Police Bhavan Kalaburagi

Police Bhavan Kalaburagi

Monday, February 6, 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ನಾನು ಶ್ರೀ ಶ್ರೀಕಾಂತ ತಂದೆ ವಸಂತ ರಾಠೋಡ ಪ್ರಭಾರಿ ಮುಖ್ಯ ಗುರುಗಳು ಸ.ಮಾ.ಪ್ರಾ.ಶಾಲೆ ಮಾಡಿಯಾಳ ದಿನಾಂಕ:04-02-2012 ರಂದು ಬೆಳಿಗ್ಗೆ ಶಾಲೆಯ ಕೊಣೆಗಳ ಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು ಹೋಗಿರುತ್ತೆನೆ . ದಿನಾಂಕ: 05-02-2012 ರಂದು ಬೆಳಿಗ್ಗೆ ಮಾಡಿಯಾಳ ಗ್ರಾಮದ ಸಿದ್ದಾರಾಮ ಡಿ.ಎಡ ವಿಧ್ಯಾರ್ಥಿಯು ಶಾಲೆಯ ಆವರಣದಲ್ಲಿ ಕ್ರಿಕೇಟ ಆಡಲು ಹೋದಾಗ ಶಾಲೆಯ ಮುಖ್ಯ ಗುರುಗಳ ಕೊಣೆಯ ಬಾಗಿಲ ಕೀಲಿ ಮುರಿದಿದ್ದು ಕಂಡು ಬಂದು ನನಗೆ ತಿಳಿಸಿದಾಗ ನಾನು ಶಾಲೆಗೆ ಬಂದು ನೊಡಲಾಗಿ 10 ವರ್ಷಗಳ ಹಿಂದೆ ಸರ್ಕಾರದಿಂದ ಸರಬರಾಜು ಮಾಡಿದ ಸ್ಯಾಮಸಾಂಗ ಕಂಪನಿಯ 53 ಇಂಚಿನ ಕಲರ ಟಿ.ವಿ ಅ.ಕಿ 10000/- ರೂಪಾಯಿ ಕಿಮ್ಮತ್ತಿನದ್ದನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ನಿಜವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಯಲ್ಲಪ್ಪಾ ತಂದೆ ಸಿದ್ದಪ್ಪಾ ಮಾಂಗ ಸಾ: ಇಟಗಾ(ಕೆ) ರವರು ನಾನು ತಂಬಾಕು ತರಲು ಹೊರಗಡೆ ಅಂಗಡಿಗೆ ಹೋಗಿದ್ದು, ತಂಬಾಕು ತಗೆದುಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಕಮಿಟಿ ಹಾಲ ಹತ್ತಿರ ನಮ್ಮ ಸಂಬಂಧಿಕರ ಪೈಕಿ ಸಿದ್ದಮ್ಮ ಮತ್ತು ನಾನು ಮಾತಾಡುತ್ತಾ ನಿಂತ್ತಿದ್ದೇವು. ಆಗ ನಮ್ಮ ಕಾಕನ ಮಗನಾದ ರಾಜು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ರಕ್ತಗಾಯ ಪಡಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದೇವಿ ಮೂರ್ತಿ ತೆಗೆದ ಪ್ರಕರಣ:
ವಾಡಿ ಪೊಲೀಸ್ ಠಾಣೆ:
ಶ್ರೀ ಅಜೀಮಸಾಬ ತಂದೆ ಇಮಾಮಸಾಬ ಮುಲ್ಲಾ ಸಾ ಸನ್ನತಿ ರವರು ನಾನು ಅರ್ಕಾಲೋಜಿ ಡಿಪಾರ್ಟಮೆಂಟದಲ್ಲಿ ಅಟೆಂಡರ ಅಂತಾ ಕೆಲಸ ಮಾಡುತ್ತಿದ್ದು ಸದರಿ ಬುದ್ದ ಮಹಾ ಸ್ಥೋಪ ನೋಡಲು ಬಹಳಷ್ಟು ಜನರು ಬಂದು ಹೊಗುತ್ತಾರೆ ಬುದ್ದ ಮಹಾ ಸ್ಥೊಪದಲ್ಲಿ ಒಂದು ದುರ್ಗಾ ದೇವಿಯ ಮೂರ್ತಿ ಇದ್ದು ಸುತ್ತ ಮುತ್ತಲಿನ ಹಳ್ಳಿಯ ಜನರು ಬಂದು ಪೂಜೆಮಾಡಿ ಹೋಗುತ್ತಾರೆ. ದಿನಾಂಕ 05-02-2012 ರಂದು ಮದ್ಯಹ್ನ 1 ಗಂಟೆಗೆ ನಾನು ಕರ್ತವ್ಯದಲ್ಲಿದ್ದಾಗ ಸೆಕ್ಯೂರೆಟಿ ಗಾರ್ಡಿನವರಾದ ಬಸವರಾಜ, ವಿಜಯ, ಶಬ್ಬಿರ, ಶಾಂತಪ್ಪಾ, ಸಂತೋಷಕುಮಾರ, ಸುನೀಲಕುಮಾರ ಎನ್ನುವರು ತಮ್ಮ ಕರ್ತವ್ಯದಲ್ಲಿದ್ದರು ಮಧ್ಯಾಹ್ನ ಸುಮಾರಿಗೆ ಒಂದು ಬಿಳಿಯ ಜೀಪ ಅದಕ್ಕೆ ಝಂಡಾ ಕಟ್ಟಿದ್ದು ನೇರವಾಗಿ ಒಳಗೆ ಪ್ರವೆಶಿಸಿ ನಿಲ್ಲಿಸಿದರು ನಂತರ ಅದರಿಂದ 7, 8 ಜನರು ಕೇಳಗೆ ಇಳಿದರು ಅಲ್ಲದೆ ಹೊರಗಡೆ ಸಹ 2 ಜೀಪ ನಿಲ್ಲಿಸಿದ್ದು ಅದರಿಂದ ಸಹ ಸುಮಾರು 20 ರಿಂದ 25 ಜನರು ಇಳಿದು ಬುದ್ದ ವಿಹಾರದಲ್ಲಿ ಬಂದರು ಅವರೆಲ್ಲರು ವಿಕ್ಷಣೆಗೆ ಬಂದಿರಬಹುದು ಅಂತಾ ನಾವು ನಮ್ಮ ಕರ್ತವ್ಯದಲ್ಲಿದ್ದಾಗ ಮರದ ಕೇಳಗಡೆ ಇರುವ ದುರ್ಗಾ ದೇವಿಯ ಗುಡಿಯ ಹತ್ತಿರ ಹೊದಾಗ ನಾವೆಲ್ಲರು ಅವರ ಹತ್ತಿರ ಹೊದೆವು ಅವರಲ್ಲಿ ಕೆಲವು ದುರ್ಗಾ ದೇವಿಗೆ ಇದ್ದು ಸಿರೆಯನ್ನು ತೆಗೆಯುತ್ತಿದ್ದಾಗ ನಮ್ಮ ಗಾರ್ಡ ವಿಜಯ ಯ್ಕಾಕೆ ತೆಗೆಯುತ್ತಿರಿ ಅಂತಾ ಕೇಳಿದರೆ ಅವರಲ್ಲಿ ಒಬ್ಬರು ಈ ಸ್ಥಳದಲ್ಲಿ ಕೇವಲ ಬುದ್ದನ ಮೂರ್ತಿ ಇರಬೆಕು ಬೇರೆ ಯಾವುದೇ ಮೂರ್ತಿ ಇರಬಾರದು ಅಂತಾ ಮೂರ್ತಿಯ ಮೇಲೆ ಇದ್ದ ಬಟ್ಟೆಗಳು ತೆಗೆಯುತ್ತಿದ್ದಾಗ ನಾನು ಹಾಗು ಸೆಕ್ಯೂರೆಟಿ ಗಾರ್ಡನವರು ಬಿಡಿಸಲು ಹೊದರೆ ಅವರೆಲ್ಲರು ನಮಗೆ ಕೈಯಿಂದ ದಬ್ಬಿಕೊಟ್ಟು ನೀವು ಇಲ್ಲಿ ನಿಂತರೆ ಸರಿ ಇಲ್ಲದಿದ್ದರೆ ನಿಮಗೆ ಒದ್ದುಬಿಡುತ್ತೆವೆ ಅಂತಾ ಭಯ ಹಾಕಿ ಜಬರ ದಸ್ತಿಯಿಂದ ದುರ್ಗಾ ದೇವಿಯ ಮೂರ್ತಿ ಮತ್ತು ದೇವಿಯ ಮೈಮೆಲೆ ಇದ್ದ ಬಟ್ಟೆಗಳು ತೆಗೆದುಕೊಂಡು ಜೀಪಿನಲ್ಲಿ ಹಾಕಿದರು ಅವರಲ್ಲಿ ಒಬ್ಬ ಕಾವಿಧಾರಿ ಬೊಳು ತಲೆಯವರಿದ್ದು ಇದ್ದು ಅವರಿಗೆ ಬೊದಿ ಧಮ್ಮ ಬಂತೊಜಿ ಅಂತಾ ಕರೆಯುತ್ತಿದ್ದರು ಅಲ್ಲದೆ ಕೆಲವರು ತಮ್ಮ ತಮ್ಮಲ್ಲಿ ಹೆಸರು ತೆಗೆದುಕೊಂಡು ನಾಗೆಂದ್ರ, ಕಿಶೋರ, ಹಣಮಂತ, ಸಂತೊಷ ಅಂತಾ ಕೂಗಾಡುತ್ತಿದ್ದರು ಜೀಪ ನಂಬರ ನೊಡಲಾಗಿ ಕೆಎ-28 ಎಮ್-8252 ಅಂತಾ ಬರೆದಿದ್ದು ಮುಂದಿನ ಗ್ಲಾಸ ಮೆಲೆ ಬುದ್ದ ಜ್ಯೋತಿ ಅಂತಾ ಬರೆದಿದ್ದು ಇರುತ್ತದೆ. ನಂತರ ಅವರೆಲ್ಲರು ಜೀಪಿನಲ್ಲಿ ಕೂಳಿತುಕೊಂಡು ಹೊರಟಾಗ ನಾವು ತಡೆದರು ಸಹ ಹಾಗೆ ಹೋಗಿರುತ್ತಾರೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಾದ ಗುಲಬರ್ಗಾದಲ್ಲಿರುವ ಸಂರಕ್ಷಣ ಸಹಾಯಕರಿಗೆ ವಿಷಯ ತಿಳಿಸಿದಾಗ ಈ ಬಗ್ಗೆ ಸಂಬಂಧಪಟ್ಟ ಪೊಲೀಸ ಠಾಣೆಗೆ ಪಿರ್ಯಾದಿ ಕೊಡಲು ತಿಳಿಸಿದ ಮೇರೆಗೆ ನಾನು ಹಾಗು ಸೆಕ್ಯೂರೆಟಿ ಗಾರ್ಡರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 21/2012 ಕಲಂ 143, 504, 153(ಎ), 295, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: