Police Bhavan Kalaburagi

Police Bhavan Kalaburagi

Tuesday, February 28, 2012

GULBARGA DIST REPORTED CRIMES



ಕೊಲೆ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ಆನಂದ ತಂದೆ ತಿಪ್ಪಣ್ಣಾ ಗುಡೂರ ಸಾ: ಕೌವಲಗಿ (ಬಿ) ಗ್ರಾಮ ತಾ:ಜಿ: ಗುಲಬರ್ಗಾ ಸಧ್ಯ ಮನೆ ನಂ. 373, 374 ಆಶ್ರಯ ಕಾಲನಿ ರಾಣೇಶಪೀರ ದರ್ಗಾ ಹತ್ತಿರ ಗುಲಬರ್ಗಾ ರವರು ನಾವು ಸುಮಾರು 9 ವರ್ಷಗಳಿಂದ ಆಶ್ರಯ ಕಾಲನಿ ಗುಲಬರ್ಗಾದಲ್ಲಿ ವಾಸವಾಗಿರುತ್ತೇವೆ. ನಮ್ಮ ತಂದೆ ತಿಪ್ಪಣ್ಣಾ ಇವರು 8-9 ವರ್ಷಗಳ ಹಿಂದೆ ಆಟೋ ನಡೆಸುತ್ತಿದ್ದು, ಆಟೋ ಮಾರಾಟ ಮಾಡಿ ಬಂದ ಹಣದಿಂದ ಕುರಿ ಖರೀದಿಸಿ, ಕುರಿ ಕಾಯುವ ಕೆಲಸ ಮಾಡುತ್ತಾ ಬಂದಿರುತ್ತಾರೆ. ದಿನಾಂಕ 24-02-12 ರಂದು ಸಾಯಂಕಾಲ ಸುಪರ ಮಾರ್ಕೆಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು. ಮರಳಿ ಮನೆಗೆ ಬರಲಿಲ್ಲಾ. ನಾವು ಹುಡುಕಾಡಿದರೂ ಸಿಗಲಿಲ್ಲಾ. ದಿನಾಂಕ 28-02-12 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾವು ಹುಡುಕಾಡುತ್ತಾ ಸ್ವಾಮಿ ಸಮರ್ಥ ಗುಡಿಗೆ ಹೋದಾಗ ರೋಡಿನ ಬದಿಯಲ್ಲಿ ಒಬ್ಬ ವ್ಯಕ್ತಿಯ ಹೆಣ ಬಿದ್ದಿದ್ದೆ ಮೃತ ದೇಹ ನೋಡಲಾಗಿ ತಲೆಯ ಪೂರ್ತಿ ಜಜ್ಜಿದಂತಾಗಿದ್ದು, ಮುಖ ಗುರುತು ಸಿಗದಂತೆ ಆಗಿದ್ದು, ಅವರ ಎದೆಯ ಮೇಲೆ ದೊಡ್ಡದಾದ ಕಲ್ಲು ಬಿದ್ದಿದ್ದು, ದೇಹವೆಲ್ಲಾ ಊಬ್ಬಿ ಕೊಳೆತು ಹುಳಗಳು ಇರುತ್ತದೆ. ನಮ್ಮ ತಂದೆ ಮೈಮೇಲಿದ್ದ ಕಪ್ಪು ಮತ್ತು ಬೂದಿ ಬಣ್ಣದ ಮಫಲರ ಮತ್ತು ಅವರ ಉದ್ದನೆಯ ಕೂದಲು, ಹಾಗೂ ಧರಿಸಿದ ಬಟ್ಟೆಗಳು ನೋಡಿ ಮೃತ ದೇಹ ಗುರುತಿಸಿದ್ದು, ನಮ್ಮ ತಂದೆಗೆ ಆಗದ ಇರುವ ಯಾರೋ ಜನರು ಯಾವುದೋ ದುರುದ್ದೇಶದಿಂದ ದೊಡ್ಡದಾದ ಕಲ್ಲು ತಲೆಯ ಮೇಲೆ ಎತ್ತಿ ಹಾಕಿ ಮುಖ ಗುರುತು ಸಿಗದಂತೆ ಕೊಲೆ ಮಾಡಿರುತ್ತಾರೆ. ಈ ಕೊಲೆಯು ದಿನಾಂಕ 24-02-12 ರಂದು ಸಂಜೆ 6-00 ಗಂಟೆಯಿಂದ ದಿನಾಂಕ 28-02-12 ರಂದು ಬೆಳಿಗ್ಗೆ 11-30 ಗಂಟೆಯ ಮಧ್ಯದ ಅವಧಿಯಲ್ಲಿ ನಡೆದಿರಬಹುದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 62/2012 ಕಲಂ 302, 201 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ಮಹ್ಮದ ಮೂಸಾ ತಂದೆ ಮಹ್ಮದ ಅಲ್ಲಾವುದ್ದಿನ ಉ: ಕೆ.ಎಸ್.ಆರ್.ಟಿ.ಸಿ ಕಂಟ್ರೋಲರ್ ಸಾ: ಪ್ಲಾಟ ನಂ. 101 ಸಿಐಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 28/02/2012 ರಂದು ಬೆಳಿಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹೋಗಿದ್ದು ನನಗೆ ಪೋನ ಮುಖಾಂತರ ಮಾಹಿತಿ ಸಿಕ್ಕಿದ್ದೆನೆಂದರೆ, ಯಾರೋ ಕಳ್ಳರು ನಮ್ಮ ಮನೆಯ ಒಳಗಡೆ ಬಂದು ಅಲಮಾರಿ ಮುರಿದು ಕಳವು ಮಾಡಲು ಯತ್ನಿಸುತ್ತಿದ್ದಾಗ ಕಾಲೋನಿಯ ಜನರು ಹಿಡಿದಿದ್ದು ನನಗೆ ಬರಲು ಹೇಳಿದ್ದರಿಂದ ನಾನು ಮನೆಗೆ ಬಂದು ನೋಡಿ ಹೆಸರು ವಿಚಾರಿಸಲಾಗಿ ಸಾಯಿಬಣ್ಣ ತಂದೆ ಅಬ್ದುಲಪ್ಪ ಸಾ: ರಾವೂರ ಅಂತಾ ಗೊತ್ತಾಗಿದ್ದು ನಾವು ಮತ್ತು ಪೊಲೀಸ್ ವಿಚಾರಿಸಲಾಗಿ ಆತನು ನಮ್ಮ ಮನೆಯ ಒಳಗೆ ಬಂದು ನನ್ನ ಹೆಂಡತಿ ಅಲ್ಲೆ ಇದ್ದರೂ ಸಹ ಅಲಮಾರಿಯನ್ನು ತೆರೆದು ಕಳವು ಮಾಡಲು ಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 17/2012 ಕಲಂ. 380, 511 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: