ಅಪಹರಣ ಪ್ರಕರಣ:
ಚಿತ್ತಾಪೂರ ಠಾಣೆ :ಶ್ರೀ ಶರಣಪ್ಪ ತಂದೆ ನಿಂಗಪ್ಪ ಪುಜಾರಿ ಸಾ:ಕದ್ದರಗಿ ರವರು ನನ್ನ ಮಗಳಾದ ರೇಣುಕಾ ವಯ:15 ವರ್ಷ ಇವಳಿಗೆ ಈಗ ಒಂದು ವರ್ಷದ ಹಿಂದೆ ಅನ್ವರ ತಂದೆ ಮಹೆಬೂಬ ಪಿಂಜಾರ ಇವನು ನನ್ನ ಮಗಳಿಗೆ ಆಗಾಗ ನೀರು ತರಲು ಹೋದಾಗ ಮತ್ತು ಹೊರಗೆ ಕೆಲಸಕ್ಕೆ ಹೋಗುವಾಗ ನನ್ನ ಮಗಳಿಗೆ ನೋಡಿ ಚುಡಾಯಿಸುವದು, ಮಾಡುತ್ತಿದ್ದು ಈ ವಿಷಯ ನನಗೆ ತಿಳಿದು ಅನವರ ಇವನಿಗೆ ಮತ್ತು ಅವನ ತಂದೆ ತಾಯಿಗೆ ಈ ರೀತಿ ಮಾಡುವದು ಸರಿಯಲ್ಲ ಅಂತಾ ತಿಳಿಸಿರುತ್ತೆನೆ ಆದರೆ ಆತನ ತಂದೆ ತಾಯಿಯವರು ನನ್ನ ಮಗ ಗಂಡಸು ಇದ್ದಾನೆ ನಿನ್ನ ಮಗಳಿಗೆ ಸರಿಯಾಗಿ ಇಟ್ಟುಕೊ ಅಂತಾ ಹೇಳಿದ್ದರು ದಿನಾಂಕ 16-2-2012 ರಂದು ಸಾಯಂಕಾಲ 7-00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ದವಾಖಾನೆಗೆ ಹೋದಾಗ ಅನ್ವರ ಇವನು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ನನ್ನ ಮಗ ಲವಕುಶ ವ;12 ವರ್ಷ ದವನು ನೋಡಿರುತ್ತಾನೆ ಅನ್ವರ ಇತನಿಗೆ ಅವನ ತಂದೆ ತಾಯಿಗಳು ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋಗಲು ಪ್ರಚೋದನೆ ನೀಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ. 17/2012 ಕಲಂ 366 (ಎ), 109, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Saturday, February 18, 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment