ಅಪಘಾತ ಪ್ರಕರಣ ಒಂದು ಸಾವು:
ಫರಹತಾಬಾದ ಪೊಲೀಸ್ ಠಾಣೆ : ರಾಜು ತಂದೆ ಬಲರಾಮ ರಾಠೋಡ ಸಾ: ಅಲ್ಟೊ ತಾ:ಅಚ್ಚಪೇಟ ಜಿ: ಮಹಬೂಬ ನಗರ ರಾಜ್ಯ: ಆಂದ್ರ ಪ್ರದೇಶರವರು ನಾನು ಮತ್ತು ಸಂಬಂಧಿಕರು ಒಂದು ತಿಂಗಳ ಹಿಂದೆ ಕೂಲಿ ಕೇಲಸ ಕುರಿತು ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮಕ್ಕೆ ಬಂದಿರುತ್ತೆವೆ. ದಿನಾಂಕ 31/12/2011 ರಂದು ರಾತ್ರಿ 22:30 ಗಂಟೆಯ ಸುಮಾರಿಗೆ ನಾವೇಲ್ಲರು ಜೇವರ್ಗಿಯಿಂದ ಟಾಟಾ ಎ.ಸಿ ವಾಹನದಲ್ಲಿ ಕೂಳಿತು ಗುಲಬರ್ಗಾಕ್ಕೆ ಬರುತ್ತಿದ್ದೆವು ದಾರಿಮಧ್ಯ ರಾತ್ರಿ 00:30 ಗಂಟೆಯ ಸುಮಾರಿಗೆ ಸರಡಗಿ (ಬಿ) ಕ್ರಾಸದಿಂದ ಹೋಗುತ್ತಿದ್ದಾಗ ಟಾಟಾ ಎ.ಸಿ ಚಾಲಕನು ತನ್ನ ಟಾಟಾ ಎ.ಸಿ ಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಭಾಗದಲ್ಲಿ ನಿಂತಿದ ಲಾರಿಗೆ ಡಿಕ್ಕಿ ಪಡಿಸಿರುತ್ತಾನೆ. ಇದ್ದರಿಂದ ಟಾಟಾ ಎ.ಸಿ ವಾಹನದಲ್ಲಿದ ಮಂಗಿ ಗಂಡ ಶಿವಯ್ಯಾ ಇವಳಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತಾಳೆ. ಮತ್ತು ಉಳಿದವರಾದ ಭದ್ದು ತಂದೆ ಫರತಾಳ. ಸರಿತಾ. ಹಾಗೂ ಜ್ಯೋತಿ. ಇವರೇಲ್ಲರಿಗೆ ಸಾದಾಗಾಯವಾಗಿರುತ್ತದೆ. ಆಗ ನಾವು ಕುಳಿತಿದ್ದ ಟಾಟಾ ಎ.ಸಿ ನಂ ನೋಡಲಾಗಿ ಕೆಎ-32 ಎ-6825 ನೇದ್ದು ಇದ್ದು ಅಪಘಾತಗೊಳಗಾದ ಲಾರಿ ನಂ ನೋಡಲಾಗಿ ಎಮ್.ಹೆಚ್.-13 ಬಿ-4000 ನೇದ್ದು ಇರುತ್ತದೆ. ಕಾರಣ ನಾವು ಸದರಿ ಟಾಟಾ ಎ.ಸಿಯಲ್ಲಿ ಕೂಳಿತಿದ್ದ ವಾಹನ ನಂ ಕೆಎ-32 ಎ-6825 ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ . 279.337.338.304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 31-12-11 ರಂದು ಸಂಜೆ 5:30 ಗಂಟೆಗೆ ಪಿ.ಎಸ.ಐ ಗ್ರಾಮೀಣ ಠಾಣೆ ರವರು ಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಹೀರಾಪುರ ಕ್ರಾಸ ಹತ್ತಿರ ಹೋದಾಗ ಒಬ್ಬನ್ನು ಸಮವಸ್ತ್ರದಲ್ಲಿದಿದ್ದನ್ನು ನೋಡಿ ಓಡಲು ಪ್ರಾರಂಬಿಸಿದಾಗ ಅತನ ಮೇಲೆ ಸಂಶಯ ಬಂದು ಅವನನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಸರಿಯಾದ ವಿವರಣೆ ನೀಡದೆ ಇರುವದರಿಂದ ಇತನನ್ನು ಹಾಗೆಯೆ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿ ಅಪರಾದ ಮಾಡಬಹುದು ಅಂತಾ ಖಚಿತ ಪಡಿಸಿಕೊಂಡು ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸಿದ್ದರಿಂದ ಠಾಣೆ ಗುನ್ನೆ ನಂ: 390/2011 ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
Police Bhavan Kalaburagi
Sunday, January 1, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment