Police Bhavan Kalaburagi

Police Bhavan Kalaburagi

Thursday, January 12, 2012

GULBARGA DIST REPORTED CRIME

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ :
ದಿನಾಂಕ: 12/01/12 ರಂದು ಠಾಣೆಯ ಹದ್ದಿಯಲ್ಲಿ ಶ್ರೀ.ಗಜೇಂದ್ರ ಸಿ.ಪಿ.ಸಿ ಮತ್ತು ಸುಧಾಕರ ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ತಿರಂದಾಜ ಟಾಕೀಜ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಹಿಡಿದು ವಿಚಾರಿಸಲು ತನ್ನ ಹೆಸರು ಶಂಕರ ತಂದೆ ನಿಜಲಿಂಗಪ್ಪ ಕಡಾಮಗೇರಿ, ಸಾ ಬಾಪೂನಗರ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 1/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: