ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-02-2012
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ 427, 279 ಐಪಿಸಿ ಜೊತೆ 187 ಐಎಂವಿ Dಕ್ಟ್ :-
ದಿನಾಂಕ 19/02/2012 ರಂದು ಭಾಲ್ಕಿ ಶಿರ್ಶೆ ಪೆಟ್ರೋಲ ಬಂಕ ಹತ್ತಿರ ಇರುವ ಜೆಸ್ಕಾಂ ಇಲಾಖೆಗೆ ಸಂಬಂಧ ಪಟ್ಟ ವಿದ್ಯುತ ಕಂಬ ನಂ P Mtr HT/LT NO 3 ನೇದಕ್ಕೆ ಯಾವದೋ ಅಪರಿಚಿತ ಲಾರಿ ಅಥವಾ ಟ್ರಕ ಚಾಲಕ ತನ್ನ ವಾಹನ ಅತಿ ವೇಗ ಹಾಗು ನಿಷ್ಕಾಳಜಿನತದಿಂದ ಚಲಾಯಿಸಿ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಜೆಸ್ಕಾಂ ಇಲಾಖೆಗೆ ಸಂಬಂಧ ಪಟ್ಟ ವಿದ್ಯುತ ಕಂಬ ನಂ ಡ್ಯಾಮೇಜ ಆಗಿ ಸುಮಾರು 35,000=00 ರೂಪಾಯಿ ಹಾನಿಯಾಗಿರುತ್ತದೆ ಎಂದು ಫಿರ್ಯಾದಿ ಅನಿಲಕುಮಾರ ತಂದೆ ಶಿವಲಿಂಗಪ್ಪಾ ಪಾಟೀಲ್ ಭಾಲ್ಕಿ ಕೆ.ಪಿ.ಟಿ.ಸಿ.ಎಲ್ ಸೆಕ್ಷನ್ ಅಧಿಕಾರಿ ಸಾ: ಭಾಲ್ಕಿ ರವರು ನೀಡಿದ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಗುನ್ನೆ ನಂ 30/2012 ಕಲಂ 87 ಕೆ.ಪಿ ಆಕ್ಟ್ :-
ದಿನಾಂಕ: 19-02-2012 ರಂದು ಎಲ್ಲದಗೂಂಡಿ ಗ್ರಾಮದ ಮಹಾದೇವ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಅಬಾಸ ತಂದೆ ಬುತುಬೋದ್ದಿನ ಲಾಧಪ, ವಯ: 30 ವರ್ಷ, 2) ಉಮೇಶ ತಂದೆ ಅಣೇಪ್ಪಾ ಅವಟೇ, ವಯ: 28 ವರ್ಷ, 3) ಯಲ್ಲಲಿಂಗ್ ತಂದೆ ನಾಮದೇವ ಚೊಂಗೆ, ವಯ: 25 ವರ್ಷ, 4) ಮಹಾದೇವ ತಂದೆ ಗಣಪತಿ ಮೇಕಾಲೆ, ವಯ: 30 ವರ್ಷ, ಎಲ್ಲರೂ ಸಾ: ಎಲ್ಲದಗುಂಡಿ ಇವರೆಲ್ಲರೂ ಕೂಡಿ ಹಣ ಹಚ್ಚಿ ಅಂದರ ಬಾಹಿರವೆಂಬ ಎಂಬ ಇಸ್ಪಟ ಎಲೇಯ ನಸೀಬಿನ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿ ವಿ.ಎಮ್ ಗೋಖಲೆ, ಪಿ.ಎಸ್.ಐ ಮಂಠಾಳಾ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜೂಜಾಟಗಾರರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು, ಎಲ್ಲರನ್ನು ದಸ್ತಗೀರಿ ಮಾಡಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಗುನ್ನೆ ನಂ 29/2012 ಕಲಂ 366(ಎ), 448 ಜೊತೆ 149 ಐಪಿಸಿ :-
ಆರೋಪಿತರಾದ 1) ದಿಗಂಬರ ತಂದೆ ದಶರಥ ಅಲಗೂಡೆ, 25 ವರ್ಷ, 2) ದಶರಥ ತಂದೆ ಅಲಗೂಡೇ, ವಯ: 55 ವರ್ಷ, 3) ಶಾರದಾ ಗಂಡ ದಶರಥ ಅಲಗೂಡೆ. ವಯ: 50 ವರ್ಷ, 4) ದತ್ತು ತಂದೆ ದಶರಥ ಅಲಗೂಡೆ ವಯ: 30 ವರ್ಷ, 5) ರೇಖಾ ಗಂಡ ದತ್ತು ಅಲಗೂಡೆ, 6) ಮಲ್ಲಿಕಾಜೂನ ತಂದೆ ಗೊವಿಂದ ಕನಕೊರೆ ವಯ: 29 ವರ್ಷ ಎಲ್ಲರೂ ಸಾ: ಗುಂಡೂರ ಇವರೆಲ್ಲರೂ ದಿನಾಂಕ 01-12-2011 ರಂದು ಫಿರ್ಯಾದಿತಳಾದ ಉಮಾದೇವಿ ಗಂಡ ದತ್ತು ಮೇತ್ರೆ, ವಯ 45 ವರ್ಷ, ಜಾತಿ: ಧನಗರ, ಸಾ: ಗುಂಡುರ ಇವರ ಮಗಳಿಗೆ ಫೂಸಲಾಯಿಸಿ, ಮದುವೇ ಮಾಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದು ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಗುನ್ನೆ ನಂ 10/2012 ಕಲಂ 457, 380 ಐಪಿಸಿ :-
ದಿನಾಂಕ 18, 19/02/2012 ರ ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಸಂಗಮ ಗ್ರಾಮದಲ್ಲಿರುವ ಸಂಗಮೇಶ್ವರ ದೇವಸ್ಥಾನದ ಗರ್ಭ ಗುಡಿಯ ಒಳಗೆ ಪ್ರವೇಶ ಮಾಡಿ ಅಲ್ಲಿರುವ ಒಂದು ದಾನ ಪೆಟ್ಟಿಗೆಯನ್ನು ಒಡೆದು ಅದರಲ್ಲಿರುವ ಸುಮಾರು 200/- ರೂ ಹಣ ಹಾಗೂ ಇನ್ನೋಂದು ದಾನ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದ್ದು ಅದರಲ್ಲಿ 300/- ರೂ ಗಳಿರಬಹುದು ಹಾಗೂ ಭಕ್ತರು ಮಾಡಿಸಿದ 51 ತೊಲೆಯ ಬೆಳ್ಳಿಯ ಸಂಗಮೇಶ್ವರ ದೇವರ ಮುಖ ಅದರ ಅ.ಕಿ. 21,000/- ರೂ ಆಗಬಹುದು ಹಿಗೆ ಒಟ್ಟು 21,500/- ರೂ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಫಿರ್ಯಾದಿ ಕಲ್ಯಾಣರಾವ ತಂದೆ ರಾಚಯ್ಯಾ ದುಬಲಗುಂಡೆ ವಯ: 50 ವರ್ಷ, ಜ್ಯಾತಿ: ಸ್ವಾಮಿ, ಇವರು ಹಾಗೂ ದೇವಸ್ಥಾನದ ಕಾರ್ಯದರ್ಶಿ ಸಾ: ಸಂಗಮ, ತಾ: ಔರಾದ(ಬಿ) ರವರು ಕನ್ನಡದಲ್ಲಿ ಬರೆದ ದೂರು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಗುನ್ನೆ ನಂ 31/2012 ಕಲಂ 341, 324, 504 ಐಪಿಸಿ :-
ದಿನಾಂಕ 19/02/2012 ರಂದು ಫಿರ್ಯಾದಿ ವಿಲಾಸ ತಂದೆ ರಾಮ ಮೊದಲವಾಡ ಸಾ: ಇಲ್ಲ್ಯಾಳ ಇತನು ಗ್ರಾಮದ ಸರಕಾರಿ ಶಾಲೆ ಮುಂದಗಡೆಯಿಂದ ಹೋಗುತ್ತಿದ್ದಾಗ ಆರೋಪಿ ದೌಲ ತಂದೆ ಮಾದು ಮಾಳಗೆ ಸಾ: ಇಲ್ಲ್ಯಾಳ ಇತನು ಫಿಯರ್ಾದಿಗೆ ಅಕ್ರಮವಾಗಿ ತಡೆದು ನೀನು ತಿಪ್ಪೆ ಹಾಕಿದ ಜಾಗೆ ಸರಕಾರಿ ಪ್ಲಾಟ ಬಿದ್ದರಿಂದ ನಿನ್ನ ತಿಪ್ಪೆ ಜಾಗೆ ತೇಗೆದಿದ್ದು ಆರೋಪಿತನು ಫಿರ್ಯಾದಿಯ ತಿಪ್ಪೆ ಜಾಗೆಯಲ್ಲಿ ತಿಪ್ಪೆ ಹಾಕುತ್ತೇನೆ ಅಂತ ಅವಾಚ್ಯ ಶಬ್ದಗಳಿಂದ ಬ್ಶೆದು, ಕಲ್ಲಿನಿಂದ ತಲೆ ಮೇಲೆ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡೆಸಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡ ಪೊಲೀಸ್ ಠಾಣೆ ಗುನ್ನೆ ನಂ 13/2012 ಕಲಂ 279, 337, 338 ಐಪಿಸಿ :-
ದಿನಾಂಕ 19-02-2012 ರಂದು ಫಿರ್ಯಾದಿ ನರಸಿಂಗರಾವ ತಂದೆ ಶಿವರಾಮ್ ವಯ: 46 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಅಷ್ಟೂರ್ ಇತನು ತನ್ನ ಮಗನಾದ ನಿಲೇಶ ಇತನ ಜೊತೆಯಲ್ಲಿ ತನ್ನ ಮೋಟರ್ ಸೈಕಲ್ ನಂ. ಕೆಎ- 38/ಎಲ್-4885 ನೇದರ ಮೇಲೆ ಬೀದರ ಮಾರ್ಗವಾಗಿ ಕೋನಮೇಳಕುಂದಾ ಗ್ರಾಮಕ್ಕೆ ಹೋಗುತ್ತಿರುವಾಗ ಅತಿವಾಳ ಕ್ರಾಸ ದಾಟಿದ ನಂತರ ಅಕ್ವಾಮಾಯೀನ್ ನೀರಿನ ಕಾರ್ಖಾನೆಯ ಮುಂದೆ ಫಿರ್ಯಾದಿ ತನ್ನ ಸೈಡದಿಂದ ಮೋಟರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಎದುರಗಡೆಯಿಂದ ರಾಂಗ ಸೈಡ್ದಿಂದ ಆರೋಪಿ ಮೋಟರ್ ಸೈಕಲ್ ನಂ ಕೆಎ-39/ಜೆ-9086 ನೇದರ ಚಾಲಕನಾದ ಮಾರುತಿ ತಂದೆ ಮಾಣೀಕ ವಡ್ಡರ ವಯ: 24 ವರ್ಷ, ಜಾತಿ: ವಡ್ಡರ, ಸಾ: ವಡ್ಡರ ಕಾಲೋನಿ ಬೀದರ ಇತನು ತನ್ನ ಮೋಟರ್ ಸೈಕಲ್ನ್ನು ಅತಿ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ್ ಸೈಕಲಗೆ ಡಿಕ್ಕಿ ಮಾಡಿದ ಪ್ರಯುಕ್ತ ಫಿಯರ್ಾದಿಯ ತಲೆಯ ಎಡಭಾಗದಲ್ಲಿ ಗಟಾಯಿಗೆ ರಕ್ತಗಾಯವಾಗಿ ಮುಂದಿನ ಎರಡು ಹಲ್ಲುಗಳು ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯ ಮಗನಾದ ನಿಲೇಶ ಇತನಿಗೆ ಸಾದಾ ರಕ್ತ ಮತ್ತು ಗುಪ್ತಗಾಯವಾಗಿರುತ್ತದೆ, ಆರೋಪಿತನ ಹಿಂದೆ ಕುಳಿತ ವ್ಯಕ್ತಿಗೂ ಸಹ ಸಾದಾ ರಕ್ತ ಹಾಗೂ ಗುಪ್ತಗಾಯಗಳಾಗಿರುತ್ತವೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ 41/2012 ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಆಕ್ಟ್ :-
ದಿನಾಂಕ 19/02/2012 ರಂದು ಫಿರ್ಯಾದಿ ಮ.ಮೈನೊದ್ದಿನ್ ತಂದೆ ಮ.ಮಹೇಮೂದ ಅಲಿ ಇನಾಮದಾರ ಸಾ: ಹುಡಗಿ ಇತನು ಹುಡಗಿ ಗ್ರಾಮದಿಂದ ತನ್ನ ಮೊಟಾರ್ ಸೈಕಲ್ ಮೇಲೆ ಹುಮನಾಬಾದಕ್ಕೆ ಬರುತ್ತಿರುವಾಗ ಜಹೀರಾಬಾದ ಕಡೆಯಿಂದ ಆರೋಪಿ ಐಚರ ಟೆಂಪೊ ನಂ ಎಂಹೆಚ್-25/ಯು-1095 ನೇದರ ಚಾಲಕ ತನ್ನ ಹಿಂದೆ ಒಂದು ಸ್ಕಾರಪಿಯೊ ನಂ ಎಂಹೆಚ್-13/ಎಜೆ-7171 ನೇದಕ್ಕೆ ಟೋಚನ ಮಾಡಿಕೊಂಡು ಹುಮನಾಬಾದ ಕಡೆಗೆ ಬರುತ್ತಿರುವಾಗ, ಸದರಿ ಟೆಂಪುವಿನ ಹಿಂದೆ ಫಿರ್ಯಾದಿ ತನ್ನ ಮೊಟಾರ್ ಸೈಕಲ್ ತೆಗೆದುಕೊಂಡು ಬರುತ್ತಿರುವಾಗ ರಾ.ಹೆ.9 ರ ಮೇಲೆ ಹುಡಗಿ ಗ್ರಾಮದ ಜನತಾನಗರ ಹತ್ತಿರ ಬಂದಾಗ ಆರೋಪಿಯು ತನ್ನ ವಾಹನವನ್ನು ಅತಿ ಜೋರಾಗಿ ಮತ್ತು ಬೇಜವಾಬ್ದಾರಿಯಿಂದ ನಡೆಸುತ್ತ ತನ್ನ ಎದುರಿನಿಂದ ಹೋಗುತ್ತಿದ್ದ ಒಂದು ಲಾರಿಗೆ ಸೈಡ ಹೊಡೆದು ತನ್ನ ಸೈಡ ಬಿಟ್ಟು ರೋಡಿನ ಬಲಕ್ಕೆ ಹೋಗಿ ಹುಮನಾಬಾದ ಕಡೆಯಿಂದ ಬರುತ್ತಿದ್ದ ಫಿರ್ಯಾದಿಯ ತಮ್ಮನಾದ ಮ್ರತ ಮಹ್ಮದ ಮಹೇಬೂಬಲಿ ತಂದೆ ಮ.ಮಹೇಮೂದಅಲಿ ಇನಾಮದಾರ ವಯ: 40 ವರ್ಷ, ಸಾ: ಹುಡಗಿ ಇತನಿಗೆ ಡಿಕ್ಕಿ ಹೊಡೆದು ತನ್ನ ಟೆಂಪೊ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಮ್ಮನ ತಲೆಗೆ, ಮುಖಕ್ಕೆ ಭಾರಿ ರಕ್ತ ಗಾಯಗಳಾಗಿ ಚಿದಿಯಾಗಿದ್ದು, ಎಡ ಮುಂಗೈಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು ಮತ್ತು ಎಡ ಕಾಲಿನ ಹೆಬ್ಬೇರಳಿಗೆ ರಕ್ತಗಾಯವಾಗಿರುತ್ತದೆ, ನಂತರ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ದವಾಖಾನೆಗೆ ತರುವಾಗ ದವಾಖಾನೆಯ ಗೇಟಿನಲ್ಲಿ ಮೃತ ಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ 19/2012 ಕಲಂ 143, 147, 341, 323, 504 ಜೊತೆ 149 ಐಪಿಸಿ :-
ದಿನಾಂಕ 19-02-2012 ರಂದು ಫಿರ್ಯಾದಿತಳಾದ ಉಷಾ ತಂದೆ ಜೈಹಿಂದ ಬಟಗೇರಾ ಸಾ: ಕಲ್ಲಖೋರಾ ಇಕೆಯು ನೀರು ತರಲು ತನ್ನ ಚಿಕ್ಕಪ್ಪನ ಮಗಳಾದ ರೇಷ್ಮಾ ಇಕೆಯ ಜೊತೆಯಲ್ಲಿ ಹೋದಾಗ ಅಲ್ಲಿ ಆರೋಪಿತರಾದ ಭಾರತಬಾಯಿ ಗಂಡ ಮಾಣಿಕ ಇನ್ನೂ ಐದು ಜನರು ಎಲ್ಲರೂ ಸಾ: ಕಲ್ಲಖೊರಾ ಇವರೆಲ್ಲರೂ ಸೇರಿ ವಾದ-ವಿವಾದ ಮಾಡಿ ಜಗಳ ಮಾಡುವಾಗ ಫಿರ್ಯಾದಿತಳು ಹೋಗಿ ಬಿಡಿಸಲು ಅವರೆಲ್ಲರೂ ಸೇರಿ ರೇಷ್ಮಾ ಇವಳಿಗೆ ಸುಧೀರ ಇವನು ಸರಸ್ವತಿಯ ಮದುವೆ ಆಗಲಾರದ ಬಗ್ಗೆ ಧನಸಹಾಯ ಮಂಜೂರು ಮಾಡಲು ರೂಪಾಯಿ ಕೊಟ್ಟಿಲ್ಲ ಅಂತ ರೇಷ್ಮಾಳಿಗೆ ಕೈಯಿಂದ ಎದೆಯ ಮೇಲೆ ಒದ್ದಿರುತ್ತಾರೆ, ತೆಲೆಯ ಮೇಲೆ ಹೊಡೆದಿರುತ್ತಾರೆ, ಇದನ್ನು ನೋಡಿ ಬಡಿಸಲು ಹೋದಾಗ ಆರೋಪಿತರು ಫಿರ್ಯಾದಿತಳಿಗೆ ಮನೆ ಕಡೆಗೆ ಓಡಲಾರದಂತೆ ಅಕ್ರಮ ತಡೆ ಮಾಡಿ ಕೈಯಿಂದ ಹೋಡೆ ಬಡೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ 18/2012 ಕಲಂ 341, 323, 504 ಜೊತೆ 34 ಐಪಿಸಿ :-
ದಿನಾಂಕ 19-02-2012 ರಂದು ಫಿರ್ಯಾದಿತಳಾದ ಸರಸ್ವತಿ ಗಂಡ ಮಾರುತಿ ಬಿರಾದಾರ ಸಾ: ಕಲ್ಲಖೊರಾ ಇಕೆಯು ನೀರಿಗೆ ಹೋದಾಗ ಸುಧೀರನ ಕಾಕನ ಮಗಳಾದ ಆರೋಪಿ ರೇಷ್ಮಾ ತಂದೆ ಸುರೇಶ ಬಡಗೇರಾ ಇನ್ನೂ ಮೂರು ಜನರು ಎಲ್ಲರೂ ಸಾ: ಕಲ್ಲಖೊರಾ ಇವರೆಲ್ಲರೂ ಫಿರ್ಯಾದಿತಳ ಜೋತೆ ಸದರಿ ವಿಷಯದ ಬಗ್ಗೆ ಜಗಳ ತೆಗೆದು ನಿನಗೆ ಯಾವ ರೂಪಾಯಿ ಕೊಡುವದಿದೆ, ನಿನಗೆ ನೋಡಿ ಕೋಳ್ಳುತ್ತೆವೆ ಅಂತ ಜಗಳ ಮಾಡುವ ಶಬ್ದ ಹೇಳಿ ಉಳಿದ ಆರೋಪಿತರು ಓಡಿ ಬಂದು ಫಿರ್ಯಾದಿತಳಿಗೆ ಕೈಯಿಂದ ಹೋಡೆದು, ಕಾಲಿನಿಂದ ಹೋಟ್ಟೆಯಲ್ಲಿ ಒದ್ದಿರುತ್ತಾರೆ, ಸದರಿ ಜಗಳದ ಗುಲ್ಲು ಕೇಳಿ ಫಿಯರ್ಾದಿತಳ ಅತ್ತಿಗೆ ಪದ್ಮಾವತಿ ಮತ್ತು ಕಾಂಚನಾ ಇವರು ಬಂದು ಜಗಳ ಬಿಡಿಸಲು ಹೋದಾಗ ಅವರಿಗೂ ಸಹ ಅವಾಚ್ಚ ಶಬ್ದಗಳಿಂದ ಬೈದ್ದು, ಹೋಡೆ ಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾರೆ ಮತ್ತು ಮನೆಗೆ ಹೋಗದಂತೆ ಅಕ್ರಮ ತಡೆ ಮಾಡಿ ಹೋಡೆದಿರುತ್ತಾರೆಂದು ಕೊಟ್ಟ ಫಿರ್ಯಾದಿತಳ ಹೇಳಿಕೆ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರ ಪೊಲೀಸ್ ಠಾಣೆ ಗುನ್ನೆ ನಂ 22/2012 ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಆಕ್ಟ :-
ದಿನಾಂಕ 19/02/2012 ರಂದು ಫಿರ್ಯಾದಿ ಓಂಪ್ರಕಾಶ ತಂದೆ ರಘುನಾಥ ರೊಟ್ಟಿ ವಯ: 47 ವರ್ಷ, ಸಾ: ಬಸವೇಶ್ವರ ಚೌಕ ಭಾಲ್ಕಿ ಇವರು ಬೀದರಕ್ಕೆ ಹೋಗಿ ರಾತ್ರಿ ವೇಳೆಯಲ್ಲಿ ಆಂದ್ರ ಬಸ್ಸ ನಂ ಎಪಿ-11/ಝಡ್-2470 ನೇದ್ದರಲ್ಲಿ ಕುಳಿತು ಭಾಲ್ಕಿಗೆ ಬರುವಾಗ ಸದರಿ ಬಸ್ಸಿನ ಚಾಲಕನಾದ ಆರೋಪಿ ತನ್ನ ಬಸ್ಸ ಅತೀವೇಗ ಹಾಗು ನಿಷ್ಕಾಳಜೀತನದಿಂದ ನಡೆಸಿ ಬೀದರ-ಭಾಲ್ಕಿ ರೋಡಿನ ಮೇಲೆ ಅಂದರೆ ಧನ್ನೂರ ತಾಂಡೆಯ ಶಿವಾರದ ಇಳಿಜಾರಿನಲ್ಲಿ ಬಸ್ಸನ್ನು ಒಮ್ಮೆಲೆ ಪಲ್ಟಿ ಮಾಡಿದರಿಂದ, ಫಿರ್ಯಾದಿಗೆ ಹಾಗೂ ಇತರೆ ಪ್ರಯಾಣಿಕರಿಗೆ ಭಾರಿ ರಕ್ತ ಹಾಗು ಗುಪ್ತಗಾಯಗಳಾಗಿರುತ್ತವೆ, ಹಾಗು ಆರೋಪಿಯು ಬಸ್ಸ ಪಲ್ಟಿ ಮಾಡಿ ಸ್ಥಳದಿಂದ ಓಡಿಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment