Police Bhavan Kalaburagi

Police Bhavan Kalaburagi

Wednesday, January 11, 2012

GULBARGA DIST REPORTED CRIME



ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ಅಜೀತ ತಂದೆ ಶ್ರೀಕಾಂತ ಯಳಮೇಲಿ ಸಾ: ಪ್ಲಾಟ ನಂ. 18 'ಸೂರ್ಯ ಕಿರಣ' ಬೇಂದ್ರೆ ನಗರ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ನನ್ನ ತಮ್ಮ ಮಂಜುನಾಥನು ಶಿವಾನಂದರೆಡ್ಡಿಯ ತಂಗಿಯೊಂದಿಗೆ ‘ಲವ’ ಮಾಡುತ್ತಿದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡು ನನಗೆ ಮತ್ತು ನನ್ನ ತಮ್ಮನಿಗೆ ಹೊಡೆಯಲು ಹೊಂಚು ಹಾಕುತ್ತಿದ್ದನು. ನಾನು ಮೋಟಾರ ಸೈಕಲ್ ಮೇಲೆ ಮೋಬಾಯಿಲ್ ಅಂಗಡಿಗೆ ಬರುತ್ತಿರುವಾಗ ಶಿವಾನಂದರೆಡ್ಡಿ ತಂದೆ ಭೂತನಗೌಡ ಮಾಲಿ ಪಾಟೀಲ ಸಾ: ದತ್ತ ನಗರ ಗುಲಬರ್ಗಾ ಇತನು ಮೋಟಾರ ಸೈಕಲ್ ಮೇಲೆ ಬಂದು ನನಗೆ ಡಾ: ಎಸ್.ಎಸ್ ಪಾಟೀಲ ಮನೆಯ ಹತ್ತಿರ ರಸ್ತೆ ಮೇಲೆ ಅಡ್ಡಗಟ್ಟಿ ನಿಲ್ಲಿಸಿ ' ಏ ಹುಚ್ಚ ಸುಳ್ಯಾ ಮಗನೇ ನಿನಗೆ ಇವತ್ತು ಬಿಡಲ್ಲಾ' ಅಂತಾ ಬೈದವನೇ ನನ್ನ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಮುಖಕ್ಕೆ ಹೊಡೆದನು ಮತ್ತು ಅಲ್ಲೆ ಬಿದ್ದಿದ್ದ ಕಲ್ಲಿನಿಂದ ನನ್ನ ತಲೆಗೆ ಹೊಡೆದಿದ್ದರಿಂದ ತಲೆ ಒಡೆದು ರಕ್ತ ಸ್ರಾವ ಆಗಿರುತ್ತದೆ. ಬಾಯಿ, ತುಟಿಗೆ, ಮುಗಿಗೆ, ಗಾಯವಾಗಿ ಮೂಗಿನಿಂದ ರಕ್ತ ಸ್ವಾವ ಆಗುತ್ತಿದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:3/2012 ಕಲಂ. 341,323,324,504,506 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: