Police Bhavan Kalaburagi

Police Bhavan Kalaburagi

Saturday, January 21, 2012

GULBARGA DIST REPORTED CRIMES

ಮೋಟಾರ ಸೈಕಲ್ ಮೇಲೆ ಬಂದು ಬಂಗಾರದ ಆಭರಣಗಳು, ನಗದು ಹಣ ದೋಚಿದ ಆರೋಪಿಯ ಬಂದನ .
ನಿನ್ನೆ ದಿನಾಂಕ: 19-01-2012 ರಂದು ರಾತ್ರಿ 11-30 ಗಂಟೆಗೆ ಪ್ರಮೋದ ತಂದೆ ಟಿ.ವಿ ವಾಸುದೇವ ಸಾ ತಳಗಾರ ತಾ ಚಿಂತಾಮಣಿ ಜಿ ಚಿಕ್ಕ ಬಳ್ಳಾಪೂರ ಹಾವ ಗುಬ್ಬಿ ಕಾಲೋನಿ ಗುಲಬರ್ಗಾ ರವರು ನಗದರ ಸೆಂಟರ್ ಕಾಮತ ಮುಖಾಂತರ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ್ ಮೇಲೆ ಹೋರಟಾಗ ಅವರನ್ನು ನಿಲ್ಲಿಸಿ ಅವನಿಂದ ಬಂಗಾರದ ಆಭರಣ ಮತ್ತು ನಗದು ಹಣ ದೋಚಿದ್ದಾರೆ ಅಂತಾ ಪ್ರಮೋದ ಇವರು ಬ್ರಹ್ಮಪೂರ ಠಾಣೆಯಲ್ಲಿ ದೂರು ಸಲ್ಲಿಸಿದರಿಂದ ಗುನ್ನೆ ದಾಖಲ ಮಾಡಿಕೊಳ್ಳಲಾಗಿತ್ತು, ಮಾನ್ಯ ಎಸ.ಪಿ ಸಾಹೇಬರು, ಹೆಚ್ಚುವರಿ ಎಸಪಿ ಸಾಹೇಬರು ಮತ್ತು (ಎ) ಉಪ-ವಿಭಾಗದ ಎ.ಎಸ.ಪಿ ರವರ ಮಾರ್ಗದರ್ಶನದ ಮೇರೆಗೆ ಬ್ರಹ್ಮಪೂರ ಠಾಣೆಯ ಪಿಐ ರವರು ಮತ್ತು ಸ್ಟೇಶನ ಬಜಾರ ಠಾಣೆರವರು,ಮತ್ತು ಸತ್ಯನಾರಯಣ ಪಿ.ಎಸ.ಐ ಮತ್ತು ಅಪರಾದ ಪತ್ತೆ ದಳದ ಸಿಬ್ಬಂದಿಯವರಾದ ಮಾರುತಿ ಎ.ಎಸ.ಐ, ರಪೀಕ, ಶಿವರಾಜ, ಶಿವಪ್ರಕಾಶ, ಶಶಿಕಾಂತ, ರಾಮು, ದೇವಿಂದ್ರ ಇವರೆಲ್ಲರೂ ಕೂಡಿಕೊಂಡು ಪ್ರಕರಣದ ತನಿಖೆ ಕೈಕೊಂಡಿದ್ದರಿಂದ ದರೋಡೆ ಮಾಡಿದ ಆರೋಪಿ ರಾಮು ಪವಾರ ಇತನನ್ನು ವಶಕ್ಕೆ ತೆಗೆದುಕೊಂಡು ಆತನು ದೋಚಿದ ಬಂಗಾರದ ಆಭರಣಗಳು, ನಗದು ಹಣ ಮತ್ತು ಪಲ್ಸರ್ ಮೊಟಾರ ಸೈಕಲ್ ನಂ ಕೆಎ-32 ಡಬ್ಲೂ-0011 ನೇದ್ದು ವಶಪಡಿಸಿಕೊಂಡಿರುತ್ತಾರೆ. ದಸ್ತಿಗಿರಿ ಮಾಡಿದ ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.
ಜೂಜಾಟ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ಅಶೋಕ ತಂದೆ ಅವನಪ್ಪ ಉದನೂರ ಸಾಪ್ಲಾಟ ನಂ.117 ಮ.ನಂ.891 ಭಾಗ್ಯವಂತಿ ನಗರ ಗುಲಬರ್ಗಾ, ಸತ್ಯನಾರಾಯಣ ತಂದೆ ಶಂಕರ ಸಾ:2 ನೇ ಬ್ಲಾಕ ಕೆ.ಎಸ್.ಆರ್.ಟಿ.ಸಿ,.ಕ್ವಾಟರ್ಸ ಗುಲಬರ್ಗಾ, ಶರಣಕುಮಾರ ತಂದೆ ರೇವಣಸಿದ್ದಯ್ಯಾ ಪುರಾಣಿಕ ಸಾರಾಘವೇಂದ್ರ ಗುಡಿ ಹತ್ತಿರ ಬ್ರಹ್ಮಪೂರ ಗುಲಬರ್ಗಾ, ರಾಜು ತಂದೆ ಶಿವಶರಣಪ್ಪ ಬೋಸಗಾ, ಕುಮಾರ ತಂದೆ ಸರ್ವೋತ್ತಮ್ಮ ಸಾ ಚಹಾ ಹುಸೇನ್ ಚಿಲ್ಲಾ ಗುಲಬರ್ಗಾ ರವರು ದಿನಾಂಕ:20.01.2012 ರಂದು ಕೆ.ಎಸ್.ಎಸ್.ಐ.ಡಿಸಿ. ಕಾಂಪ್ಲೆಕ್ಸ್ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದಾರೆ ಅಂಥಾ ಮಾಹಿತಿ ಬಂದ ಮೇರೆಗೆ ಪಿ.ಐ.ಸ್ಟೇಷನ ಬಜಾರ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ 4100/-ರೂಪಾಯಿ ನಗದು ಹಣ ಹಾಗೂ ಇಸ್ಪೀಟ್ ಎಲೆಗಳು ಮತ್ತು 5 ಮೋಬೆಲ್ ಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಗುನ್ನೆ ನಂ: 5/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ:
ಶ್ರೀ ಸಿರಾಜುದ್ದಿನ್ ತಂದೆ ಮೊಹ್ಮದ ಹುಸೇನ ಕೌಲಗಾ ಸಾಸಿಬರಕಟ್ಟಾ ಶಹಾಬಾದ ರವರು ನಾನು ಸೈಕಲ ಮೇಲೆ ಹೋಗುವಾಗ ದಾದಪೀರ ದರ್ಗಾದ ಹತ್ತಿರ ಎದರುಗಡೆಯಿಂದ ಮೋಟಾರ ಸೈಕಲ ನಂ: ಕೆಎ-32 ಎಸ್-6081 ನೇದ್ದರ ಚಾಲಕ ರಾಚಪ್ಪಾ ತಂದೆ ನಿಂಗಪ್ಪಾ ಉಪ್ಪಿನ ಸಾ: ಕಿರಣಗಿ ಇತನು ತನ್ನ ಮೊಟಾರ ಸೈಕಲನನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದರಿಂದ ನಾನು ಕೆಳಗೆ ಬಿದ್ದೇನು ಅಪಘಾತದಿಂದಾಗಿ ನನಗೆ ಭಾರಿ ಒಳಪೆಟ್ಟಾಗಿದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 9/2012 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: