Police Bhavan Kalaburagi

Police Bhavan Kalaburagi

Monday, January 2, 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ರಾಮು ತಂದೆ ಸಿದ್ದಣ್ಣಾ ಹೊನಗುಂಟಾ ಸಾ:ಶಂಕರವಾಡಿರವರು ನಾನು ಮತ್ತು ವಿನೋದ ಕೂಡಿಕೊಂಡು ಮರೇಮ್ಮಾ ಗುಡಿಯ ಹತ್ತಿರ ಹೊಗುತ್ತಿರುವಾಗ ರಾಜು ತಂದೆ ಮಲ್ಲಪ್ಪಾ ಸಂಗಡ ಇಬ್ಬರೂ ಹಾಗೂ ರಾಣೋಜಿ ತಂದೆ ದೇವಪ್ಪಾ ಸಂಗಡ ಮೂವರು ಸಾ:ಎಲ್ಲರೂ ಶಂಕರವಾಡಿ ಇವರ ನಡುವೆ ಹೊಸ ವರ್ಷದಲ್ಲಿ ಸ್ಪೀಕರ ಹಚ್ಚುವ ಸಲುವಾಗಿ ಬಾಯಿ ಮಾತಿನ ಜಗಳ ನಡೆಯುತ್ತಿರುವಾಗ ನಾವು ಏಕೆ ಜಗಳ ತೆಗೆಯುತ್ತೀರಿ ಅಂತಾ ಕೇಳಿದಕ್ಕೆ ರಾಣೋಜಿ ಇತನು ನನಗೆ ಮತ್ತು ವಿನೋದನಿಗೆ ಅವಾಚ್ಯ ಶಬ್ಬಗಳಿಂದ ಬೈದು ಕಲ್ಲಿನಿಂದ ತಲೆಗೆ ಹೊಡೆದು ಕೈ ಮುಷ್ಠಿಮಾಡಿ ಎಡಗೈ ಮುಂಗೈಗೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ:323,324,504,506,ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಕು ಶರಣಕುಮಾರ ತಂದೆ ಶಿವಾನಂದ ಸುತಾರ ವ: 14 ಉ: ವಿಧ್ಯಾರ್ಥಿ ಸಾ: ನರೋಣ ಹಾ.ವ: ತಾರಫೈಲ್ ಗುಲಬರ್ಗಾರವರು ನಾನು ಮತ್ತು ನನ್ನ ಕಾಕ ಕಲ್ಲಪ್ಪ ಈತನಿಗೆ ಹಣ ಬೇಕಾಗಿದ್ದರಿಂದ ದಿನಾಂಕ: 02-01-2012 ರಂದು ಆಶ್ರಯ ಕಾಲೋನಿ ಶೇಖ ರೋಜಾದಿಂದ ಬೆಳಗ್ಗೆ ಎ.ಟಿ.ಎಮ್.ದಿಂದ ಹಣ ತರಲು ಶೆಟ್ಟಿ ಕಾಂಪ್ಲೇಕ್ಸ ಹತ್ತಿರ ಮೋಟಾರ ಸೈಕಲ್ ನಂ: ಕೆಎ 32 ಎಲ್ 8626 ನೇದ್ದರ ಮೇಲೆ ನಾನು ಹಿಂದೆ ಕುಳಿತು ಶೇಟ್ಟಿ ಕಾಂಪ್ಲೇಕ್ಸ ಎ.ಟಿ.ಎಮ್.ಕ್ಕೆ ಬಂದು ಎ.ಟಿ.ಎಮ್.ದಿಂದ ಹಣ ಬರದಿದ್ದಕ್ಕೆ ಪುನಃ ಆಶ್ರಯ ಕಾಲೋನಿಗೆ ಶಾಹಾ ಬಜಾರ ನಾಕಾದಿಂದ ಆಳಂದ ಚೆಕ್ಕಪೊಸ್ಟ ಮುಖಾಂತರ ಗದಲೇಗಾಂವ ಕಾಂಪ್ಲೇಕ್ಸ ಎದುರುಗಡೆ ಹೋಗುತ್ತಿರುವಾಗ ಕಾರ ನಂ:ಕೆಎ 32 ಎನ್ 29 ರ ಚಾಲಕ ಆಳಂದ ಚೆಕ್ಕಪೊಸ್ಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನಾವು ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದೆವು . ಕಾಕನಾದ ಕಲ್ಲಪ್ಪ ಈತನ ತಲೆಗೆ ಭಾರಿ ಪೆಟ್ಟು ಬಿದ್ದು ರಕ್ತ ಸೋರಿ ಆತನು ಸ್ಥಳದಲ್ಲಿಯೇ ಮೃತ ಪಟ್ಟಿದನು. ನನಗೆ ಬಲ ಭುಜಕ್ಕೆ ಬಲ ಮೊಳಕಾಲಿಗೆ ತರಚೀದ ಗಾಯವಾಗಿರುತ್ತದೆ. ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 02/12 ಕಲಂ: 279,337 304(ಎ) ಐ.ಪಿ.ಸಿ.ಸಂ:187 ಐ.ಎಮ್.ವಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: