Police Bhavan Kalaburagi

Police Bhavan Kalaburagi

Monday, January 16, 2012

GULBARGA DIST REPORTED CRIMES

ಜಾತಿ ನಿಂದನೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶರಣು@ ಶರಣಪ್ಪಾ ತಂದೆ ಶಂಕರ ಬಾಳ ಸಾ:ಫರಹತಾಬಾದ ತಾ:ಜಿ: ಗುಲಬರ್ಗಾ ರವರು ನಾನು ದಿನಾಂಕ 14/1/2012 ರಂದು ರಾತ್ರಿ 20:30 ಗಂಟೆಯ ಸುಮಾರಿಗೆ ನಮ್ಮೂರಿನ ಕ್ರಾಸ ಹೆದ್ದಾರಿಯ ಪಕ್ಕದಲ್ಲಿರುವ ಶಕ್ತಿ ವೈನ ಶಾಪ ಹತ್ತಿರ ನನ್ನ ಗೆಳೆಯರಾದ ಶ್ರೀ ವಿಜಯಕುಜಮಾರ ಬುಳ್ಳಾ. ಶ್ರೀ ಸಂಗಮೇಶ ವಡಗೇರಾ, ಶ್ರೀಶರಣು ಡೆಂಗಿ, ಮತ್ತು ಅಶೋಕ ಹಯ್ಯಳಿ ಎಲ್ಲರೂ ಕೂಡಿಕೊಂಡು ಮಾತಾನಾಡುತ್ತಾ ನಿಂತಾಗ 3 ಜನರು ಹುಡುಗರು ಕುಡಿದ ಅಮಲಿನಲ್ಲಿ ತಮ್ಮ ತಮ್ಮಲ್ಲಿಯೆ ಜಗಳಾಡುತ್ತಿದ್ದರು ನಾನು ಇದನ್ನು ನೋಡಿ ಯಾಕೆ ಜಗಳಾಡುತ್ತಿದ್ದಿರಿ ಅಂತಾ ಕೇಳಿ ಬಿಡಿಸಲು ಹೋದಾಗ ಅವರಲ್ಲಿ ಶ್ರೀನೀವಾಸ @ ಶಿನು ತಂದೆ ಬಸಯ್ಯಾ ಗುತ್ತೆದಾರ ಸಾ: ಸಿರನೂರ ಸಂಗಡ ಇನ್ನೂ ಎರಡು ಜನರು ಅದರಲ್ಲಿ ಒಬ್ಬನು ಜಾತಿ ನಿಂದನೆ ಮಾಡಿ ನಾವು ಎನಾದರು ಮಾಡಿಕೊಳ್ಳುತ್ತೆವೆ ನೀನ್ಯಾರು ನಮಗೆ ಕೇಳುವದಕ್ಕೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಬೀಯರ ಬಾಟಲಿಯಿಂದ ತಲೆಗೆ, ಮುಗಿಗೆ ಹೋಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 8/2012 ಕಲಂ 323.324.504. ಸಂಗಡ 34 ಐ.ಪಿ.ಸಿ ಮತ್ತು 3 (1)(10) ಎಸ್.ಸಿ./ಎಸ್.ಟಿ ಪಿ.ಎ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ:
ಶ್ರೀ ಉಮೇಶ @ ಹೋಮು ತಂದೆ ರಾಂಚಂದ್ರ ರಾಠೋಡ ಸಾ: ಕುಶಪ್ಪ ತಾಂಡಾ ನರೋಣ ತಾ: ಆಳಂದ ರವರು ನಾನು ಹಾಗೂ ರೂಪಸಿಂಗ ರಾಠೋಡ, ರಾಮು ಹಾಗೂ ನಮ್ಮ ಹೆಂಡತಿ ಮಕ್ಕಳು ಇತರರು ಕೂಡಿಕೊಂಡು ಮಟಕಿ ಗ್ರಾಮ ಸಾಯಬಣ್ಣ ಬೀರಾದಾರ ಇವರ ಹೊಲದಲ್ಲಿ ಕೆಲಸ ಮಾಡಿ ದಿನಾಂಕ 15/01/2012 ರಂದು ಮದ್ಯಾನ್ಹ 3.45 ಗಂಟೆ ಸುಮಾರಿಗೆ ನಮ್ಮ ತಾಂಡಕ್ಕೆ ಹೋಗಿ ಬರಬೇಕೆಂದು ನಾನು ಹಾಗೂ ರೂಪಸಿಂಗ್ ರಾಠೋಡ ಕೂಡಿಕೊಂಡು ಕಬ್ಬಿನ ಮಾಲಕ ಸಾಯಬಣ್ಣ ಬಿರಾದಾರ ಇವರ ಹೀರೊ ಹೊಂಡಾ ಮೋಟರ ಸೈಕಲ್ ಕೆ.ಎ 32 ಆರ್ 3290 ನೇದ್ದನ್ನು ರೂಪಸಿಂಗ್ ತೆಗೆದುಕೊಂಡು ಆಳಂದ ಮುಖಾಂತರ ಹೋಗುವಾಗ ಆಳಂದ ರಜೀವಿ ರೋಡಿನ ಎಡಬದಿಯಿಂದ ನೈಸ್ ಚಿಕ್ಕನ್ ಸೇಂಟರ್ ಎದುರಿನಲ್ಲಿ ಹೋಗುತ್ತಿದ್ದಾಗ ಲಾರಿ ನಂ ಎಂ. ಡ್ಲೂ. ಪಿ. 2333 ನೇದ್ದರ ಚಾಲಕನ ಅಬ್ದುಲ ಹಮೀದ ತಂದೆ ಇಸಾಕ್ ಚೌದರಿ ಸಾ: ರೇವಣಸಿದ್ದೇಶ್ವರ ಕಾಲೋನಿ ಆಳಂದ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಯಿಸಿ ನಮ್ಮ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದಾಗ ನಾನು ರೋಡಿನ ಎಡಗಡೆ ಬಿದ್ದೆನು ರೂಪಸಿಂಗನು ಇತನು ಲಾರಿಯ ಹಿಂದಿನ ಬಲಟೈರಿನ ಕೆಳಗೆ ಬಿದ್ದನು ಆಗ ಜನರು ನೋಡಿ ಕೂಗಿದಾಗ ಲಾರಿ ನಿಲ್ಲಿಸಿದ್ದು ಲಾರಿಯ ಟೈರು ಅವನ ಹೊಟ್ಟೆಯ ಮೇಲೆ ಹಾಯ್ದಿದರಿಂದ ಸ್ಥಳದಲೇ ಮೃತಪಟ್ಟನು ನನಗೆ ಭಾರಿ ಗಾಯವಾಗಿರುತ್ತವೆ ಲಾರಿ ಚಾಲಕನು ವಾಹನ ಸ್ಥಳದಲಿಯೇ ಬಿಟ್ಟು ಒಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ :
ಸುನಂದಾ ಮೂರ್ತಿ ತಂದೆ ವೀರಾಪೂರ ಶಿವಮೂರ್ತಿ ವಯ:55 ಉ;ಆಕಾಶವಾಣಿಯಲ್ಲಿ ಕೆಲಸ ಸಾ; ಪ್ಲಾಟ ನಂ. 12 ಐಶ್ವರ್ಯ ಜಯನಗರ ಸೇಡಂ ರೋಡ ಗುಲಬರ್ಗಾ ರವರು ದಿನಾಂಕಃ 14/01/2012 ರಂದು ರಾತ್ರಿ 8:00 ಗಂಟೆಗೆ ಮನೆಯಿಂದ ಅಂಗಡಿಗೆ ಸಾಮಾನು ತರಲು ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಹುನುಮಾನ ಮಂದಿರದ ರೋಡಿನ ಮೇಲೆ ಶ್ರೀ ವಿದ್ಯಾಸಾಗರ ರವರ ಮನೆಯ ಮುಂದೆ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲದ ಮೇಲೆ ವೇಗವಾಗಿ ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ 15 ಗ್ರಾಂ ಬಂಗಾರದ ಹಳವವಿದ್ದ ಲಾಕೆಟ್ ಅಃಕಿಃ 45,000/- ರೂ ನೇದ್ದನ್ನು ಜಬರ ದಸ್ತಿಯಿಂದ ಕಸಿದುಕೊಂಡು ಹೋದನು. ಕತ್ತಲು ಇರುವುದರಿಂದ ಸದರಿ ಮೋಟಾರ ಸೈಕಲ ನಂಬರ ನೋಡಿರಲಿಲ್ಲಾ. ಸದರಿಯವನ ವಯಸ್ಸು ಅಂದಾಜು 25-30 ಇರಬಹುದು ವೈಟ್ ಪಿಂಕ್ ಶರ್ಟ ಹಾಕಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 03/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

No comments: