Police Bhavan Kalaburagi

Police Bhavan Kalaburagi

Tuesday, February 21, 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀಮತಿ. ನಾಗಮ್ಮ ಗಂಡ ಹಿರಗೆಪ್ಪ ತಗಾರೆ ವ ಯ; 75 ವರ್ಷ ಸಾ; ಜೀವಣಗಿ ಗ್ರಾಮ ತಾಜಿಗುಲಬರ್ಗಾ ರವರು ನಾನು ದಿನಾಂಕ; 20/02/2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ತಂಗಿ ನಿಂಗಮ್ಮ ಮನೆಗೆ ಹೋಗಿರುತ್ತೇನೆ. ನಿಂಗಮ್ಮಳ ಮನೆಯಲ್ಲಿ ನಾನು ಮತ್ತು ಅವಳ ಮಕ್ಕಳಾದ ಅಶೋಕ ಕೂಡಿಕೊಂಡು ಮಲಗಿಕೊಂಡಿದ್ದು ರಾತ್ರಿ 1- ಗಂಟೆಯ ಸುಮಾರಿಗೆ ನಮ್ಮ ಮನೆಯ ಕಡೆಗೆ ಯಾರೋ ಗುಜು ಗುಜು ಮಾತನಾಡುವ ಸಪ್ಪಳ ಕೇಳಿ ನಾನು, ನನ್ನ ತಂಗಿ ಮತ್ತು ಅವಳ ಮಗ ಅಶೋಕನಿಗೆ ಎಬ್ಬಿಸಿ ನಮ್ಮ ಮನೆಯ ಕಡೆಗೆ ಎದ್ದು ಹೊರಗೆ ಬರುತ್ತಿದ್ದಂತೆಯೇ ಯಾರೋ ಮೂರು ಜನರ ನಮ್ಮ ಮನೆಯಿಂದ ಓಡಿ ಹೋಗಿದ್ದು, ನಾವು ಗಾಬರಿಗೊಂಡು ಮನೆಗೆ ಹೋಗಿ ನೋಡಲು ಬಾಗಿಲಿಗೆ ಹಾಕಿದ್ದ ಕೀಲಿ ಕಪ್ಪಿ ಮುರಿದು ಕೆಳಗೆ ಬಿದ್ದಿದ್ದು, ಕಬ್ಬಿಣದ ಪೆಟ್ಟಿಗೆಯ ಕೀಲಿ ಮುರಿದು ಅದರಲ್ಲಿದ್ದ 5 ಗ್ರಾಂ ಬಂಗಾರದ ಆಭರಣ ಅಕಿ 9000= ರೂ ಗಳದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಹಾಗು ನಮ್ಮ ಮನೆಯ ಹತ್ತಿರದ ಶ್ರೀಮತಿ. ಸರದಾರಬೀ ಗಂಡ ಶಾಖಾದ್ರಿ ನಾಗೂರವಾಲೆ ಇವಳು ಸಹ ಗಾಬರಿಗೊಂಡು ನಮ್ಮ ಮನೆಯ ಹತ್ತಿರ ಬಂದು ರಾತ್ರಿ ಹೊತ್ತು ನಮ್ಮ ಮನೆಗೆ ಬೀಗ ಹಾಕಿ ಪಕ್ಕದ ರೂಮಿನಲ್ಲಿ ಮಲಗಿಕೊಂಡಿದ್ದಾಗ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಸ್ಟೀಲಿನ ನಳಪಾತ್ರೆಯಲ್ಲಿ ಕ್ಯಾರಿಬ್ಯಾಗದಲ್ಲಿ ಇಟ್ಟಿದ್ದ 10900=00 ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಳು. ಓಡಿ ಹೋದ ಮೂರು ಜನ ಕಳ್ಳರನ್ನು ನೋಡಿದಲ್ಲಿ ಗುರ್ತಿಸುತ್ತೇವೆ ಅಂತಾ ಹೇಳಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 18/2012 ಕಲಂ 457.380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ. ಪ್ರಕಾಶ ತಂದೆ ಶ್ಯಾಮರಾವ ಪಾಟೀಲ್ ವ: 65 ವರ್ಷ ಸಾ;ಬೇಲೂರ [ಕೆ] ಗ್ರಾಮ ತಾ;ಜಿ; ಗುಲಬರ್ಗಾ ರವರು ನಾವು ಊಟ ಮಾಡಿ ಮಲಗಿಕೊಂಡಿದ್ದು, ನನ್ನ ಮಗ ಸಿದ್ದಣ್ಣಗೌಡ ಪಾಟೀಲ್ ಇವರು ನಮ್ಮ ಹೊಲದಲ್ಲಿ ಮಲಗಿಕೊಳ್ಳಲು ಹೋಗಿದ್ದು, ಮಧ್ಯರಾತ್ರಿ ರಾತ್ರಿ 3-00 ಗಂಟೆಗೆ ಸಪ್ಪಳ ಕೇಳಿ ನಾನು ಎದ್ದು ನೋಡಲಾಗಿ ನಮ್ಮ ಮನೆಯ ಅಲಮೇರಾ ಇಟ್ಟಿದ್ದ ರೂಮಿನಿಂದ ಯಾರೋ ಅಪರಿಚಿತ ಮೂರು ಜನರು ಓಡಿ ಹೊರಗೆ ಓಡಿ ಹೋಗುತ್ತಿದ್ದು, ನಾನು ಗಾಬರಿಗೊಂಡು ಯಾರು ಅಂತಾ ಕೇಳುತ್ತಿದ್ದಾಗ ಆ ಮೂರು ಜನರು ಓಡಿ ನಮ್ಮ ಮನೆಯಿಂದ ಹೊರಗೆ ಹೋಗಿರುತ್ತಾರೆ. ಮನೆಯ ಅಲಮೇರಾ ಇಟ್ಟಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ 7800=00 ರೂಪಾಯಿ 2 ಮೋಬೈಲ್ ಗಳು ಹೀಗೆ ಒಟ್ಟು 23,800-00 ಗಳದ್ದು ಯಾರೋ ಕಳ್ಳರು ಮನೆಯ ಕಿಟಕಿ ಬಾಗಿಲಿನಿಂದ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವರನ್ನು ನೋಡಿದರೆ ಗುರ್ತಿಸುತ್ತೇನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 17/2012 ಕಲಂ 457. 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: