ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-02-2012
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ 22/2012 ಕಲಂ 504, 307 ಜೊತೆ 34 ಐಪಿಸಿ :-
ದಿನಾಂಕ 13/02/2012 ರಂದು ಭಾಲ್ಕಿ ಪಟ್ಟಣದ ಫೂಲ್ಲೆ ಚೌಕ ಹತ್ತಿರ ಅಬು ಜೋಳದಾಪಕೆ ರವರ ತರಕಾರಿ ಭಂಡಿಯ ಎದುರಗಡೆ ಆರೋಪಿತರಾದ 1) ಅಲ್ಲಾಶಾ ತಂದೆ ಮಸ್ತಾನಸಾಬ, 2) ಇಸ್ಮಾಯಿಲ ತಂದೆ ಮಸ್ತಾನಸಾಬ, 3) ದಸ್ತಾಗಿರ ತಂದೆ ಮಸ್ತಾನಸಾಬ ಇನಾಮದಾರ ಎಲ್ಲರು ಸಾ: ಮಾಶುಮ ಪಾಶ್ಯಾ ಕಾಲೋನಿ ಭಾಲ್ಕಿ ಇವರೆಲ್ಲರೂ ಕೂಡಿ ತರಕಾರಿ ತರಲು ಬಂದ ಸೈಯದ್ ಉಮರ ತಂದೆ ಸೈಯದ ವಲಿ ವಯ: 29 ವರ್ಷ, ಸಾ: ಭೀಮ ನಗರ ಭಾಲ್ಕಿ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಹಮ್ಮ ಕೋ ತುಮ ಹಪತಾ ದೇನಾ ತುಮಾರಾ ಭಾಯಿ ಹಮ್ಮರೆ ಸಾತ ಲಡಾಯಿ ಕಿಯಾಹೈ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಂಬೆಯಿಂದ ಉಮರ ಇತನ ಹೊಟ್ಟೆಯಲ್ಲಿ ಎರಡು ಕಡೆ ಜೋರಾಗಿ ತಿವಿದಿ ಭಾರಿ ರಕ್ತ ಗಾಯಪಡಿಸಿರುತ್ತಾರೆ ಇದರಿಂದ ಉಮರ ಇತನ ಹೊಟ್ಟೆಯಲ್ಲಿನ ಕರಳುಗಳು ಹೋರಗೆ ಬಿದ್ದಿರುತ್ತವೆ ಹಾಗೂ ಆರೋಪಿತರು ಜಂಬೆಯಾ ತೆಗೆದುಕೊಂಡು ಉಮರ ಈತನ ಎದೆಯಲ್ಲಿ ತಿವಿದು ಹಾಗು ಬಲ ಮೊಳ ಕಾಲ ಪಿಂಡರಿ ಹತ್ತಿರ ಹೋಡೆದು ಭಾರಿ ರಕ್ತ ಗಾಯ ಪಡಿಸಿರುತ್ತಾರೆಂದು ಗಾಯಾಳುವಿನ ತಮ್ಮನಾದ ಇಬ್ರಾಹಿಮ ಇತನ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ 17/2012 ಕಲಂ 279, 338 ಐಪಿಸಿ :-
ದಿನಾಂಕ 11-02-2012 ರಂದು 0900 ಗಂಟೆಗೆ ಫಿAiÀiÁðದಿ ಸುಭಾಷ ತಂದೆ ವಿಜಯಕುಮಾರ ಮಾಶೇಟ್ಟೆ ಸಾ: ಭಾಲ್ಕಿ ಉದಗೀರದಿಂದ ಮರಳಿ ಭಾಲ್ಕಿಗೆ ಬರುವಾಗ ಅಂಬೆಸಾಂಗ್ವಿ ಕ್ರಾಸಿಗೆ ಬಸ್ಸಿನಿಂದ ಕೆಳಗೆ ಇಳಿದು ರೋಡ ದಾಟುವಾಗ ಉದಗೀರ ಕಡೆಯಿಂದ ಆರೋಪಿ ಕೆಎ-03/ವಾಯ್-648 ನೇದ್ದರ ಚಾಲಕನಾದ ಬಂಡೆಪ್ಪಾ ತಂದೆ ಸಿದ್ರಾಮಪ್ಪಾ ಸಾ: ಭಾಲ್ಕಿ ಇತನು ತನ್ನ ವಾಹನವನ್ನು ಅತೀ ವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಫಿAiÀiÁðದಿಗೆ ಜೋರಾಗಿ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿAiÀiÁðದಿಯ ಬಲಗಾಲು ಮೋಳಕಾಲು ಕೆಳಗೆ ಭಾರಿ ಗುಪ್ತ ಗಾಯ ಆಗಿ ಮುರಿದಿರುತ್ತದೆ ಮತ್ತು ಎಡಗಾಲು ಹಿಂಬಡಿ ಹತ್ತಿರ ಸಹ ಮುರಿದು ಉಬ್ಬಿರುತ್ತದೆ ಅಂತಾ ಕೊಟ್ಟ ಫಿAiÀiÁðದಿಯ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹೊಕರ್ಣಾ ಪೊಲೀಸ ಠಾಣೆ ಯು.ಡಿ.ಆರ ನಂ 02/2012 ಕಲಂ 174 ಸಿ.ಆರ್.ಪಿ.ಸಿ :-
ಫಿAiÀiÁðದಿತಳಾದ ಸುನೀತಾ ಗಂಡ ವಿಠಲ ಸುಬಾನೆ ವಯ: 26 ವರ್ಷ, ಸಾ: ಹಂಗರಗಾ ಇಕೆಯ ಗಂಡನಾದ ಮೃತ ವಿಠಲ ತಂದೆ ನಾರಾಯಣರಾವ ಸುಬಾನೆ ವಯ: 31 ವರ್ಷ, ಸಾ: ಹಂಗರಗಾ ಇತನು ಒಂದು ತಿಂಗಳ ಹಿಂದೆ ತನ್ನ ಹೊಲದಲ್ಲಿ ಕಟ್ಟೆಗೆ ಮುಳ್ಳಿನ ಗಿಡ ಕಡಿಯುದ್ದಾಗ ಅಡವಿಯಲ್ಲಿನ ಒಂದು ತೋಳ ಬಂದು ವಿಠಲ ಇತನ ಬಲಗಾಲ ಪಿಂಡರಿಗೆ ಕಚ್ಚಿದರಿಂದ ರಕ್ತಗಾಯ ಆಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ವಿಠಲ ಇತನು ದಿನಾಂಕ 13/02/2012 ರಂದು ರಾತ್ರಿ 0300 ಗಂಟೆಗೆ ಮೃತ ಪಟ್ಟಿರುತ್ತಾನೆಂದು ಅಂತ ಕೊಟ್ಟ ಫಿAiÀiÁðದಿ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ ಬೀದರ ಗುನ್ನೆ ನಂ 33/2012 ಕಲಂ 379 ಐಪಿಸಿ :-
ದಿನಾಂಕ 28-12-2011 ರಂದು 1600-1700 ಗಂಟೆ ಅವಧಿಯಲ್ಲಿ ಫಿAiÀiÁðದಿತಳಾದ ಎಲಿಜಬೇತ ಗಂಡ ಮೈಕಲ್ ವಯ: 61 ವರ್ಷ, ನಿವೃತ ಉಪನ್ಯಾಸಕರು ಸಾ: ಪ್ಲಾಟ ನಂ 58/ಎ ಬಾಲಾಜಿ ಸ್ವರ್ಣಪೂರ ಕಾಲೋನಿ ಮೋತಿ ನಗರ ಹೈದ್ರಾಬಾದ (ಎ.ಪಿ.) ಇವರು ತಮ್ಮ ಸಂಬಂಧಿಕರ ಮದುವೆ ಸಮಾರಂಭದ ಫೋಟೊ ತೆಗೆಸಿಕೊಳ್ಳುವ ಸಮಯದಲ್ಲಿ ಅಲ್ಲಿಯೇ ಸ್ಟೇಜ್ ಹತ್ತಿರ ತನ್ನ ಪಸರ್್ ಬದಿಯಲ್ಲಿಟ್ಟು ಫೋಟೊ ತೆಗೆಸಿಕೊಂಡು ಬರುವಷ್ಟರಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಫಿAiÀiÁðದಿಯವರ ಪಸರ್್ನಲ್ಲಿದ್ದ ಬಂಗಾರದ ವಡವೆ, ಮೊಬೈಲ್, ಪ್ಯಾನ್ ಕಾಡ್ ಮತ್ತು ಪಾಸ್ ಪೋರ್ಟ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿಯರ್ಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಗುನ್ನೆ ನಂ 14/2012 ಕಲಂ 366 ಜೊತೆ 34 ಐಪಿಸಿ :-
ಸುಮಾರು 2 ವರ್ಷಗಳಿಂದ ಫಿರ್ಯಾದಿತಳಾದ ಶಾಹಿದಾಬೇಗಂ ಗಂಡ ಎಮ್.ಡಿ.ಫಾರುಕ ನೆಲವಾಳವಾಲೆ ವಯಾ: 45 ವರ್ಷ, ಸಾ: ಪುಕಟ ನಗರ ಮನ್ನಾಎಖೇಳ್ಳಿದಿವರ ಮಗಳಾದ ವಸಿಯಾಸುಲ್ತಾನ ವಯ: 20 ವರ್ಷ ಇಕೆಗೆ ಆರೋಪಿ ಜಾವೀದ್ ತಂದೆ ಮಹ್ಮದ್ ಯುಸಫ್ಅಲಿ ಜಮಾದಾರ ವಯ: 28 ವರ್ಷ, ಸಾ: ಮನ್ನಾಎಖೇಳಿ ಇತನು ಮದುವೆಗಾಗಿ ಕೇಳಿದ್ದು ಆಗ ಫಿರ್ಯಾದಿಯವರು ತನ್ನ ಮಗಳಿಗೆ ಕೊಡಲು ಒಪ್ಪಲಾರದರಿಂದ ದಿನಾಂಕ 13/02/2012 ರಂದು ಸಾಯಂಕಾಲ 5 ಗಂಟೆಗೆ ಆರೋಪಿ ಜಾವೀದ್ ಇವನು ಫಿರ್ಯಾದಿಯವರ ಮನೆಯೊಳಗೆ ಬಂದು ಮಗಳಾದ ವಸಿಯಾ ಸುಲ್ತಾನಾ ಇವಳಿಗೆ ಬಾಯಿ ಮತ್ತು ಎರಡು ಕೈಗಳು ಒತ್ತಿ ಹಿಡಿದು ಮನೆಯಿಂದ ಹೊರಗೆ ತಂದು ಮನೆಯ ಮುಂದೆ ನಿಲ್ಲಿಸಿದ ಒಂದು ಟಾಟಾ ಇಂಡಿಕಾ ಕಾರ್ ಎಮ.ಎಚ. ಪಾಸಿಂಗ್ ಸಿಲ್ವರ್ ಕಲರ ನೇದ್ದರಲ್ಲಿ ಎತ್ತಿ ಹಾಕಿ ಅಪಹರಣ ಮಾಡಿಕೊಂಡು ಹೋಗುವಾಗ ಇನ್ನೂ 3 ಜನ ಹುಡುಗರು ಇದ್ದರು, ಫಿರ್ಯಾದಿಯವರು ಚಿರಾಡುವದರಲ್ಲಿ ವೇಗವಾಗಿ ಕಾರ್ ಚಲಾಯಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment