Police Bhavan Kalaburagi

Police Bhavan Kalaburagi

Friday, February 17, 2012

GULBARGA DIST REPORTED CRIME



ಕಾರಿನಲ್ಲಿಟ್ಟಿದ್ದ 33 ತೋಲಿ, 7 ಗ್ರಾಂ ಬಂಗಾರದ ಆಭರಣ ಕಳ್ಳತನ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ:
ಶ್ರೀ ಡಾಃ ವಿಜಯಕುಮಾರ ತಂದೆ ಶಂಕರರಾವ ಕಟ್ಟಿಕೇರಿ ಉಃ ಸರ್ಜನ್ ಸಾಃ ಪ್ಲಾಟ ನಂ. 132 ಜಿ.ಡಿ.ಎ ಕಾಲೋನಿ ವಿರೇಂದ್ರ ಪಾಟೀಲ ನಗರ ಸೇಡಂ ರೋಡ ಗುಲಬರ್ಗಾರವರು ನಾನು ದಿನಾಂಕಃ 17/02/2012 ರಂದು ಮದ್ಯಾಹ್ನ ನನ್ನ ಕಾರ ನಂ. ಕೆ.ಎ 32 ಎನ್ 217 ತೆಗೆದುಕೊಂಡು ಎಂ.ಆರ್ ಮೆಡಿಕಲ್ ಕಾಲೇಜಿಗೆ ಹೋಗಿ ಕೆಲಸ ಮುಗಿಸಿಕೊಂಡು ನಮ್ಮ ಸಂಬಂಧಿಕರ ಲಗ್ನಕ್ಕೆ ಹೋಗುವ ಸಂಬಂಧ ಕರ್ನಾಟಕ ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ಬಂಗಾರದ ಆಭರಣಗಳು ಅಂದಾಜು ತೂಕ 33 ತೊಲೆ 7 ಗ್ರಾಂ ಅಃಕಿಃ 8,50,000/- ರೂ. ಬೆಲೆ ಬಾಳುವುದನ್ನು ತೆಗೆದುಕೊಂಡು ಕಾರಿನ ಡ್ಯಾಶ್ ಬೋರ್ಡನಲ್ಲಿ ಇಟ್ಟು ಕಾರ ತೆಗೆದುಕೊಂಡು ಮನೆಗೆ ಕಡೆಗೆ ಬರುತ್ತಿದ್ದೆ. ಮದ್ಯದಲ್ಲಿ ಸಿಂಡಿಕೇಟ್ ಬ್ಯಾಂಕ್ ಎದುರುಗಡೆ ಕಾರ್ ನಿಲ್ಲಿಸಿ ಕಾರಿಗೆ ಸೆಂಟರ್ ಲಾಕ್ ಮಾಡಿ ಬ್ಯಾಂಕಿನಲ್ಲಿ ಹೋದೆನು. ಸ್ವಲ್ಪ ಹೊತ್ತಿನಲ್ಲಿ ನನಗೆ ಪರಿಚಯವಿದ್ದ ಉದಯ ರೇಶ್ಮಿ ಇವರು ನಿಮ್ಮ ಕಾರ್ ಗ್ಲಾಸ್ ಯಾರೋ ಒಬ್ಬ ಒಡೆದಿದ್ದು ಕಾರಿನಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿತ್ತಿದ್ದಾರೆಂದು ಕಿರುಚಿದನು. ನಾನು ಹೊರಗೆ ಬರುವಷ್ಟರಲ್ಲಿ ಹಿರೋ ಹೊಂಡಾ ಬೈಕ್ ಮೇಲೆ ಇಬ್ಬರೂ ಫರಾರಿಯಾದರು. ಬ್ಯಾಗನಲ್ಲಿ ಇಟ್ಟಿದ್ದ ಯಾರೋ ಕಳ್ಳರು ನನ್ನ ಕಾರಿನ ಗ್ಲಾಸ ಒಡೆದು ಕಾರಿನಲ್ಲಿದ್ದ ಬಂಗಾರದ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 16/2012 ಕಲಂ. 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

No comments: