ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ : ದಿನಾಂಕ 02-01-2012 ರಂದು ಸಾಯಂಕಾಲ ಶಿವಶಂಕರ ತಂದೆ ರುಕ್ಮಣ್ಣಾ ಹಾಗರಗಿ ಇವರು ತಮ್ಮ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 2942 ನೇದ್ದರ ಮೇಲೆ ಗುಬ್ಬಿ ಕಾಲೂನಿ ಕಡೆಯಿಂದ ಜಿ.ಜಿ.ಎಚ್ ಕಡೆಗೆ ಬರುತ್ತಿದ್ದಾಗ ಆರ್.ಟಿ.ಓ ಆಫೀಸ ಹತ್ತಿರ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ಶಿವಶಂಕರ ಇವರ ವಾಹನಕ್ಕೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಅಂಜನಾಬಾಯಿ ಗಂಡ ಶಿವಶಂಕರ ಹಾಗರಗಿ ಸಾಃ ಸುಂದರ ನಗರ ಗುಲಬರ್ಗಾರವರು ದೂರು ಸಲಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ 279,338 ಐ.ಪಿ.ಸಿ. ಸಂಗಡ 187 ಐ.,ಎಂವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆಯ ಮೇಲೆ ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಕಲ್ಪನಾ ಗಂಡ ನಾರಾಯಣ ಜಾಧವ ಸಾ;ಭೀಮಳ್ಳಿ ಗ್ರಾಮ ತಾ;ಜಿ; ಗುಲಬರ್ಗಾರವರು ನಾನು ದಿನಾಂಕ.3-01-2012 ರಂದು ನನ್ನ ತೋಟದ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ರಾಣೋಜಿ ಮತ್ತು ಪ್ರಭು ಜಾಧವ ಬಂದು ನಿನ್ನ ಗಂಡ , ಮೈದುನ ಎಲ್ಲಿ ಈ ಜಮೀನು ನಮಗೆ ಸೇರಬೇಕು , ಜಮೀನು ಬಿಟ್ಟು ಹೋಗು ಅಂತಾ ಅವಾಚ್ಯ ಶಬ್ದಗಳಿಂದ ಬೈಯುವಾಗ ಬೈಯ ಬೇಡಾ ಅಂದುದಕ್ಕೆ ಅವಳನ್ನು ಕೈ ಒತ್ತಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi

Thursday, January 5, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment