Police Bhavan Kalaburagi

Police Bhavan Kalaburagi

Sunday, January 29, 2012

GULBARGA DIST REPORTED CRIMES

ಜಾತಿ ನಿಂದನೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ಚಂದ್ರಶೇಖರ ತಂದೆ ಮರೇಪ್ಪ ಹೊಸಮನಿ ಸಾ: ರಾಜವಾಳ ರವರು ನಾನು ದಿನಾಂಕ: 26/01/2012 ರಂದು ಸಾಯಂಕಾಲ ಗುರಪ್ಪ ತಂದೆ ಗಂಗಪ್ಪ ಸೂಗುರ, ಶರಣಪ್ಪ , ಮತ್ತು ಮಲ್ಲಪ್ಪ ಇವರು ನಮ್ಮ ತಂದೆ ಮರೆಪ್ಪ ಹೊಸಮನಿ ಇವರಿಗೆ ಸರಾಯಿ ಕುಡಿದ ಹಣ ಕೋಡುವ ವಿಷಯದಲ್ಲಿ ಜಗಳ ತೆಗೆದು ಹೊಡೆದು ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ . ಬಿಡಿಸಲು ಹೋದ ನನಗೆ ಮತ್ತು ನನ್ನ ತಾಯಿಗೆ ನೂಕ್ಕಿಸಿ ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 14/2012 ಕಲಂ 323, 324, 354, 355, 504, 506, ಸಂಗಡ 34 ಐಪಿಸಿ ಮತ್ತು ಕಲಂ 3 (1) (10) ಎಸ್.ಸಿ. ಎಸ್..ಟಿ ಪಿ. ಎ. ಅಕ್ಟ 1989 ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
:ಶ್ರೀಮತಿ ಮಲ್ಲಮ್ಮ ಗಂಡ ಚಂದ್ರಕಾಂತ ನಾಟಿಕಾರ ಸಾ ಎಸ.ಎಂ.ಕೃಷ್ಣಾ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:27-01-2012 ರಂದು ರಾತ್ರಿ ಸುಮಾರಿಗೆ ಮನೆಯಲ್ಲಿ ಇದ್ದಾಗ ಕಲ್ಯಾಣಿ, ಕಾಶಿನಾಥ ಮಡಕಿ ಇಬ್ಬರು ಬಂದು ನನ್ನ ಗಂಡನ ಹೆಸರು ಕೂಗಿದಾಗ ನಾನು ಹೊರಗೆ ಬಂದು ಕೇಳಲು ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಕೇಳಿದರು ನಾನು ಮನೆಯಲ್ಲಿಲ್ಲ ಅಂದಿದಕ್ಕೆ ನಿನ್ನ ಗಂಡ ಕೊಡಬೇಕಾದ ಹಣ ಕೊಡಬಾರದೆಂದು ಗಂಡನನ್ನು ಮನೆಯಲ್ಲಿ ಮುಟ್ಟಿದ್ದು ಮನೆಯಲ್ಲಿ ಇಲ್ಲಾ ಅಂತಾ ಹೇಳುತ್ತಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ತಲೆ ಮತ್ತು ಬೆನ್ನು ಮೆಲೆ ಹೊಡೆ ಮಡಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:28/2012 ಕಲಂ 504, 323, 341, 354, 506, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

No comments: