Police Bhavan Kalaburagi

Police Bhavan Kalaburagi

Monday, January 23, 2012

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಮಹ್ಮದ ಶಕೀಲ ತಂದೆ ಬಾಬು ಮಿಯ್ಯಾ ಸಾ|| ಮನೆ ನಂ 109 ಮಜಿದ-ಎ-ಹುದಾ ಹತ್ತಿರ ರೇಹಮತನಗರ ಹಳೇ ಜೇವರ್ಗಿ ರಸ್ತೆ ಗುಲಬರ್ಗಾರವರು ನಾನು ದಿ: 21.01.12 ರಂದು ಮದ್ಯಾಹ್ನ 2-00 ಪಿ.ಎಮ್ ಕ್ಕೆ ಮನೀಷ ಬೇಕರಿ ಹತ್ತಿರ ನನ್ನ ಬಜಾಜ ಪಲ್ಸರ ನಂ ಕೆಎ 32 ಡಬ್ಲೂ 9520 ಅಕಿ 25000/- ರೂ ನೇದ್ದು ನಿಲ್ಲಿಸಿ ಜಿರೆಕ್ಸ ಮಾಡಿಕೊಂಡು ಮರಳಿ ಬಂದು ನೋಡಲಾಗಿ, ನಿಲ್ಲಿಸಿದ ಸ್ಥಳದಲ್ಲಿ ನನ್ನ ವಾಹನ ಇರಲಿಲ್ಲಾ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 06/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 22/01/2012 ರಂದು ಆಲೂರ (ಬಿ) ಗ್ರಾಮದ ಸಂತೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ನಿಂಬರ್ಗಾ ಠಾಣೆ ಮತ್ತು ಸಿಬ್ಬಂದಿ ಜನರಾದ ರಾಮಚಂದ್ರ ಸಿಪಿಸಿ ವಿಶ್ವನಾಥ ರೆಡ್ಡಿ ಸಿಪಿಸಿ, ಮತ್ತು, ಭೀಮಾಶಂಕರ ಇವರೆಲ್ಲರೂ ಕೂಡಿಕೊಂಡು ದಾಳಿ ಮಾಡಿ 6 ಜನರನ್ನು ಹಿಡಿದು ವಿಚಾರಿಸಲು ಅವರ ಹೆಸರು ಚಂದ್ರಕಾಂತ ತಂದೆ ಬಸವಂತರಾವ ಪಾಟೀಲ, ಸಿದ್ದಪ್ಪ ತಂದೆ ಚಂದಪ್ಪ ಜ್ಯೋತಿ, ಶಿವಪುತ್ರ ತಂದೆ ಸೈಬಣ್ಣಾ ಮದರಿ, ಸೈಬಣ್ಣಾ ತಂದೆ ಭೀಮಶ್ಯಾ ಚಿತಲಿ, ಶಿಪುತ್ರ ತಂದೆ ಶಿವಲಿಂಗಪ್ಪ ಹೊಸಮನಿ ಮತ್ತು ರಹೇಮಾನ ಸಾಬ ತಂದೆ ಇಮಾಮಸಾಬ ವಾಡಿ ಸಾ|| ಎಲ್ಲರೂ ಆಲೂರ ( ಬಿ ) ಗ್ರಾಮ ಇವರನ್ನು ಚೆಕ ಮಾಡಲಾಗಿ ಸದರಿಯವರಿಂದ ನಗದು ಹಣ ಒಟ್ಟು 1250/- ಮತ್ತು ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 4/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಅನಂತರಾಮ ತಂದೆ ನಾಗಪ್ಪ ಪೇಂಟರ ವ:30 ವರ್ಷ ಜಾ:ಕಬ್ಬಲಿಗೇರ ಉ: ಕೆ.ಎಸ್.ಅರ್. ಟಿ.ಸಿ.ಬಸ್ಸ ಚಾಲಕ ಡಿ. ನಂ. 1188 ಹುಮನಾಬಾದ ಡಿಪೋ ಸಾ: ಚಿನ್ನಕೇರಾ ತಾ: ಹುಮನಾಬಾದರವರು ನಾನು ದಿನಾಂಕ 22-01-12 ರಂದು ಬೆಳಿಗ್ಗೆ 5-00 ಗಂಟೆ ಸುಮಾರಿಗೆ ಬೆಂಗಳೂರದಿಂದ ಗುಲಬರ್ಗಾ ಕೇಂದ್ರ ಬಸ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕೂಡಿಸಿಕೊಂಡು ಹುಮನಾಬಾದಕ್ಕೆ ಹೊರಟಿದ್ದು, ನನ್ನ ಬಸ್ಸ ನಂಬರ ಕೆಎ 38 ಎಫ 686 ಚಾಲನೆ ಮಾಡುತ್ತಾ ಬೆಳಗಿನ 5-30 ಗಂಟೆ ಸುಮಾರಿಗೆ ಗುಲಬರ್ಗಾ-ಹುಮನಾಬಾದ ರಿಂಗ ರೋಡಿನ ಮಧ್ಯದ ಸರ್ಕಲ ದಾಟುತ್ತಿರುವಾಗ ಸೇಡಂ ರಿಂಗ ರೋಡ ಕಡೆಯಿಂದ ಲಾರಿ ನಂಬರ ಎಪಿ 22 ವಾಯ್ 3132 ಚಾಲಕ ನರಸಿಂಹ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದವನೇ ನಾನು ಕುಳಿತ ಹಿಂದಿನ ಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದನು. ಹಾಗೇ ಲಾರಿ ರಿಂಗ ರೋಡಿಗೆ ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಡ್ಯಾಮೇಜ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 22/1/2012 ರಂದು ಸಾಯಂಕಾಲ ಸೈಯ್ಯದ ಚಿಂಚೋಳಿ ಸೀಮಾಂತರದಲ್ಲಿ ಬರುವ ಸೈಯದಮಿಯ್ಯ ಜಾಗೀರದಾರ ಇವರ ಹೊಲದಲ್ಲಿ ಬಂದಾರಿ ಗಿಡದ ಕೆಳಗೆ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿ ದ್ದಾಗ ಶ್ರೀ ಆನಂದರಾವ ಎಸ್‌ ಎನ್‌ ಪಿಎಸ್‌ಐ ಮತ್ತು ಸಿಬ್ಬಂದಿಯವರು ಗುಲಬರ್ಗಾ ಗ್ರಾಮೀಣ ಠಾಣೆರವರು ದಾಳಿ ಮಾಡಿ ಜೂಜಾಟ ಆಡುತ್ತಿದ್ದ ಶರಣಬಸಪ್ಪ @ ಶಿವು ತಂದೆ ಮಲ್ಲಪ್ಪ ಬೆಕನಾಳ ಸಾ: ಶೇಖರೋಜಾ ಗುಲ್ಬರ್ಗಾ ಸಂಗಡ ಇನ್ನೂ 9 ಜನರು ಜನರನ್ನು ಹಿಡಿದು ಅವರಿಂದ ನಗದು ಹಣ 7400/- ರೂ ಇಸ್ಪೇಟ ಎಲೆಗಳು, 10 ಮೋಬೈಲಗಳು, 9 ಮೋಟಾರ ಸೈಕಲಗಳು ಹೀಗೆ ಒಟ್ಟು 2,37,400/- ರೂ ಗಳು ವಸಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 19/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಬಸವರಾಜ ತಂದೆ ಹಣಮಂತಪ್ಪ ಗೌಡಪ್ಪಗೌಡ ಸಾ: ಅವರಾದ(ಬಿ) ತಾ: ಜಿ: ಗುಲಬರ್ಗಾರವರು ನನಗೆ ಶರಣಪ್ಪ @ ಶರಣು ತಂದೆ ಬಾಬುರಾವ ಬೇಲೂರ ಸಾ: ಅವರಾದ(ಬಿ) ತಾ; ಜಿ: ಗುಲಬರ್ಗಾ ಇನತು ನನಗೆ ಈ ಮೊದಲು ಹೊಟೇಲ ಬಾಕಿ ಕೊಡುವ ವಿಷಯದಲ್ಲಿ ಜಗಳವಾಡಿದ್ದು, ಅದೆ ವೈಷ್ಯಮ್ಯದಿಂದ ಇಂದು ದಿನಾಂಕ 22/1/12 ರಂದು ಮಧ್ಯಾಹ್ನ ಈರಣ್ಣ ಡೋಣಿ ಇವರ ಹೊಲದಲ್ಲಿ ಊಟ ಮಾಡುತ್ತಿದ್ದಾಗ ಅಲ್ಲಿಗೆ ಬಂದು ಜಗಳ ತೆಗೆದು ಅವ್ಯಾಚ್ಛ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: