Police Bhavan Kalaburagi

Police Bhavan Kalaburagi

Tuesday, January 17, 2012

GULBARGA DIST REPORTED CRIME



ಕೊಲೆ ಪ್ರಕರಣ:
ನರೋಣಾ ಪೊಲೀಸ ಠಾಣೆ:
ದಿನಾಂಕ:16/01/2012 ರಂದು ನಾನು ಶ್ರೀಮಂತರಾವ ಎ ಎಸ್ ಐ ನರೋಣಾ ಪೊಲೀಸ ಠಾಣೆಯಲ್ಲಿದ್ದಾಗ ನನಗೆ ಬೇರೆ ಮೋಬೈಲ್ ನಂ: 9886382800 ರ ದಿಂದ ಕರೆ ಬಂದಿದ್ದೆನೆಂದರೆ, ಕಡಗಂಚಿ ಗ್ರಾಮದ ಸಿಮಾಂತರ ಸಿದ್ದಾರೂಡ ಚೌಲ ಇವರ ಹೊಲದ ಹತ್ತಿರದ ಕಚ್ಚ ದಾರಿಯಲ್ಲಿ ಅಪರಿಚಿತ ಒಬ್ಬಹೆಣ್ಣು ಮಗಳು ಅಂದಾಜು 22-25 ವರ್ಷದವಳು ಇವಳು ಸತ್ತು ಬಿದ್ದಿರುತ್ತಾಳೆ. ಮುಖದ ಮೇಲೆ ಭಾರಿಗಾಯವಾಗಿರುತ್ತದೆ ಅಂತಾ ಹೇಳಿದ್ದರಿಂದ ನಾನು ನನ್ನ ಸಂಗಡ ಹೆಚ ಸಿ ಮಹಾಂತಪ್ಪ ಇವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಒಬ್ಬ ಹೆಣ್ಣು ಮಗಳು ಅಪರಿಚಿತವಿದ್ದು ಅವಳ ಹೆಸರು ವಿಳಾಸ ಗೊತ್ತಾಗಿಲ್ಲ. ಶವ ಪರಿಶೀಲಿಸಿ ನೋಡಲು ಎಡಕಪಾಳ ಮೇಲೆ ಕಣ್ಣಿಗೆ , ಹುಬ್ಬಿನ ಮೇಲೆ. ಬಾಯಿಗೆ , ಭಾರಿಗಾಯ ಮಾಡಿ ಕೋಲೆ ಮಾಡಿದ್ದು ಕಂಡು ಬಂದಿರುವದರಿಂದ ನಾನು ಠಾಣೆಗೆ ಬಂದು ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 10/2012 ಕಲಂ 302 201 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: