ಆಳಂದ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬಸಣ್ಣ ಪೊಲೇಸೆ ಪ್ರಭಾರಿ ಮುಖ್ಯ ಗುರುಗಳು ಸಾ: ಶುಕ್ರವಾಡಿ ಶಾಲೆ ತಾ:ಆಳಂದ ರವರು, ದಿ: 14-11-11 ರಂದು ರಾತ್ರಿ ಮತ್ತು ದಿ: 15-11-11 ರ ಮುಂಜಾನೆ 09.30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಅಡುಗೆ ಕೋಣೆಯ ಬಾಗಿಲ ಕೀಲಿ ಮುರಿದು ಕೋಣೆಯಲ್ಲಿದ್ದ ಅಂದಾಜು ಬೆಲೆ 1500 ರೂಪಾಯಿ ಬೇಲೆ ಬಾಳುವ ಇಂಡೇನ್ ಸಿಲೆಂಡರ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವು ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆ ಗುನ್ನೆ ನಂ. 303/2011 ಕಲಂ 457, 380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಠಾಣೆ : ಶ್ರೀಮತಿ ಕಲಾವತಿ ಗಂಡ ಸೈದಪ್ಪಾ ಬಿದನೂರ ಸಾ: ಆಶ್ರಯಾ ಕಾಲೋನಿ ಗುಲಬರ್ಗಾ ರವರು, ನನ್ನ ಮಗಳಾದ ರಮಾಬಾಯಿ ಇವಳು ದಿ: 27-12-11 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಅಂಗಡಿಗೆ ಹೋಗುತ್ತೇನೆಂದು ಹೇಳಿ ಹೋದವಳು ಇನ್ನೂವರೆಗೆ ಬಂದಿರುವುದಿಲ್ಲಾ. ನಾವು ಎಲ್ಲಾ ಕಡೆ ಮತ್ತು ನಮ್ಮ ಸಂಬಂದಿಕರ ಮನೆಗೆ ಹೋಗಿ ವಿಚಾರಿಸಲಾಗಿ ಇವಳು ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲಾ. ವಿಕ್ರಮ ಇತನ ಮೇಲೆ ಸಂಶಯವಿದ್ದು ರಮಾ ಇವಳಿಗೆ ದಾರಿ ತಪ್ಪಿಸಿ ಕರೆದುಕೊಂಡು ಹೋಗಿರುತ್ತಾನೆ ಕಾರಣ ನಮ್ಮ ಮಗಳನ್ನು ಹುಡುಕಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಮಹಿಳಾ ಠಾಣಾ ಗುನ್ನೆ ನಂ 129/2011 ಕಲಂ 363 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸಂಜೀವಕುಮಾರ ಸಾಃ ಎ.ಇ.ಸಿಸಿಡಿಐ ಜೇಸ್ಕಾಂ ಯುನಿಟ್ ನಂ (8) ಗುಲಬರ್ಗಾ ರವರು,ದಿ: 30-12-2011 ರ ಬೆಳಿಗ್ಗೆ 1-30 ಎ.ಎಮ್.ಕ್ಕೆ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ದರ್ಗಾ ಏರಿಯಾದಲ್ಲಿ ಇರುವ ಜೀನ್ಸ್ ಫ್ಯಾಷನ್ ಅಂಗಡಿ ಹತ್ತಿರ ಇರುವ ಲೈಟಿನ ಕಂಬಕ್ಕೆ ಮತ್ತು ಜೀನ್ಸ್ ಬಟ್ಟೆ ಅಂಗಡಿಯ ಶಟರಗೆ ಅಪಘಾತಪಡಿಸಿ ತನ್ನ ವಾಹನ ಸಮೇತ ಓಡಿಹೋಗಿದ್ದು ಅಪಘಾತದಿಂದ ಲೈಟಿನ ಕಂಬ ಜಖಂಗೊಂಡು ಅಂದಾಜು 14000/- ರೂ. ಹಾನಿ ಆಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ. 79/2011 ಕಲಂ 279, 427 ಐಪಿಸಿ 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀಮತಿ ಅನ್ಣಾಪೂರ್ಣ ಗಂಡ ಚಂದಪ್ಪಾ ಕೋಳಿಗೇರಿ ಸಾ: ಜಿ.ಡಿ.ಎ. ಲೇಔಟ ಗುಲಬರ್ಗಾ ರವರು, ದಿ:30-12-11 ರಂದು 10-00 ಗಂಟೆಯ ಸುಮಾರಿಗೆ ನಾನು ಅಂಗಡಿಯಲ್ಲಿ ಕುಳಿತಿರುವಾಗ ಇಬ್ಬರು ಯುವಕರು ಒಂದು ಮೋಟಾರ ಸೈಕಲ್ ಮೇಲ್ ಬಂದು ರಾಜು ಸುಪಾರಿ ದೇವ ಅಮ್ಮಾ ಅಂತಾ ಹಿಂದಿ ಬಾಷೆಯಲ್ಲಿ ಕೇಳಿದರು. ಆಗ ನಾನು ರಾಜು ಸುಪಾರಿ ತೆಗೆದುಕೊಟ್ಟು ಹಣ ತೆಗೆದುಕೊಳ್ಳುವಾಗ ಸದರಿ ಯುವಕರು ನನ್ನ ಎರಡು ಕೈ ಒತ್ತಿ ಹಿಡಿದು ಕೈಗಳಲ್ಲಿ ದ್ದ ಒಟ್ಟು 5 ತೊಲೆ ಬಂಗಾರದ 4 ಬಿಲ್ವರ ಬಳೆಗಳನ್ನು ಬಿಚ್ಚಿಕೊಂಡು ತಮ್ಮ ಮೋಟಾರ ಸೈಕಲ್ ಮೇಲೆ ಓಡಿಹೋದರು. ಕಾರಣ ದೋಚಿಕೊಂಡು ಹೋದ ಬಂಗಾರದ ಬಿಲ್ವಾರ ಬಳೆಗಳನ್ನು ಮತ್ತು ಆರೋಪಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ.387/2011 ಕಲಂ. 392 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment