Police Bhavan Kalaburagi

Police Bhavan Kalaburagi

Thursday, December 29, 2011

GULBARGA DIST REPORTED CRIMES

ಗಂಡನ ಕಿರುಕುಳ ತಾಳಲಾರದೇ ಹೆಂಡತಿ ಆತ್ಮಹತ್ಯೆ:
ಮಹಿಳಾ ಠಾಣೆ:
ಶ್ರೀ ಗುರುಶಾಂತ ತಂದೆ ಶರಣಪ್ಪಾ ಸಂಗೋಳಿಗಿ ಸಾ: ಕೋರಳ್ಳಿ ತಾ: ಆಳಂದ ಜಿ: ಗುಲಬರ್ಗಾ ರವರು ನನಗೆ 3 ಜನ ಹೆಣ್ಣು ಮಕ್ಕಳಿದ್ದು 2 ಗಂಡು ಮಕ್ಕಳು ಇರುತ್ತಾರೆ ಎಡನೇಯ ಮಗಳಾದ ಬಸಮ್ಮಾ @ ಮಾಯಾ ಇವಳಿಗೆ ನಮ್ಮ ದೂರದ ಸಂಭಂದಿಯಾದ ಆಳಂದ ತಾಲೂಕಿನ ಕಣಮುಸ ಗ್ರಾಮದ ವಿಜಯಕುಮಾರ ಇತನೊಂದಿಗೆ ಸಂಪ್ರದಾಯದಂತೆ 3 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ ಸ್ವಖುಷಿಯಿಂದ 41.000/- ರೂ, 3 ತೊಲೆ ಬಂಗಾರ ಕೊಟ್ಟಿದ್ದು ಇರುತ್ತದೆ, ಇವರು ಗುಲಬರ್ಗಾದ ಜೆ.ಆರ್ ನಗರ ಗುಲಬರ್ಗಾದ ಲ್ಲಿ ವಾಸವಾಗಿರುತ್ತಾರೆ ಅಳಿಯ ನಿಜಯಕುಮಾರ ಇತನು ಕುಡಿಯುವದು ಮತ್ತು ಇಸ್ಪೇಟ ಆಡುವ ಚಟದವನಿದ್ದು ಅದಕ್ಕಾಗಿ ಅವನು ಸಾಲ ಮಾಡಿಕೊಂಡಿದ್ದನು ಅವನಿಗೆ ಬಹಳ ಸಾಲವಾಗಿದ್ದರಿಂದ ನನ್ನ ಮಗಳೊಂದಿಗೆ ಜಗಳ ತೆಗೆದುಕೊಂಡು ನೀನು ತವರು ಮನೆಯಿಂದ ಹಣ ತೆಗೆದುಕೊಂಡು ಬಾ ನನಗೆ ಬಹಳ ಸಾಲವಾಗಿದೆ ಅಂತಾ ಯಾವಾಗಲು ಅವಳೊಂದಿಗೆ ಕಿರಿಕಿರಿ ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದನು. ಈ ವಿಷಯವನ್ನು ನನ್ನ ಮಗಳು ಮಾಯಾ @ ಬಸಮ್ಮಾ ನಮಗೆ ತಿಳಿಸಿದಾಗ ನಾವು ಅಳಿಯ ಮಗಳುಚೆನ್ನಾಗಿ ಇರಬೇಕು ಅಂತಾ ಹೇಳಿ ನಮ್ಮ ಗ್ರಾಮದ ಬೀಮಾಶಂಕರ ಮುನೋಳಿ ಇವರ ಹತ್ತಿರ1.5 ಲಕ್ಷ ರೂ ಕೋಡಿಸಿದ್ದು ಇರುತ್ತದೆ. ಮತ್ತು ನಾನು ಕೂಡ ಸಾಲದ ರೂಪಾದಲ್ಲಿ 2 ಲಕ್ಷ ರೂ ಕೊಟಿದ್ದು ಇರುತ್ತದೆ ಈಗ 2 ದಿವಸಗಳ ಹಿಂದೆ ಅಳಿಯನ ಅಣ್ಣನಾದ ರಾಜು ಇತನು ಫೋನ ಮಾಡಿ ನಿಮ್ಮ ಅಳಿಯನಿಗೆ ಇನ್ನು 90 ಸಾವಿರ ರೂಪಾಯಿ ಸಾಲವಿದೆ ಅದರ ಸಲುವಾಗಿ ಗಂಡ ಹೆಂಡತಿ ಜಗಳ ಮಾಡುತ್ತಿದ್ದಾರೆ ಮನೆಯೇ ದಾಖಲಾತಿ ಮೇಲೆ ಇನ್ನೂ ಸಾಲ ಕೊಡಿಸು ಅಂತಾ ಪೋನ ಮಾಡಿದ ಅದಕ್ಕೆ ನಾನು ಕಬ್ಬಿನ ಬಿಲ್ಲು ಬರುವವರೆಗೂ ತಾಳು ಅಂತಾ ಹೇಳಿದ್ದೆ, ನನ್ನ ಮಗಳು ಕೂಡ ಇನ್ನು ಸ್ವಲ್ಪ ಕೊಡಿಸು ನಮ್ಮಿಬ್ಬರಲ್ಲಿ ಅದೇ ತಕರಾರರು ನಡೆಯುತ್ತದೆ ಅಂತಾ ಹೇಳುತ್ತಿದ್ದಳು. ದಿನಾಂಕ 29.12.2011 ರಂದು ಬೆಳಗ್ಗೆ 7.00 ಗಂಟೆ ಸುಮಾರಿಗೆ ನಿಮ್ಮ ಮಗಳು ಮಾಯಾ @ ಬಸಮ್ಮಾ ಇವಳು ಊರಲು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ತಿಳಿಸಿದ ಮೇರೆಗೆ ನಾವು ಬಂದು ನೋಡಲು ನಿಜವಿರುತ್ತದೆ. ನನ್ನ ಮಗಳ ಸಾವಿಗೆ ಆಕೆಯ ಗಮಡನ ಕಾರಣ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/2011 ಕಲಂ 498(ಎ),306 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.

ಮೋಸ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ನಾನು ಶ್ರೀ ಹರೀಶ ತಂದೆ ಶ್ರೀರಾಮ ಉ: ಶ್ರೀರಾಮ ಚಿಟ್ಸ ಕರ್ನಾಟಕ ಪ್ರೈವೇಟ್ ಲಿಮಿಟೆಡ ಬೆಂಗಳೂರು ನಲ್ಲಿ ಅಸಿಸ್ಟೆಂಟ ಜನರಲ್ ಮ್ಯಾನೇಜರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಂಪನಿಯ ಪ್ರತಿನಿಧಿಯಾಗಿರುತ್ತೆನೆ. ಗುಲಬರ್ಗಾದಲ್ಲಿ ನಮ್ಮ ಶಾಖೆ ಇದ್ದು ನಮ್ಮದೆ ಗ್ರೂಪ್ ಕಂಪನಿಯಾದ ಶ್ರೀರಾಮ ಸಿಟಿ ಯುನಿಯನ್ ಫೈನಾನ್ಸದಿಂದ ಗ್ರಾಹಕರಿಗೆ ಸಾಲ ನೀಡಲಾಗುತ್ತದೆ. ಮಂಜೂರು ಮಾಡಬೇಕಾದ ಸಾಲದ ಬಗ್ಗೆ ನಾನು ಸ್ಥಳ ಪರಿಶೀಲನೆ ಹಾಗೂ ಕಾಗದ ಪತ್ರಗಳ ಪರಶೀಲನೆ ಮಾಡುವ ಹಕ್ಕುದಾರನಾಗಿರುತ್ತೇನೆ ಹೀಗಾಗಿ ಗುಲಬರ್ಗಾದ ಅನ್ವರ ಪಾಶಾ ತಂದೆ ಅಬ್ದುಲ ಹಫೀಜ ಸಾ: ಭರತನಗರ ತಾಂಡಾ ಗುಲಬರ್ಗಾ ಎಂಬಾತನು ಫಾಲ್ಕನ್ ಪೈಪ್ಸ ಎಂಬ ಪೈಪ ತಯಾರಿಕೆಯ ಕಂಪನಿಗೊಸ್ಕರ ಇಪ್ಪತ್ತು ಲಕ್ಷ ರೂಪಾಯಿ ಸಾಲ ಮಂಜೂರು ಮಾಡುವಂತೆ ಕೋರಿ ಶ್ರೀರಾಮ ಸಿಟಿ ಯುನಿಯನ್ ಫೈನಾನ್ಸ ಗುಲಬರ್ಗಾದಲ್ಲಿ ಅರ್ಜಿ ಸಲ್ಲಿಸಿದ್ದು ಆ ಪ್ರಕಾರವಾಗಿ ಪ್ರಾಥಮಿಕ ಹಂತದ ವಿಚಾರಣೆಯನ್ನು ರಾಘವೆಂದ್ರ ಪ್ರಾಂತೀಯ ವ್ಯವಸ್ಥಾಪಕರು ಕೈಕೊಂಡು ಅನ್ವರಪಾಶಾ ಇತನು ಕೊಟ್ಟ ದಾಖಲಾತಿಗಳನ್ನು ಆಧಾರವಾಗಿಟ್ಟುಕೊಂಡು ಅಲ್ಲದೆ ಇತನಿಗೆ ಸಾಲ ಮಂಜೂರಿಕರಿಸುವದಕ್ಕಾಗಿ ಸಿರಾಜೊದ್ದಿನ್ ತಂದೆ ಮಹ್ಮದ ನಿಜಾಮೊದ್ದಿನ್ ಎಂಬುವವರ ಸ್ಥಿರಾಸ್ತಿಯ ಕಾಗದ ಪತ್ರಗಳನ್ನು ಭದ್ರತೆಯನ್ನಾಗಿಟ್ಟುಕೊಂಡು ಅಲ್ಲದೆ ವೈಯಕ್ತಿಕ ಭದ್ರತೆಯನ್ನಾಗಿ ಅಜ್ಮಲ ಅಹಮದ ತಂದೆ ಜಮೀರ ಅಹಮದ ಗೋಳಾ ಇವರ ಸ್ಯೂರಿಟಿಯನ್ನು ಪಡೆದುಕೊಂಡು ದಿನಾಂಕ 02/03/2010 ರಂದು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮಂಜೂರಿಸಿದ್ದು ಅದೆ. ಅನ್ವರ ಪಾಶಾ ಇತನು ಕೆಲವು ತಿಂಗಳ ಸಾಲದ ಹಣವನ್ನು ಪಾವತಿ ಮಾಡಿದ್ದು ತದನಂತರ ಪಾವತಿ ಮಾಡದೆ ಇದ್ದ ಪ್ರಯುಕ್ತ ನಾವು ಬೇಟಿ ನೀಡಿದಾಗ ಫಾಲ್ಕನ ಪೈಪ್ಸ ಎಂಬ ಸ್ಥಳದಲ್ಲಿ ಬೇರೊಬ್ಬ ವ್ಯಕ್ತಿ ಮಹ್ಮದ ಅಮೀರ ಶಕೀಬ ಎಂಬುವವರು ಇರುತ್ತಾರೆ. ನಂತರ ಅನ್ವರ ಪಾಶಾ ಇವರನ್ನು ಹುಡುಕಾಡಿ ಈ ಬಗ್ಗೆ ವಿಚಾರಿಸಲಾಗಿ ತಾನು ಫಾಲ್ಕನ ಪೈಪ್ಸನ ಮಾಲಿಕ ಅಲ್ಲಾ ಆದರೆ ಆದಿಲ ಅಹಮದ @ ಸೊಹೆಲ ತಂದೆ ಎಕ್ಬಾಲ ಅಹಮದ ಅವರು ಹೇಳಿದ ಪ್ರಕಾರ ಸಾಲಕ್ಕೆ ಅರ್ಜಿ ಹಾಕಿದ್ದು ಮಂಜೂರಾದ ಸಾಲದ ಹಣ ಪೂರ್ತಿ ಆದಿಲ ಅಹಮದ @ ಸೊಹೆಲ ತಂದೆ ಎಕ್ಬಾಲ ಅಹಮದ ಇವನೆ ತೆಗೆದುಕೊಂಡಿರುತ್ತಾನೆ ಅಂತಾ ಕಾರಣ ಅನ್ವರಪಾಶಾ, ಆದಿಲ ಅಹಮದ, ಸಿರಾಜೊದ್ದಿನ್, ಅಜಮಲ ಅಹಮದ, ಮಹ್ಮದ ಅಮೀರಶಕೀಬ ಮತ್ತು ಪ್ರಾಂತೀಯ ವ್ಯವಸ್ಥಾಪಕರಾದ ರಾಘವೆಂದ್ರ ಇವರೆಲ್ಲರೂ ಸೇರಿ ಕಂಪನಿಗೆ ಮೊಸ ಮಾಡುವ ಉದ್ದೇಶದಿಂದ ಕಂಪನಿಯಿಂದ ಸಾಲ ಮಂಜೂರು ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ 220/11 ಕಲಂ 147, 120(ಬಿ), 420, 406 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: