Police Bhavan Kalaburagi

Police Bhavan Kalaburagi

Friday, January 20, 2012

GULBARGA DIST REPORTED CRIMES



ಕೊಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀಶೈಲ್ ತಂದೆ ಕಲ್ಯಾಣಿ ಭಿಮಪೂರೆ ಮುಖಜೂರಿ ತಾಆಳಂದ ರವರು ನಮ್ಮ ತಂದೆ ಕಲ್ಯಾಣಿ ಭೀಮಾಪುರೆ ಇವರು ಮತ್ತು ನಾವೆಲ್ಲರೂ ಕೂಲಿ ಕೆಲಸ ಮಾಡಿಕೊಂಡು ಮನೆಗೆ ಬಂದಿದ್ದು, ನಮ್ಮ ತಂದೆಯವರು ನಾವು ಪಾಲದಿಂದ ಮಾಡಿದ ಘಾಡೆಯವರ ಹೋಲಕ್ಕೆ ಉಳ್ಳಾಗಡ್ಡಿ ಕಿತ್ತುವ ಕೆಲಸಕ್ಕೆ ಹೋಗಿ ಬಂದಿರುತ್ತಾರೆ. ರಾತ್ರಿ 8.00 ಗಂಟೆ ಸುಮಾರಿಗೆ ನಮ್ಮ ತಂದೆಯವರು ಮನೆಯಿಂದ ಹೋರಗೆ ಹೋದರು ನಾನು ಸಹ ಮನೆಯ ಹೋರಗೆ ಹೋದೆನು ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ಹೋರಗಿನಿಂದ ಮನೆಗೆ ಬಂದಿದ್ದು ನಮ್ಮ ತಮ್ಮ ದತ್ತಾ ಇವನು ನಾನು ನಾವು ಪಾಲದಿಂದ ಮಾಡಿದ ಘಾಡೆಯವರ ಹೋಲಕ್ಕೆ ಹೋಗಿದ್ದು ನಮ್ಮ ತಂದೆಯವರು ಹೋರಗೆ ಹೋದವರು ಮನೆಗ ಬಂದಿಲ್ಲ ನಾನು ಬರಬಹುದು ಅಂತಾ ತಿಳಿದು ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದೆನು, ಇಂದು ದಿನಾಂಕ 20/01/2012 ರಂದು ಮುಂಜಾನೆ ನಮ್ಮ ತಂದೆ ನಿನ್ನೆ ರಾತ್ರಿ ಮನೆಗೆ ಬರದೆ ಇರುವದರಿಂದ ಅವರ ಮೋಬೈಲ ಪೋನ ನಂಬರ
9739107677 ಕ್ಕೆ ಪೋನ ಮಾಡಿದೆನು ಪೋನ ಹತ್ತಿಲ್ಲಿಲ್ಲ, ಬೀಮರಾಯ ಡಗೆ ಇವರು ನನಗೆ ಕರೆದು ನಿಮ್ಮ ತಂದೆಯವರಿಗೆ ತಳವಾರ ಹೋಲದಲ್ಲಿ ಹೊಡೆದು ಬಿಸಾಡಿದ್ದಾರೆ ಅಂತಾ ಹೇಳಿದ್ದರಿಂದ ನಾನು ಮತ್ತು ಶರಣಪ್ಪ ಹೋಸಮನಿ ಹಾಗೂ ಇತರರೊಂದಿಗೆ ತಳವಾರ ಹೊಲಕ್ಕೆ ಹೋಗಿ ನೋಡಲು ಹೋಲದ ಬಂದಾರಿ ಹತ್ತಿರ ಶವ ಬಿದಿದ್ದು ಅವರಿಗೆ ನೋಡಲು ದೇಹದ ಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತವೆ, ನಮ್ಮ ತಂದೆಯವರಿಗೆ ಯಾರೋ ಅಪರಿಚಿತರು ದಿನಾಂಕ:19/01/2012 ರ ರಾತ್ರಿ 8.00 ಗಂಟೆಯಿಂದ ದಿನಾಂಕ 20/01/2012 ರ ಮುಂಜಾನೆ ಅವಧಿಯಲ್ಲಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಶಹಾಬಾದ ನಗರ ಪೊಲೀಸ ಠಾಣೆ:
ದಿನಾಂಕ:20/01/2012 ರಂದು ಶ್ರೀ ಬಸವರಾಜ ಸಿಪಿಸಿ ಶಹಾಬಾದ ನಗರ ಠಾಣೆರವರು ಸ್ವತ್ತಿನ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಮಾಹಿತಿ ಸಂಗ್ರಹಿಸಲು ಶಹಾಬಾದ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಭಂಕೂರ, ದೇವನ ತೆಗನೂರ ಕಡೆಗೆ ಹೋಗುವಾಗ ದೇವನ ತೆಗನೂರ ಬಸಸ್ಟಾಂಡ ಹತ್ತಿರ ಒಬ್ಬನು ಸರಾಯಿ ಕುಡಿದ ಅಮಲಿನಲ್ಲಿ ಚಿರಾಡುವದು, ಬೈಯುವದು, ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿದದ್ದನ್ನು ನೋಡಿ ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಚಾರಿಸಲು ವಿಠ್ಠಲ ತಂದೆ ಖೂಬು ಚವ್ಹಾಣ ಸಾ:ದೇವನತೆಗನೂರ ಅಂತಾ ಹೇಳಿದನು. ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಶಾಂತತೆ ಭಂಗವನ್ನುಂಟು ಮಾಡಬಹುದೆಂದು ತಿಳಿದು ವರದಿ ಸಲ್ಲಿಸಿದ ಮೇರೆಗೆ ಠಾನೆ ಗುನ್ನೆ ನಮ: 8/2012 ಕಲಂ 110 (ಇ) & (ಜಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗಿ ಅಪಹರಣ ಪ್ರಕರಣ:
ಸೇಡಂ ಠಾಣೆ:
ಶ್ರೀ ಈರಣ್ಣ ತಂದೆ ಚಂದ್ರಶೇಖರ ಕಲಕಂಬಾ ಸಾ: ಊಡಗಿ ರವರು ನನ್ನ ಮಗಳಾದ ಸಂಗಿತಾ ಇವಳಿಗೆ ಗ್ರಾಮದ ಭಾಗೇಶ ತಂದೆ ಪರಮೇಶ್ವರ ಬಡಿಗೇರ ಇತನು 6 ತಿಂಗಳ ಹಿಂದೆ ನನ್ನ ಮಗಳಾದ ಸಂಗಿತಾ ಇವಳಿಗೆ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ದಿನಾಲು ಪಿಡಿಸುವುದು ಮಾಡುತ್ತಿದ್ದು ಈ ಬಗ್ಗೆ ಅವಳ ತಲೆ ಕೆಡಸಬೇಡ ಅಂತಾ ಭಾಗೇಶ ಇತನಿಗೆ ಎಚ್ಚರಿಕೆ ನೀಡಿದರೂ ಕೂಡ ಅವನು ಒಂದಿಲ್ಲ ಒಂದು ದಿವಸ ಸಂಗೀತ ಇವಳಿಗೆ ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ತಕರಾರು ಮಾಡಿದನು ದಿನಾಂಕ:12-01-2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಂಗಿತಾ ಇವಳಿಗೆ ಭಾಗೇಶ ಮತ್ತು ಅವನ ಅಣ್ಣ ಗಣೇಶ ಅಲ್ಲದೆ ರಜಾಕ ನಾಯ್ಕೋಡಿ 3 ಜನರು ಕೂಡಿ ಸಂಗಿತಾ ಇವಳಿಗೆ ಕೈ ಹಿಡಿದು ಎಳೆದುಕೊಂಡು ದಿಗ್ಗಾವಂ ರಸ್ತೆ ಕಡೆಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ 19/2012 ಕಲಂ 366(ಎ) ಸಂಗಡ 34 ಐಪಿಸಿ ನ್ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: