Police Bhavan Kalaburagi

Police Bhavan Kalaburagi

Friday, February 24, 2012

GULBARGA DIST REPORTED CRIMES



ಅಪಹರಣ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶಿವಬಾಯಿ ತಂದೆ ಅಶೋಕ ವ 15 ವರ್ಷ ಸಾ:ಮರತೂರ ರವರು ನಾನು ದಿನಾಂಕ-22-02-2012ರಂದು ಸಾಯಂಕಾಲ ಬಯಲು ಸ್ಥಳದಲ್ಲಿ ಶೌಚಾಲಯಕ್ಕೆ ಹೋದಾಗ ಮೌನೇಶ ತಂದೆ ನಾಗಪ್ಪಾ ಸಾ:ಮರತೂರ ಇತನು ನನಗೆ ಬಾಯಿಯಲ್ಲಿ ಕೇಕು ಒತ್ತಿ ಜೀವದ ಭಯಹಾಕಿ ಮುಗಳಗಾಂವ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿಯ ಜನರು ಆತನನ್ನು ಹಿಡಿದುಕೊಂಡು ದೂರವಾಣಿ ಮೂಲಕ ನಮ್ಮ ಗ್ರಾಮದವರಿಗೆ ತಿಳಿಸಿದ್ದರಿಂದ ನಮ್ಮ ತಂದೆ ತಾಯಿಯವರು ಬಂದು ಕರೆದುಕೊಂಡು ಬಂದಿರುತ್ತಾರೆ. ನನಗೆ ಮೋಸದಿಂದ ಅಪಹರಣ ಮಾಡಿ ಮಾನಸಿಕವಾಗಿ ಚಿತ್ರ ಹಿಂಸೆ ನೀಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ: 366(ಎ), 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಸುಗಂದಬಾಯಿ ಗಂ ದಿ:ಮಹಾದೇವ ಕಮಲಾಪೂರ ಸಾ;ಶಂಕರವಾಡಿ ರವರು ನನ್ನ ಮಗ ಶಿವಮೂರ್ತಿ ಇತನು ಮನೆಯಲ್ಲಿ ಮಲಗಿಕೊಂಡಾಗ ನಂಜಮ್ಮಾ ತಂದೆ ಶಿವಲಿಂಗಪ್ಪಾ ಇವಳು ಆಕಸ್ಮಿಕವಾಗಿ ನನ್ನ ಮಗನು ಮಲಗಿದ ಕೋಣೆಯಲ್ಲಿ ಬಂದಿರುತ್ತಾಳೆ ಆಗ ಶಶಿಕಾಂತ ತಂದೆ ಶಿವಲಿಂಗಪ್ಪಾ ಚಿತ್ತಾಪೂರ ಸಂಗಡ ಇನ್ನೂ 8 ಜನರು ಸಾ: ಎಲ್ಲರೂ ಶಂಕರವಾಡಿ ಗ್ರಾಮದವರು ಬಂದು ನನ್ನ ಮಗನು ಮಲಗಿದ ಕೋಣೆಯ ಹೊರಬಾಗಿಲು ಕೀಲಿ ಹಾಕಿರುತ್ತಾರೆ. ಆಗ ನನ್ನ ಮಗನು ಗಾಬರಿಗೊಂಡು ಹೊರಗಡೆ ಬರಲು ಹೋಗಲು ಯತ್ನಿಸುತ್ತಿದ್ದಾಗ ಹುಡುಗಿಯ ಸಂಬಂಧಿಕರಾದ ಶಶಿಕಾಂತ ತಂದೆ ಶಿವಲಿಂಗಪ್ಪಾ ಮತ್ತು ಸಂಗಡ ಇನ್ನೂ 8 ಜನರು ಕೂಡಿಕೊಂಡು ನನ್ನ ಮಗನಿಗೆ ಅಪಹರಿಸಿಕೊಂಡು ಹೋಗಿ ಎಲ್ಲೋ ಬಚ್ಚಿಟ್ಟಿದ್ದಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2012 ಕಲಂ 363, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಸಂಗೀತಾ ತಂದೆ ಮಲ್ಲಿಕಾರ್ಜುನ ಚನಿಗುಂಡೆ ಸಾ: ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನೆ ಗೆಳತಿ ಶ್ರೀದೇವಿ ಸಿ.ಐ.ಬಿ ಕಾಲೋನಿಯ ಈಶ್ವರ ಇಂಗಿನ್ ಎಂಬುವವರ ಮನೆಯಲ್ಲಿ ವಿದ್ಯಾಬ್ಯಾಸ ಮಾಡುವ ಸಲುವಾಗಿ ಬಾಡಿಗೆ ಮನೆ ಮಾಡಿದ್ದು, ಸುಮಾರು 3 ತಿಂಗಳ ಹಿಂದೆ ನಮ್ಮ ಅಕ್ಕ ಮೃತ ಪಟ್ಟಿದ್ದರಿಂದ ನಮ್ಮ ಮನೆ ಖಾಲಿಯಿರುತ್ತದೆ. ನನ್ನ ತಂದೆ ತಾಯಿ ಯಾದಗಿರಿಯಲ್ಲಿರುತ್ತಾರೆ. ಸದರಿ ಮನೆಯು ಬಾಡಿಗೆ ಕೂಡುವ ನಿಮಿತ್ಯ ಸುಣ್ಣ ಬಣ್ಣ ಮಾಡಿಸುತ್ತಿದ್ದು, ಈಗ 2 ದಿನಗಳ ಹಿಂದೆ ನಾನು ಮನೆಯಲ್ಲಿಟ್ಟ ಬೆಳ್ಳಿ, ಬಂಗಾರ ಆಭರಣಗಳು ಬಾಡಿಗೆ ಮನೆಯಲ್ಲಿ ತಂದು ಇಟ್ಟಿದ್ದು ದಿನಾಂಕ 23/02/2012 ರಂದು ನಾನು ಹಾಸ್ಟೇಲದಲ್ಲಿ ವಿದ್ಯಾಬ್ಯಾಸ ನಿಮಿತ್ಯ ಉಳಿದು ಕೊಂಡಿದ್ದು ನನ್ನ ಗೆಳತಿ ಶ್ರೀದೇವಿ ಇವರು ಸಾಯಂಕಾಲ 5 ಗಂಟೆಗೆ ರೂಮಿಗೆ ಕೀಲಿ ಹಾಕಿಕೊಂಡು ಹೋಗಿರುತ್ತಾಳೆ, ದಿನಾಂಕ 24/02/2012 ರಂದು ಮುಂಜಾನೆ ನನ್ನ ಗೆಳತಿ ಯಾರೋ ಕಳ್ಳರು ನಾವು ವಾಸಿಸುವ ಬಾಡಿಗೆ ಮನೆಯ ಕೀಲಿ ಮುರಿದಿರುತ್ತಾರೆ ಅಂತಾ ಪೋನ ಮಾಡಿ ತಿಳಿಸಿದ್ದರಿಂದ ನಾನು ಬಂದು ನೋಡಲು ಸುಟಕೇಸದಲ್ಲಿಟ್ಟ ಬಂಗಾರ, ಬೆಳ್ಳಿಯ ಆಭರಣಗಳು ಸುಮಾರು 3,47,700/- ರೂ ಬೇಲೆ ಬಾಳುವವು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 15/2012 ಕಲಂ. 457,380 ಐಪಿಸಿ ನೇದ್ದರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಹಣಮಂತರಾಯ @ ಸೂರ್ಯಕಾಂತ ತಂದೆ ಮಲ್ಕಪ್ಪ ಕಂಬಾರ ಸಾಸಕ್ಕರಗಾ ತಾಆಳಂದ ರವರು ತಮ್ಮನಾದ ಪರಮೇಶ್ವರ ಇತನು ದಿನಾಂಕ 23/02/2012 ರಂದು ರಾತ್ರಿ ಮುಂಬಯಿಗೆ ಹೋಗುವ ಕುರಿತು ಆಳಂದ ಬಸ್ಸ ನಿಲ್ದಾಣದಕ್ಕೆ ಹೋಗ ಬೇಕಾಗಿರುವದರಿಂದ ನನ್ನ ಮಗ ಶ್ರೀಶೈಲ ಇತನು ಪರಮೇಶ ಈತನಿಗೆ ಆಳಂದ ಬಸ್ಸ ನಿಲ್ದಾಣಕ್ಕೆ ಬಿಡಲು ನಮ್ಮ ಗ್ರಾಮದ ಶಿವುಕುಮಾರ ಶಿರೂರಕರ್ ಇವರ ಮೋಟರ ಸೈಕಲ ನಂ ಕೆಎ 32 Y. 8001 ನೇದ್ದು ತಗೆದುಕೊಂಡು ಹೋಗಿರುತ್ತಾನೆ .ನನ್ನ ಮಗನು ಪರತಮೇಶ್ವರ ಇತನಿಗೆ ಮುಂಬೈಗೆ ಹೋಗಲು ರಾತ್ರಿ ಆಳಂದಕ್ಕೆ ಬಿಟ್ಟು ಬರುವಾಗ ಎದುಗಡೆಯಿಂದ ಯಾವದೋ ವಾಹನ ಚಾಲಕ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಎದುರುಕಡೆಯಿಂದ ಡಿಕ್ಕಿಹೊಡೆದಿದರಿಂದ ಮುಖಕೆ ಭಾರಿ ರಕ್ತಗಾಯವಾಗಿ ಕೈ ಕಾಲು ಹೊಟ್ಟೆಗೆ ತರಚಿದ ಗಾಯಾವಾಗಿ ಮತ್ತು ಎಡಗಾಲು ಪಾದದ ಮೇಲೆ ಮುರಿದು ರಕ್ತಗಾಯಾವಾಗಿ ಮೃತಪಟ್ಟಿದ್ದು ಈ ಘಟನೆಯು ದಿನಾಂಕ 23/02/2012 ರಾತ್ರಿ ವೇಳೆಯಲ್ಲಿ ಜರಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 41 /12 ಕಲಂ 279.304[ಎ] ಐಪಿಸಿ ಸಂ 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: