ಆತ್ಮಹತ್ಯೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಗೌತಮ ತಂದೆ ಬಾಬುರಾವ ಹೋಳಕರ ವ: 25 ವರ್ಷ ಜಾ: ಎಸ್‌ಸಿ ಉ: ಖಾಸಗಿ ಶಾಲೆ ಶಿಕ್ಷಕ ಸಾ; ಕಾಳ ಮೈಂದರ್ಗಿ ತಾ: ಜಿ: ಗುಲಬರ್ಗಾ ಇವರು ದಿನಾಂಕ: 8/1/2012 ರಂದು ಸಾಯಂಕಾಲ 5 ರಿಂದ 6 ಗಂಟೆಯ ಅವಧಿಯಲ್ಲಿ ಸಿದ್ದರಾಮೇಶ್ವರ ಶಾಲೆಯ ಕೋಣೆಯಲ್ಲಿ ಒಳ ಕೊಂಡಿ ಹಾಕಿಕೊಂಡು ಕೋಣೆಯ ಛತ್ತಿನ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮ,ಹತ್ಯೆ ಮಾಡಿಕೊಂಡಿರುತ್ತಾರೆ ಇವರ ಸಾವಿನ ಬಗ್ಗೆ ಸಂಶಯವಿರುತ್ತದೆ ಅಂತಾ ಶ್ರೀಹುಸನಪ್ಪ ತಂದೆ ಸಂತಪ್ಪ ನಡುಕರ ಸಾ; ಹಿಪ್ಪರಗಾ ಭಾಗ ತಾ: ಬಸವಕಲ್ಯಾಣ ಜಿ: ಬೀದರ ರವರು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಯು.ಡಿ.ಅರ್. ಸಂ: 2/2012 ಕಲಂ 174 (ಸಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆತ್ಮಹತ್ಯೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಶಶಿಕಾಂತ ತಂದೆ ಗಿರೇಪ್ಪ ವಾಮನಕರ ಸಾ: ಯಳವಂತಗಿ (ಬಿ) ತಾ: ಜಿ: ಗುಲಬರ್ಗಾರವರು ನನ್ನ ತಾಯಿಯಾದ ಶ್ರೀಮತಿ ಗಂಗಮ್ಮ ಇವರು ದಿನಾಂಕ:7/1/2012 ರಂದು ಮದ್ಯಾಹ್ನ ಸುಮಾರಿಗೆ ಮನೆಯ ಬಾಟಿಯ ಮೇಲೆ ಇಟ್ಟಿದ್ದ ತೋಗರಿ ಬೆಳೆ ಡಬ್ಬಿಯನ್ನು ತೆಗೆದುಕೊಳ್ಳಲು ಹೋಗಿ ಅದರ ಪಕ್ಕದಲ್ಲಿದ್ದ ತೋಗರಿ ಬೆಳೆಗೆ ಹೊಡೆಯುವ ಕ್ರಿಮೀನಾಶಕ ಜೌಷದ ಡಬ್ಬಿ ಒಮ್ಮೇಲೆ ಸಿಡಿದು ಮೈಮೇಲೆ ಹಾಗು ಬಾಯಿಯಿ ಮೂಲಕ ಹೋಗಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ದಿನಾಂಕ 9/1/2011 ರಂದು ಮದ್ಯಾಹ್ನ ಮೃತಪಟ್ಟಿದ್ದು. ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 3/.2012 ಕಲಂ 174 ಸಿ.ಅರ್.ಪಿ ಸಿ್ ಪ್ರಕಾರ ಪ್ರಕರಣ ದಾಖಲ ಮಾಡಿ ಕೈಕೊಂಡಿರುತ್ತಾರೆ.
Police Bhavan Kalaburagi
Tuesday, January 10, 2012
Gulbarga Dist Reported Crimes
Subscribe to:
Post Comments (Atom)
No comments:
Post a Comment