Police Bhavan Kalaburagi

Police Bhavan Kalaburagi

Monday, January 9, 2012

GULBARGA DIST REPORTED CRIMES


ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ದಿನಾಂಕ: 08/01/12 ರಂದು ಮಧ್ಯಾಹ್ನ ಜನತಾ ಬಜಾರ ಕ್ರಾಸ ಹತ್ತಿರ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವರನ್ನು ವಿಚಾರಿಸಲು ಅಲತಾಫ ತಂದೆ ಅಬ್ದುಲ ಖದೀರ ತಾಬಂಡಗರ, ವಯ 21 ವರ್ಷ, ಉ ಕೂಲಿ ಕೆಲಸ, ಸಾ ಬಿಲಾಲಾಬಾದ ಚಿಕ್ಕಡ ಮೊಹಲ್ಲಾ ಗುಲಬರ್ಗಾ, ಆಸೀಫ @ ಮಹ್ಮದ ಇಸ್ಮಾಯಿಲ ತಂದೆ ಮಹ್ಮದ ಶರಫೋದ್ದಿನ ಶೇಖ, ವಯ 25 ವರ್ಷ, ಉ ವೆಲ್ಡಿಂಗ ಕೆಲಸ, ಸಾ ಗಂಗಾ ನಗರ ಹನುಮಾನ ಮಂದಿರ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಯ ಸಿ.ಪಿ.ಸಿ ಶ್ರೀ.ರಾಜಕುಮಾರ ಮತ್ತು ಗಜೇಂದ್ರ ಸಿ.ಪಿ.ಸಿ ರವರು ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 5/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ್ ಸುಟ್ಟ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ಕಲ್ಲಪ್ಪಾ ತಂದೆ ಸಿದ್ರಾಮಪ್ಪ ಹೀರೆಗೌಡವಯ 35 ವರ್ಷ ಸಾ ನಂದೂರ (ಕೆ) ಗ್ರಾಮ ತಾ ಜಿ ಗುಲಬರ್ಗಾ ರವರು ನಾನು ನನ್ನ ಹಿರೋ ಹೊಂಡಾ ಮೋಟರ ಸೈಕಲ ನಂ: ಕೆಎ-32-ಇಎ-0655 ನೇದ್ದರ ಮೇಲೆ ಗುಲಬರ್ಗಾಕ್ಕೆ ಬಂದಿದ್ದು. ಗುಲಬರ್ಗಾದಲ್ಲಿ ತಡ ರಾತ್ರಿಯಾಗಿರುವದರಿಂದ ನಮ್ಮ ಗ್ರಾಮದ ಮಹಾಂತಗೌಡ ತಂದೆ ಶಿವಲಿಂಗಪ್ಪ ಪೊಲೀಸ್ ಪಾಟೀಲ ಇವರ ಬಾಡಿಗೆ ಮನೆ ಇರುವ ವಾರ್ಡ ನಂ:2 ಗಾಜೀಪೂರ ತಿರಂದಾಜ ಟಾಕಿಜ ಹಿಂದುಗಡೆ ನನ್ನ ಹಿರೋ ಹೊಂಡಾ ವಾಹನ ಸಂ: ಕೆಎ-32-ಇಎ-0655 ಅಕಿ 40,866/- ರೂಪಾಯಿ ಬೆಲೆ ಬಾಳುವದನ್ನು ನಿಲ್ಲಿಸಿ ಮನೆಗೆ ಹೊಗಿದ್ದು. ದಿನಾಂಕ: 08/01/2012 ರಂದು ರಾತ್ರಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 06/2012 ಕಲಂ 427 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತರೆ.
ಕೊಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:
ಶ್ರೀ ನಾಗಪ್ಪ ತಂದೆ ಕಾಶಪ್ಪ ಬುನಟ್ಟಿ ಸಾ ಗಾಜರಕೋಟ, ರವರು ನನ್ನ ಮಗ ಭೀಮಪ್ಪ ಬುನಟ್ಟಿ ಇತನು ಒಂದು ವರ್ಷದಿಂದ ತನ್ನ ಹೆಂಡತಿ ಜೊತೆಗೆ ಸೇಡಂದಲ್ಲಿರುತ್ತಿದ್ದು. ಮಹಾಪೂರ ಬಂದಿದ್ದರಿಂದ ಮನೆಯಲ್ಲಿ ನೀರು ಹೋಗಿದ್ದು ಸರಕಾರದ ವತಿಯಿಂದ ಮನೆ ಮಂಜೂರಾಗಿ ತನ್ನ ಹೆಸರಿಗೆ ಹಕ್ಕು ಪತ್ರ ಮಾಡಿಕೊಂಡಿರುತ್ತಾನೆ ಅದರಂತೆ ಬಸವ ನಗರದ ಅಶೋಕ ತಂದೆ ಹಸನಪ್ಪ ಕೊಡದೂರ ಇತನು ಕೂಡಾ ನನ್ನ ಮಗನಿಗೆ ಮನೆ ಕೊಡಿಸಿ ಹಕ್ಕು ಪತ್ರ ಮಾಡಿಕೊಟ್ಟರೆ, 10,000/- ರೂಪಾಯಿ ಕೊಡುತ್ತೇನೆ ಅಂತ ಒಪ್ಪಿಕೊಂಡಿದ್ದು ಅದರಂತೆ ನನ್ನ ಮಗ ಅಶೋಕನಿಗೆ ಮನೆ ಮಾಡಿಕೊಟ್ಟು ಹಕ್ಕು ಪತ್ರ ತನ್ನ ಹತ್ತಿರ ಇಟ್ಟುಕೊಂಡಿದ್ದು ಇದೇ ವಿಷಯವಾಗಿ ಅಶೋಕನು ಜಗಳ ತೆಗೆದು ನನ್ನ ಮಗನಿಗೆ ಹೊಡೆಬಡೆ ಮಾಡಿ ಹಕ್ಕು ಪತ್ರ ಕೇಳಿದ್ದು ಅಂದಿನಿಂದ ಅವರಿಬ್ಬರ ಮಧ್ಯೆ ವೈಮನಸ್ಸುಂಟಾಗಿತ್ತು ದಿ:07-01-2012 ರಂದು ಸಾಯಂಕಾಲ 6-00 ಪಿ.ಎಮ್.ಕ್ಕೆ ಸೊಸೆ ಗಂಗಮ್ಮ ಇವಳು ಫೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಗಂಡ ಬೆಳಗ್ಗೆ 8-00 ಗಂಟೆಗೆ ಮನೆಯಿಂದ ಅಶೋಕ ಕೊಡದೂರ ಇವನ ಜೊತೆಗೆ ಹೋಗಿ ಮರಳಿ ಬರದೇ ಇದ್ದರಿಂದ ಹುಡುಕಾಡಿದ್ದು ರಾತ್ರಿ 8-00 ಗಂಟೆ ಸುಮಾರಿಗೆ ಗೊತ್ತಾಗಿ ಹೋಗಿ ನೋಡಲಾಗಿ ನನ್ನ ಮಗನಿಗೆ ಅಶೋಕ ಕೊಡದೂರ ಇವನೇ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಭೋಯರಗಡ್ಡಿ ಸ್ಮಶಾನದ ಹಳ್ಳದಲ್ಲಿ ಮಲಗಿಸಿ ಹೋಗಿರುತ್ತಾನೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.10/2012 ಕಲಂ. 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಸೇಡಂ ಠಾಣೆ:
ದಿನಾಂಕ:08-01-2011 ರಂದು ಸಾಯಂಕಾಲ ಮಾಹಿತಿ ಬಂದಿದ್ದೇನೆಂದರೆ, ಲೋಹಾರಗಲ್ಲಿಯ ನಯೂಮ್ ರವರ ಹಿಟ್ಟಿನ ಗಿರಣಿಯಲ್ಲಿ ಕ್ರಿಕೇಟ ಪಂದ್ಯಾವಳಿ ಮೇಲೆ ಹಣವನ್ನು ಹಚ್ಚಿ ಬೆಟ್ಟಿಂಗ್ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ (ಕಾ.ಸು) ಶ್ರೀ. ರಾಜಶೇಖರ ವ್ಹಿ. ಹಳಗೋದಿ ಹಾಗೂ ಪಿ.ಎಸ್.ಐ (ಪ್ರೋಬೆಶನರಿ) ಸಾಗರ್ ಎಸ್.ಎಲ್. ಮತ್ತು ಸಿಬ್ಬಂದಿಯವರಾದ ಬಸವರಾಜ, ವಿಠಲರೆಡ್ಡಿ, ಸಿದ್ರಾಮೇಶ, ಸುಭಾಶ ಹಾಗೂ ಅಲ್ಲಾಭಕ್ಷ ಇವರು ದಾಳಿ ಮಾಡಿ ನೋಡಲು ಮೂರು ಜನ ಹುಡುಗರು ಟಿ.ವಿ. ಹಚ್ಚಿ ಸ್ಟಾರ ಕ್ರಿಕೇಟ್ ಚಾನಲ್ ಮೇಲೆ ನಡೆಯುತ್ತಿರುವ ಕ್ರಿಕೇಟ ಆಟದ ಪ್ರತಿ ಬಾಲಿನ ಮೇಲೆ ಸಿಕ್ಸರ, ಔಟ್, ವೈಡ್ ಬಾಲ, ಚೌಕಾ, ಅಂತ ಮುಂದೆ ಆಗುವ ಸಂಭವನೆಗಳ ಮೇಲೆ ದೈವಲೀಲೆಯ ಕ್ರಿಕೇಟ ಆಟದ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದು, ಮೂರು ಜನರನ್ನು ಹಿಡಿದುಕೊಂಡು ಅವರಿಂದ ಒಂದು ಪೋರ್ಟೆಬಲ್ ಟಿ.ವ್ಹಿ ಅಂ.ಕಿ.2000/- ಮೂರು ಮೊಬೈಲ್ ಅಂ.ಕಿ 1500/- ಹಾಗೂ ಪಣದಲ್ಲಿ ಇಟ್ಟಿರುವ ನಗದು ಹಣ 6200/- ರೂಪಾಯಿ ನೇದ್ದವುಗಳನ್ನು ಪಂಚರ ಸಮಕ್ಷಮ ಜಫ್ತಿ ಪಂಚನಾಮೆ ಮಾಡಿಕೊಂಡಿದ್ದರಿಂದ ಸೇಡಂ ಠಾಣೆ ಗುನ್ನೆ ನಂ.12/2012 ಕಲಂ.78 A (VI) ಕೆ.ಪಿ. ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಸಿಂದಗಿ (ಬಿ) ಗ್ರಾಮದ ಸೀಮಾಂತರಲದಲಿ ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾರೆ ಅಂತಾ ಬಂದ ಖಚಿತ ಬಾತ್ಮಿ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಜೂಜಾಟ ಆಡುತ್ತಿದ್ದ ಬೂಪೇಂದ್ರ ತಂದೆ ಶರದ ಠಾಕುರ ಸಂಗಡ 10 ಜನರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 17,400-00 ಮೋಟಾರ ಸೈಕಲ್, ಮೋಬಾಯಿಲ್ ಹೀಗೆ ಒಟ್ಟು 155,400-00 ಮೌಲ್ಯದನ್ನು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 5/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: