Police Bhavan Kalaburagi

Police Bhavan Kalaburagi

Friday, January 13, 2012

GULBARGA DIST REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀಮತಿ ಮಿನಾಕ್ಷಿ ಗಂಡ ಯಲ್ಲಪ್ಪಾ ಮೇಳಕುಂದಿ ಸಾ: ಸಿರನೂರ ರವರು ನನ್ನ ಮದುವೆಯು 2009 ಸಾಲಿನಲ್ಲಿ ಶಿರನೂರ ಗ್ರಾಮದ ಯಲ್ಲಪ್ಪಾ ತಂದೆ ಶೇಟ್ಟೆಪ್ಪಾ ಮೇಳಕುಂದಿ ಇವರ ಸಂಗಡ 4 ಲಕ್ಷ್ಯ 50 ಸಾವಿರ ರೂಪಾಯಿ ಖರ್ಚು ಮದುವೆ ಮಾಡಿ ಕೊಟ್ಟಿರುತ್ತಾರೆ. ಈಗ ನನಗೆ 2 ಹೆಣ್ಣು ಮಕ್ಕಳು ಇರುತ್ತಾರೆ. ಒಂದು ವರ್ಷದಿಂದ ನನ್ನ ಗಂಡನು ದಿನಾಲು ಕೂಡಿದು ಬಂದು ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟು ತೊಂದರೆ ಮಾಡುತ್ತಿದ್ದನು ಮತ್ತು ಅತ್ತೆ ಮಾವಂದಿರು ಕೂಡಾ ನನಗೆ ವಿನಾಃಕಾರಣ ಅವಾಚ್ಯ ಶಬ್ದಗಳಿಂಗ ಬೈಯುತ್ತಿದ್ದರು. ಈ ವಿಷಯವನ್ನು ತವರು ಮನೆಯಲ್ಲಿ ನನ್ನ ತಂದೆ ತಾಯಿಯವರಿಗೆ ತಿಳಿಸಿದ್ದು 6-7 ತಿಂಗಳ ಹಿಂದೆ ನಮ್ಮ ಸಂಬಂಧಿಕರಾದ ಮಲ್ಲಿಕಾರ್ಜುನ ತಂದೆ ಭೀಮಯ್ಯಾ ಕುಸ್ತಿ ತಿಮ್ಮಯ್ಯಾ ತಂದೆ ಯಲ್ಲಪ್ಪಾ ಗುತ್ತೆದಾರ, ರಾಮಯ್ಯಾ ತಂದೆ ಯಲ್ಲಪ್ಪಾ ಕೆರಂಬಗಿ. ಇವರು ಸಮ್ಮಖದಲ್ಲಿ ನ್ಯಾಯ ಪಂಚಾಯತಿ ಮಾಡಿ ನನ್ನ ಗಂಡ ಅತ್ತೆ ಮಾವಂದರಿಗೆ ಬುಧ್ಧಿ ಮಾತು ಹೇಳಿ ಹೋಗಿರುತ್ತಾರೆ. ನನ್ನ ಗಂಡ ನಮ್ಮೂರಿನ ರೂಪಾ ತಂದೆ ಗಿಡ್ಡೆಪ್ಪ ಗುತ್ತೆದಾರ ಇವಳ ಸಂಗಡ ಓಡಾಡಿ ಅವಳಿಗೆ ಮದುವೆ ಮಾಡಿಕೊಳ್ಳುವ ಸಂಭವ ಕಂಡು ಬಂದಿರುತ್ತದೆ. ದಿನಾಂಕ 8/1/2012 ರಂದು ನನ್ನ ಗಂಡನು ನಿನ್ನ ಮಕ್ಕಳನ್ನು ತಗೆದುಕೊಂಡು ಮನೆ ಬಿಟ್ಟು ಹೋಗು ಅಂತಾ ಹೋಡೆದು ಒದ್ದು ನಿನಗೆ ಸಿಮೇ ಎಣ್ಣೆ ಹಾಕಿ ಸಾಯಿಸುತ್ತೆನೆ ಅಂತಾ ಜೀವದ ಭಯ ಬೇದರಿಕೆ ಹಾಕಿರುತ್ತಾನೆ. ಅಂತಾ ಲಿಖಿತ ದೂರು ಸಲ್ಲಿಸದಿ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 6/2012 ಕಲಂ 143.147.498 (ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ. ಮಲ್ಲಿಕಾರ್ಜುನಯ್ಯಾ ತಂದೆ ದಿ:ಶಿವರಾಚಯ್ಯಾ ಹಿರೇಮಠ ಸಾ: ಮನೆ ನಂ. 1-1495/ಸಿ ಭಗವತಿ ನಗರ ಯಾತ್ರಿಕ ನಿವಾಸ ಹಿಂದುಗಡೆ ಗುಲಬರ್ಗಾ ರವರು ನಾನು ನನ್ನ ಹೆಂಡತಿ ದಿನಾಂಕ 12/01/2012 ರಂದು ಮುಂಜಾನೆ ಪ್ರತಿನಿತ್ಯದಂತೆ ನಮ್ಮ ಕೆಲಸಕ್ಕೆ ಹೊಗಿದ್ದು ಮನೆಯಲ್ಲಿ ನನ್ನ ತಾಯಿ ಮುಂಜಾನೆ 10-30 ಸಮಯಕ್ಕೆ ಮನೆಗೆ ಕೀಲಿ ಹಾಕಿಕೊಂಡು ನನ್ನ ಹೆಂಡತಿಯ ತಂಗಿಯ ಮನೆಗೆ ಹೋಗಿ ಅಲ್ಲಿ ನಮ್ಮ ಮನೆಯ ಕೀಲಿ ಕೊಟ್ಟು ಊರಿಗೆ ಹೊಗಿರುತ್ತಾರೆ. ಮುಂಜಾನೆ 10-30 ಗಂಟೆಯಿಂದ ಮದ್ಯಾಹ್ನ 4-30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲು ಬೀಗ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ನಗದು ಹಣ 2 ಸಾವಿರ ರೂಪಾಯಿಗಳು ಹೀಗೆ ಒಟ್ಟು ಅ:ಕಿ: 1,62,000/- ರೂಪಾಯಿ ಬೆಲೆಬಾಳುವದವುಗಳ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 04/2012 ಕಲಂ. 454, 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ
: ದಿನಾಂಕ; 08-06-2008 ರಿಂದ ದಿನಾಂಕ 12-1-12 ವರೆಗೆ ಈ ಡಿಸೆಂಟ್ ದಾಲ್ ಮಿಲ್ಲ ಫ್ಯಾಕ್ಟರಿ ಸ್ಥಳ ಮತ್ತು ಫ್ಯಾಕ್ಟರಿಯ ಮಾರಾಟ ಸಂಬಂಧ ಮಹ್ಮದ ಹಸ್ಮತ ಅಲಿ ತಂದೆ ಇಲಾಯತ ಅಲಿ ವ:28 ವರ್ಷ ಉ:ವ್ಯಾಪರ ಸಾ: ಪ್ಲಾಟ ನಂ.14/ಎ ದರ್ಶನಾಪೂರ ಲೇಔಟ್ ಜಿ.ಡಿ.ಎ. ಕಾಲನಿ ಎದುರುಗಡೆ ಸಂತ್ರಸವಾಡಿ ಗುಲಬರ್ಗಾ, ಮತೀನ ಜೂಹರಾ ಸಿದ್ದಿಕಿ ಗಂಡ ಮಹ್ಮದ ಇಲಾಯತ ಅಲಿ ವ: 46 ವರ್ಷ ಉ: ಮನೆಗೆಲಸ ಮತ್ತು ವ್ಯಾಪರ ಸಾ: ಪ್ಲಾಟ ನಂ.14/ಎ ದರ್ಶನಾಪೂರ ಲೇಔಟ್ ಜಿ.ಡಿ.ಎ. ಕಾಲನಿ ಎದುರುಗಡೆ ಸಂತ್ರಸವಾಡಿ ಗುಲಬರ್ಗಾ ಇಬ್ಬರಲ್ಲಿ ವ್ಯವಹಾರ ಆಗಿ ತಂಟೆ ತಕರಾರು, ಅಂದಿನಿಂದ ಇಬ್ಬರಲ್ಲಿ ಗಾಢವಾದ ವೈಮನಸ್ಸು ಬೆಳೆದಿರುತ್ತದೆ ಎರಡು ಜನರು ಯಾವ ವೇಳೆಯಲ್ಲಿ ಜಗಳವಾಗಿ ಪ್ರಾಣ ಹಾನಿ ಮತ್ತು ಆಸ್ತಿ ಸಂಭವಿಸುತ್ತದೆ ಎಂಬುದರ ಬಗ್ಗೆ ತಿಳಿದು ಬರುತ್ತಿಲ್ಲಾ. ಕಾರಣ ಮುಂಜಾಗ್ರತೆ ಕ್ರಮ ಕುರಿತು ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 09/2012 ಕಲಂ 107 ಸಿಅರ.ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

No comments: