಿರ ಎಷ್ಣು ಹಣ ಇದೆ ತೆಗೆ ಅಂತಾ ಹೇಳಿ ಶರ್ಟ ಮತ್ತು ಪ್ಯಾಂಟ ಜೇಬಿನಲ್ಲಿ ಕೈ ಹಾಕಿ ಲಾವಾ ಕಂಪನಿಯ ಮೋಬಾಯಿಲ ಕಿತ್ತುಕೊಂಡರು. ಹೀರಾಪೂರ ರಿಂಗ ರೋಡ ಮೊಲಕ ಚೋರ ಗುಮ್ಮಜ ಗುಡ್ಡದ ಹತ್ತಿರ ಆಟೋ ನಿದಾನಗತಿಯಲ್ಲಿದ್ದಾಗ ಒಬ್ಬನ್ನು ಕೆಳೆಗೆ ಹಾರಿದನು. ಆಗ ಇಬ್ಬರು ಬಂದು ಮತ್ತೆ ನನಗೆ ಜಬರ ದಸ್ತಿಯಿಂದ ಆಟೋದಲ್ಲಿ ಕೂಡಿಸಿಕೊಂಡು ಆಳಂದ ಚೆಕ್ಕ ಪೋಸ್ಟ ಮೊಲಕ ಸೈಯ್ಯದ ಚಿಂಚೋಳಿ ಕ್ರಾಸ ಹತ್ತಿರ ಒಳಗೆ ಕರೆದುಕೊಂಡು ಹೋಗಿ ನನಗೆ ಇಳಿಸಿ ಕೈಯಿಂದ ಪ್ಲಾಸ್ಟಿಕ ಪೈಪದಿಂದ ಬಲ ಮೊಳಕೈ ಬೆನ್ನಿಗೆ ಹೊಡೆದು ದು:ಖಾಪತಗೊಳಿಸಿ ಪ್ಯಾಂಟಿನ ವಾಚ ಪಾಕೇಟದಲ್ಲಿದ್ದ 3100/- ರೂ. ಜಬರ ದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 375/2011 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಸದಾನಂದ ತಂದೆ ಮಲ್ಲಿಕಾರ್ಜುನ @ ಮಲ್ಕಪ್ಪ ವಾಲೀಕರ ಉ:ಟಂಟಂ ಕೆಎ 32 ಎ 9151 ಚಾಲಕ ಸಾ:ಯಳವಂತಗಿ ತಾ:ಜಿ: ಗುಲಬರ್ಗಾ ರವರು ನನಗೆ ನನ್ನ ಸಂಬಂಧಿಕರು ಹುಮನಾಬಾದ ರಿಂಗ ರೋಡಿಗೆ ಬರುವಂತೆ ಹೇಳಿದ್ದರಿಂದ ನಾನು ಅಲ್ಲಿಗೆ ಹೋಗಿ ಅವರೆಲ್ಲರನ್ನೂ ಕೂಡಿಸಿಕೊಂಡು ಉಪಳಾಂವ ಕ್ರಾಸ ದಾಟಿ ಬಿರಾದಾರ ಕಂಕರ ಮಶೀನ ಎದುರು ರೋಡಿನ ಮೇಲೆ ನನ್ನ ಸೈಡ ಹಿಡಿದು ನಾನು ಚಲಾಯಿಸುತ್ತಿದ್ದಾಗ ಹುಮನಾಬಾದ ರೋಡ ಕಡೆಯಿಂದ ಲಾರಿ ಕೆಎ 32 ಬಿ 5826 ಚಾಲಕ ಪ್ರಕಾಶ ತಂದೆ ಲಕ್ಕಪ್ಪ ಫಿರಂಗಿ ಸಾ: ಗೌನಳ್ಳಿ ತಾ:ಚಿಂಚೋಳಿ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಟಂಟಂ ಕೆಎ 32 ಎ 9151 ನೇದ್ದಕ್ಕೆ ಡಿಕ್ಕಿ ಪಡಿಸಿ ಲಾರಿ ಸಮೇತ ಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 376/2011 ಕಲಂ 279, 337,338 ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: