ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ಖೈರುನ ಬಿ ಗಂಡ ಅಬ್ದುಲ ನಬಿ ಗೋಳಾ ಸಾ: ರಾವೂರ ತಾ: ಚಿತ್ತಾಪೂರ ರವರು ನಾನು ದಿ 23-01-2012 ರಂದು ಮಧ್ಯಾಹ್ನ ಸುಪರ ಮಾಕೇಟ ಅಟೋ ಸ್ಟ್ಯಾಂಡ ರೋಡಿನ ಮೇಲೆ ಮಹಿಂದ್ರಾ ಟಾಟಾ ಎ.ಸಿ. ಗೂಡ್ಸ ನಂ: ಕೆಎ 33 -9511 ನೇದ್ದರ ಚಾಲಕ ಇಮಾಮೋದ್ದಿನ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ತನ್ನ ವಾಹನ ಅಲ್ಲಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಶಾಮ ತಂದೆ ವಾಸುದೇವ ನಾನಾವತೆ ಸಾ: ಮನೆ £ÀA:1-16 ಬಿ ವೆಂಕಟೇಶ ನಗರ ಗುಲಬರ್ಗಾರವರು ನಾನು ದಿ 23-01-2012 ರಂದು ಮಧ್ಯಾಹ್ನ ಅನಂದ ಓ.ಪಿ ಕ್ರಾಸದಿಂದ ಕೋರ್ಟ ಕ್ರಾಸ್ ಮೇನ ರೋಡಿನಲ್ಲಿ ಬರುವ ಜಿಲ್ಲಾ ಅರಣ್ಯ ಇಲಾಖೆ ಕಾರ್ಯಾಲಯ ಎದುರು ರೋಡಿನ ಮೇಲೆ ನನ್ನ ಮೋಟಾರ ಸೈಕಲ ನಂ ಕೆಎ-32 ವಾಯಿ-2368 ನೇದ್ದರ ಮೇಲೆ ಹೋಗುತ್ತಿದ್ದಾಗ, ಮೋಟಾರ ಸೈಕಲ ನಂ: ಕೆಎ 32 ವಿ 9394 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 11/2012 ಕಲಂ 279, 337, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ: ನಾನು ಸಿದ್ರಾಮ ತಂದೆ ಸೈಬಣ್ಣಾ ಕಟಗೆ ಸಾ:ಸುಲ್ತಾನಪೂರ ಗಲ್ಲಿ ಆಳಂದ ರವರು ನಮ್ಮ ಮತ್ತು ನಮ್ಮ ಮನೆಯ ಪಕ್ಕದ ಮಾರುತಿ ತಂದೆ ಪಕ್ಕಿರಪ್ಪ ಗಾಜರೆ ನಡುವೆ ಜಾಗಯ ಸಂಬಂದ ತಕರಾರು ಇರುತ್ತದೆ. ದಿನಾಂಕ 23/01/2012 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ನನ್ನ ತಾಯಿಯಾದ ಚಾಂಗುನಾಬಾಯಿ ಇವಳು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಕೂಳಿತು ಮುಸರಿ ಪಾತ್ರೆ ತೊಳೆಯುವಾಗ ಕೋಳಿ ಬಂದಿದೆ ಸೂ ಎಂದು ಅದಕ್ಕೆ ಹಳ್ಳ[ಚಿಕ್ಕ ಕಲ್ಲು] ದಿಂದ ಹೊಡೆದಾಗ ಸದರಿ ಹಳ್ಳಾ ಮಾರುತಿಯವರ ಮನೆಯ ಮುಂದೆ ಹೋದಾಗ ನಮ್ಮೊಂದಿಗೆ ಜಗಳ ತೆಗೆಯುವ ಉದೇಶದಿಂದ ಮಾರುತಿ ಮೊಮ್ಮಕ್ಕಳಾದ ಚಂದ್ರಕಾಂತ ತಂದೆ ಮೈಲಕಾರಲಿಂದ, ಪ್ರಕಾಶ ತಂದೆ ಮೈಲಾರಲಿಂಗ , ಸುಸಿಲಾಬಾಯಿ [ಸೊಸೆ] ಕೂಡಿ ಬಂದು ಚಂದ್ರಕಾಂತನು ಅವಾಚ್ಯವಾಗಿ ಬೈದಿರುತ್ತಾರೆ ಇವರೆಲ್ಲರೂ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಹಿರಾಚಂದ ಇತನು ನಾಯಿಗೆ ಚೌ ಹಚ್ಚಿ ನಾಯಿಯಿಂದ ಕಚ್ಚಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ 324.323.504.506.289.ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ : ಶ್ರೀ ಶರಣಪ್ಪಾ ತಂದೆ ನರಸಪ್ಪಾ ಪರೀಟ್ ಸಾ: ಶಂಕರವಾಡಿ ರವರು ನಾನು ದಿನಾಂಕ:23/01/2012 ರಂದು ರಾತ್ರಿ ಶಂಕರವಾಡಿಯಿಂದ ಶಾಂತ ನಗರಕ್ಕೆ ಊಟ ಮಾಡಲು ಮೋಟಾರ ಸೈಕಲ್ ಕೆ.ಎ-32/ಎಫ್-1334 ನೇದ್ದರ ಮೇಲೆ ಬಂದು ಊಟ ಮಾಡಿ ನಂತರ ಶಂಕರವಾಡಿ ಗ್ರಾಮಕ್ಕೆ ಹೋಗುತ್ತಿರುವಾಗ ಸ್ಕೀಡ್ ಆಗಿ ನಾನೆ ಕೆಳಗೆ ಬಿದ್ದೇನು. ನನಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿದ್ದು ಮತ್ತು ಬಲತೊಳು ತರಚಿದ ಗಾಯ , ಮುಖಕ್ಕೆ ಮತ್ತು ಕೈ ಕಾಲುಗಳೀಗೆ ಸಣ್ಣ ಪುಟ್ಟ ರಕ್ತಗಾಯಗಳಾಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ: 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Tuesday, January 24, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment